ಸಮಸ್ಯೆಗಳು ಜೀವನಕ್ಕೆ ಭಾರವಾಗಬಾರದು ಅದನ್ನು ಸವಾಲಾಗಿ ಸ್ವೀಕರಿಸಬೇಕು:ವಿಶ್ವೇಶ್ವರ ಹೆಗಡೆ ಕಾಗೇರಿ

ಸಿದ್ದಾಪುರ:- ಸಮಸ್ಯೆಗಳು ಜೀವನಕ್ಕೆ ಭಾರವಾಗಬಾರದು ಅದನ್ನು ಸವಾಲಾಗಿ ಸ್ವೀಕರಿಸಬೇಕು. ಅಂಗನವಾಡಿ ಕೇಂದ್ರಗಳು ತಾಯಂದಿರ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕೇಂದ್ರಗಳಾಗಬೇಕು ಎಂದು ವಿಧಾನಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಅವರು ಪಟ್ಟಣದ ಅಡಿಕೆ ಭವದಲ್ಲಿ ಶಿಶು ಅಭಿವೃದ್ಧಿ ಯೋಜನೆ ಇಲಾಖೆಯ ಪೋಷಣ ಅಭಿಯಾನ, ವಿಕಲ ಚೇತನರಿಗೆ ತ್ರಿಚಕ್ರ ವಾಹನ ವಿತರಣೆ, ಸುಕನ್ಯಾ ಸಮೃದ್ದಿ ಯೋಜನೆಯ ಪಾಸ್ ಬುಕ್‌ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗರ್ಭಿಣಿ ಹಾಗೂ ಬಾಣಂತಿ ಸ್ತ್ರೀಯರು ಸದೃಢ ಆಗಿರಬೇಕು ಅವರಲ್ಲಿ ಯಾವುದೇ ರೀತಿಯ ಪೌಷ್ಟಿಕಾಂಶದ ಕೊರತೆ ಇರಬಾರದು ಇದನ್ನು ಲಕ್ಷದಲಿಟ್ಟುಕೊಂಡು ಪೋಷಣ ಅಭಿಯಾನ ಕಾರ್ಯಕ್ರಮ ಘೋಷಣೆ ಮಾಡಿ ಅನುಷ್ಠಾನಕ್ಕೆ ತರಲಾಗಿದೆ ಎಂದರು

ಸಿಡಿಪಿಓ ಪೂರ್ಣಿಮಾ ದೋಡ್ಮನಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶೋಭಾ ನಾಯ್ಕ ಪ್ರಾರ್ಥಿಸಿದರು, ನೀಲಮ್ಮ ನಾಯ್ಕ ನಿರೂಪಿಸಿದರು.

ಕೃಷಿ ಇಲಾಖೆ, ಹೈನುಗಾರಿಕೆ ಇಲಾಖೆ , ರೇಷ್ಮೆ ಇಲಾಖೆ ಹಾಗು ತೋಟಗಾರಿಕೆ ಇಲಾಖೆಯಿಂದ ಈ ಎಲ್ಲ ಇಲಾಖೆಗಳಿಗೆ ಸರ್ಕಾರದಿಂದ ಸಾಕಷ್ಟು ಕಾರ್ಯ ಕ್ರಮ ಗಳಿವೆ ಎಂದರು. ಪಟ್ಟಣ ಪಂಚಾಯಿತಿ ಸದಸ್ಯರಾದ ಮಾರುತಿ ನಾಯ್ಕ, ಗುರುರಾಜ ಶಾನಬಾಗ, ನಾಮನಿರ್ದೇಶನ ಸದಸ್ಯ ರಾದ ಸುರೇಶ್ ನಾಯ್ಕ, ಮಂಜುನಾಥ ಭಟ್, ರಾಜೇಂದ್ರ ಕಿಂದ್ರಿ, ತಹಶಿಲ್ದಾರ ಸಂತೋಷ ಭಂಡಾರಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ರಾವ್, ಅಡಿಕೆ ಮನೆಯ ಆರ್ ಎಸ್ ಹೆಗಡೆ ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top