ಹಣವಂತನಿಗಿಂತ ಗುಣವಂತ ಶ್ರೇಷ್ಠ ಸಿವಿಲ್ ನ್ಯಾಯಾಧೀಶರಾದ ತಿಮ್ಮಯ್ಯ ಜಿ

ಸಿದ್ದಾಪುರ: ಹಣವಂತನಿಗಿಂತ ಗುಣವಂತ ಶ್ರೇಷ್ಠ. ಹಾಗಾಗಿ ಗುಣವಂತರು ಎಲ್ಲಾ ಕಾಲದಲ್ಲಿಯೂ ಅಜರಾಮರರಾಗಿರುತ್ತಾರೆ. ಅಬ್ದುಲ್ ಕಲಾಂ ರವರು ಈ ಸಾಲಿನಲ್ಲಿ ನಿಲ್ಲುತ್ತಾರೆ ಎಂದು
ಸಿವಿಲ್ ನ್ಯಾಯಾಧೀಶರಾದ ತಿಮ್ಮಯ್ಯ ಜಿ ರವರು ಅಭಿಪ್ರಾಯ ಪಟ್ಟರು.


ಅವರು ಪಟ್ಟಣದ ಹಾಳದಕಟ್ಟಾದ ಮುರುಘರಾಜೇಂದ್ರ ಅಂಧರ ಶಾಲಾ ಸಭಾಂಗಣದಲ್ಲಿ ನಡೆದ
ಆಶಾಕಿರಣ ಟ್ರಸ್ಟ್‌, ಲಯನ್ಸ್ ಶತಮಾನೋತ್ಸವ ಸ್ಮರಣೆಯ ತರಬೇತಿ ಕೇಂದ್ರ ಮತ್ತು ಲಯನ್ಸ್ ಕ್ಲಬ್ ಸಹಯೋಗದಲ್ಲಿ ಡಾ, ಏಪಿ ಜೆ ಅಬ್ದಲ್ ಕಲಾಂ ಜನ್ಮ ದಿನೋತ್ಸವದ ಅಂಗವಾಗಿ ಸದ್ಭಾವನಾ ದಿನಾಚರಣೆ ಮತ್ತು ಸದ್ಭಾವನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಲಾಂ ರವರು ಇಡೀ ಜಗತ್ತಿನಲ್ಲಿ ವಿಶೇಷ ವಾದ ವ್ಯಕ್ತಿತ್ವ ಹೊಂದಿದ್ದರು.
ಅಂತರ್ ದೃಷ್ಟಿ ಇದ್ದರೆ ಮಾತ್ರ ನಾವು ದೃಷ್ಟಿ ವಂತರು. ವ್ಯಕ್ತಿತ್ವ ಸರಳವಿದ್ದಾಗ ಮಾತ್ರ ವ್ಯಕ್ತಿ ಶಾಶ್ವತ ವಾಗುತ್ತಾನೆ ಎಂದರು.

ಆಶಾಕಿರಣ ಟ್ರಸ್ಟ್ ನ ಆಧ್ಯಕ್ಷ ರವಿ ಹೆಗಡೆ ಹೂವಿನಮನೆ ಅಧ್ಯಕ್ಷತೆ ವಹಿಸಿದ್ದರು.

ಲಯನ್ ಜಿಲ್ಲಾ ಮಾಜಿ ಗವರ್ನರ್ ಜಿ ಶ್ರೀನಿವಾಸ ಬೆಂಗಳೂರು,
ಲಯನ್ ಜಿಲ್ಲಾ ಮಾಜಿ ಗವರ್ನರ್ ಡಾ, ಕೆ.ಎಮ್.ಮುನಿಯಪ್ಪ ಬೆಂಗಳೂರು, ಲಯನ್ ಜಿಲ್ಲಾ ಮಾಜಿ ಗವರ್ನರ್ ಗಣಪತಿ ಎನ್ ನಾಯಕ, ಗೋಕರ್ಣ, ಲಯನ್ ಜಿಲ್ಲಾ ಮಾಜಿ ಗವರ್ನರ್ ಡಾ, ಗಿರೀಶ್ ಟಿ ಕುಚಿನಾಡ ಕುಮಟಾ, ಉಪಸ್ಥಿತರಿದ್ದರು

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಲಯನ್ ಎಸ್ ಜೆ ಕೈರಾನ ಹೊನ್ನಾವರ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಿಕ್ಷಕ ತಮ್ಮಣ್ಣ ಬೀಗಾರ್ ಅವರಿಗೆ ಸದ್ಭಾವನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಲಯನ್ ಶ್ಯಾಮಲಾ ಹೆಗಡೆ, ಕುಮಾರ್ ಗೌಡರ್ ಅಭಿನಂದಾ ಪತ್ರ ವಾಚಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಆರ್ ಎಂ ಪಾಟಿಲ್,
ಸಿ ಎಸ್ ಗೌಡರ್ ಪ್ರಸ್ತಾವಿಕವಾಗಿ ಮಾತನಾಡಿದರು.
ಮುರುಘರಾಜೇಂದ್ರ ಅಂಧರ ಶಾಲಾ ವಿಧ್ಯಾರ್ಥಿಗಳು ಪ್ರಾರ್ಥಿಸಿದರು.
ನಾಗರಾಜ ಮರಾಠೆ ಸ್ವಾಗತಿಸಿದರು.
ಲಯನ್ ಜಿ ಜಿ ಹೆಗಡೆ ನಿರೂಪಿಸಿದರು.
ನಾಗರಾಜ ದೋಶೆಟ್ಟಿ ವಂದಿಸಿದರು.

WhatsApp
Facebook
Telegram
error: Content is protected !!
Scroll to Top