ಸಿದ್ದಾಪುರದಲ್ಲಿ ಪೌರಾಣಿಕ ಯಕ್ಷಗಾನ ತಾಳಮದಲೆ

ಸಿದ್ದಾಪುರ:  ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ನಾಣಿಕಟ್ಟಾದ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಸಭಾಭವನದಲ್ಲಿ ನವರಾತ್ರಿ ಉತ್ಸವದ ದುರ್ಗಾದೇವಿ ಆರಾಧನೆ ಪ್ರಯುಕ್ತ ಇತ್ತೀಚೆಗೆ ಸರ್ವಕಾಲಿಕ ಪ್ರಸಂಗಗಳಲ್ಲೊಂದಾದ ಪೌರಾಣಿಕ ಯಕ್ಷಗಾನ ಪ್ರಸಂಗ ‘ಕರ್ಣಾವಸಾನ'(ಕರ್ಣಾರ್ಜುನ ಕಾಳಗ) ತಾಳಮದ್ದಲೆಯು ವೇ.ಮೂ.ವಿನಾಯಕ ಸು ಭಟ್ಟ ಮತ್ತಿಹಳ್ಳಿ ಅವರ ದಿವ್ಯ ಉಪಸ್ಥಿತಿಯಲ್ಲಿ ಜರುಗಿತು.


ಪದ್ಮಶ್ರೀ ರಾಮಚಂದ್ರ ಹೆಗಡೆ ಚಿಟ್ಟಾಣಿ ವೇದಿಕೆಯಲ್ಲಿ, ದಿ. ಗಣೇಶ್ ಗಣಪತಿ ಹೆಗಡೆ ಸೂರನ್ ಸವಿ ನೆನಪಿನಲ್ಲಿ , ನಟರಾಜ್ ಎಂ. ಹೆಗಡೆ ಮತ್ತು ಗೆಳೆಯರ ಬಳಗ (ಯಕ್ಷಮಿತ್ರ ಬಳಗ) ನಾಣಿಕಟ್ಟಾ ಇವರ ಸಂಯೋಜನೆಯಲ್ಲಿ, ಉಪೇಂದ್ರ ಪೈ ಸೇವಾ ಟ್ರಸ್ಟ್ ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ,ದಕ್ಷಿಣೋತ್ತರಕನ್ನಡ ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ ತಾಳಮದ್ದಲೆಯು ಅದ್ದೂರಿಯಾಗಿ  ನಡೆಯಿತು.

ಹಿಮ್ಮೇಳದಲ್ಲಿ ಗಾನ ಸಾರಥಿ,ಗಾನ ಸಾಮ್ರಾಟ- ರಾಘವೇಂದ್ರ ಆಚಾರ್ಯ ಜನ್ಸಾಲೆ ಇವರ ಸುಮಧುರ ಹಾಡಿಗೆ, ನಾದಶಂಕರ ಶಂಕರ ಭಗವತ್ ಮದ್ದಲೆ ವಾದನದಲ್ಲಿ ಹಾಗೂ ಚಂಡೆಯಲ್ಲಿ ಯುವ ಕಲಾವಿದ,ಚಂಡೆ ಸಾರಥಿ ಪ್ರಸನ್ನ ಹೆಗ್ಗಾರ್ ಸಹಕರಿಸಿದರು.
ಭಾವನಾತ್ಮಕವಾಗಿ ಕರ್ಣನ ಪಾತ್ರದಲ್ಲಿ ಡಾ. ಪ್ರೊ‌. ವಿನಾಯಕ ಭಟ್ಟ, ಶಲ್ಯನ ಪಾತ್ರದಲ್ಲಿ ಪ್ರೋ. ಪವನ್ ಕಿರಣಕೆರೆ, 1 ನೇ ಕೃಷ್ಣನಾಗಿ ಸುಬ್ರಹ್ಮಣ್ಯ ಹೆಗಡೆ ಚಿಟ್ಟಾಣಿ,ಮತ್ತು 2 ನೇ ಭಾಗದ ಕೃಷ್ಣನಾಗಿ ವಿದ್ವಾನ್ ಚಂದ್ರಶೇಖರ್ ಭಟ್ ಗಾಳಿಮನೆ, ಅರ್ಜುನನಾಗಿ ಪ್ರೋ.ಅರುಣ್ ಶಿವಮೊಗ್ಗ, ಸರ್ಪಾಸ್ತ್ರ ಪಾತ್ರದಲ್ಲಿ ಮಹಾಬಲೇಶ್ವರ್ ಭಟ್ಟ ಇಟಗಿ ಸಮರ್ಥವಾಗಿ ನಿರ್ವಹಿಸಿದರು.
ಸೇರಿದ ಐದನೂರಕ್ಕೂ ಹೆಚ್ಚಿನ ಪ್ರೇಕ್ಷಕರು ಸಾಕ್ಷಿಯಾದರು..
ಈ ಸಂದರ್ಭದಲ್ಲಿ ಯಕ್ಷಗಾನದ ಅಪ್ರತಿಮ ಕಲಾವಿದರಾದ,ಯಕ್ಷಸಾಧಕರಾದ,ರಾಜ್ಯ ಯಕ್ಷಗಾನ ಅಕಾಡೆಮಿಯಿಂದ ನೀಡುವ ಯಕ್ಷಸಿರಿ ಪ್ರಶಸ್ತಿ ಪುರಸ್ಕೃತ ಕೃಷ್ಣಾಜಿ(ಬೆಡ್ಕಣಿ) ನಾಣಿಕಟ್ಟಾ ಮತ್ತು ಕಲಾ ಆರಾಧಕರಾದ “ಕಲಾಭಾಸ್ಕರ” ಮಹಾಬಲೇಶ್ವರ ಭಟ್ ಇಟಗಿ ಇವರಿಗೆ ಗಣ್ಯರ ಸಮ್ಮುಖದಲ್ಲಿ ಸಂಘಟಕರಿಂದ ಗೌರವ ಸನ್ಮಾನ ನಡೆಯಿತು.
ಈ ಸಂದರ್ಭದಲ್ಲಿ ವೇ. ಮೂ.ವಿನಾಯಕ ಭಟ್ಟ ಮತ್ತೀಹಳ್ಳಿ,ಉಪೇಂದ್ರ ಪೈ ಸೇವಾ ಟ್ರಸ್ಟ್ ನ ಅಧ್ಯಕ್ಷ,ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಉಪೇಂದ್ರ ಪೈ ಶಿರಸಿ, ಜಿಲ್ಲಾ ಸಹಕಾರಿಗಳಾದ ತ್ಯಾಗಲಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ  ಎನ್‌.ಬಿ.ಹೆಗಡೆ ಮತ್ತಿಹಳ್ಳಿ, ಉದ್ಯಮಿಗಳಾದ ಆರ್.ಜಿ. ಹೆಗಡೆ ವಾಜಗದ್ದೆ, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಸುಭಾಸ್ ನಾಯ್ಕ ಕಾನ್ಸೂರು, ಪ್ರಭಾಕರ್ ಹೆಗಡೆ, ಎಂ.ಎಂ. ಹೆಗಡೆ,ಉಮೇಶ್ ಹೆಗಡೆ, ರವಿ ಹೆಗಡೆ, ಹಾಗೂ ಸಂಘಟಕರಾದ ನಟರಾಜ ಹೆಗಡೆ, ಆರ್.ಟಿ. ನಾಯ್ಕ್, ರಮೇಶ್ ಬಾಳೆಕೈ ಶಶಿಧರ ಹೆಗಡೆ,ಉಮೇಶ ಹೆಗಡೆ,ಗಣಪತಿ ಹೆಗಡೆ , ಮಂಜುನಾಥ ಎಮ್ ಹೆಗಡೆ, ಸೂರನ್ ಕುಟುಂಬದ ಸದಸ್ಯರು, ಹಾಗೂ ಐನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕಲಾಪ್ರೇಮಿಗಳು ಕಾರ್ಯಕ್ರಮ ಕ್ಕೆ ಸಾಕ್ಷಿಯಾದರು.
ಶಶಿಧರ್ ಹೆಗಡೆ ತ್ಯಾಗಲಿ ಮತ್ತು ರಮೇಶ ನಾಯ್ಕ ಬಾಳೇಕೈ ಸನ್ಮಾನ ಪತ್ರವನ್ನು ವಾಚಿಸಿದರು.
ಕುಮಾರಿ ಅರ್ಚನಾ ಆರ್ ಹೆಗಡೆ ಪ್ರಾರ್ಥಿಸಿದರು.
ಆರ್. ಟಿ. ನಾಯ್ಕ ಹಂಗಾರಖಂಡ ನಿರೂಪಿಸಿದರು. ಪ್ರಸ್ಥಾವನೆ ಮತ್ತು ಸ್ವಾಗತವನ್ನು ನಟರಾಜ್ ಎಮ್ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ರಮೇಶ್ ನಾಯ್ಕ್ ಬಾಳೆಕೈ ವಂದಿಸಿದರು.

WhatsApp
Facebook
Telegram
error: Content is protected !!
Scroll to Top