ಭಟ್ಕಳ A I T U C ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ

ಕಟ್ಟಡ ಕಾರ್ಮಿಕರ ವಿವಿದ ಸಮಸ್ಯೆಯನ್ನು ಮುಂದಿಟ್ಟುಕೊಂಡು ಮನವಿ

ಭಟ್ಕಳ:ಕಟ್ಟಡ ಕಾರ್ಮಿಕರ ವಿವಿದ ಸಮಸ್ಯೆ ಪರಿಹಾರಕ್ಕಾಗಿ ತಾಲೂಕ ತಹಶಿಲ್ದಾರರ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು .

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ. ಕಾರ್ಮಿಕ ಇಲಾಖೆ 2021- 22ನೇ ಸಾಲಿನಲ್ಲಿ ಶೈಕ್ಷಣಿಕ ಅರ್ಜಿ ಸಲ್ಲಿಸಲು ಎಸ್.ಎಸ್.ಪಿ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಿತ್ತು. ಆದರೆ ತಂತ್ರಾಂಶದ ಲೋಪ ದೋಷದಿಂದ ರಾಜ್ಯಾದ್ಯಂತ ಶೇಕಡ 70% ರಷ್ಟು ಫಲಾನುಭವಿಗಳಿಗೆ ಶೈಕ್ಷಣಿಕ ಧನಸಹಾಯ ದೊರೆಯದೆ ಇರುವುದು.
ಕಲ್ಯಾಣ ಮಂಡಳಿಯಿಂದ ಕಾರ್ಮಿಕ ಇಲಾಖೆ ಬಸ್ ಪಾಸ್ ವಿತರಿಸುವ ವ್ಯವಸ್ಥೆಯಲ್ಲಿ ಒಬ್ಬ ಫಲಾನುಭವಿಗೆ 1,400 ರೂಪಾಯಿ ಪ್ರತಿ ತಿಂಗಳಂತೆ ವೆಚ್ಚ ಬರಿಸುವಂಥಾದರೆ ಕಲ್ಯಾಣ ಮಂಡಳಿ ನೀಡುವ ಇತರೆ 19 ಸೌಲಭ್ಯಗಳಿಗೆ ಹಣಕಾಸಿನ ಸಮತೋಲದಲ್ಲಿ ವ್ಯತ್ಯಾಸ ಆಗುವ ಕುರಿತು.
ವಿಷಯ 3)  ಕಾರ್ಮಿಕ ಕಲ್ಯಾಣ ಮಂಡಳಿ ತನ್ನದೇ ಆದ ಹೊಸ ಸಾಫ್ಟ್ವೇರ್ ಅನ್ನು ಅಭಿವೃದ್ಧಿಪಡಿಸಿದೆ. ಈ ಸಾಫ್ಟ್ವೇರ್ ಮೂಲಕ ಕಟ್ಟಡ ಕಾರ್ಮಿಕರ ನೋಂದಣಿ ಮತ್ತು ನವೀಕರಣವನ್ನು ನಿರೀಕ್ಷಕರ ಕಚೇರಿಯಲ್ಲಿ ಮತ್ತು ಕಾರ್ಮಿಕ ಅಧಿಕಾರಿ ಕಚೇರಿಯಲ್ಲಿ ಅರ್ಜಿ ಸ್ವೀಕರಿಸುವ ವ್ಯವಸ್ಥೆ ಇರುತ್ತದೆ. ಈ ವ್ಯವಸ್ಥೆಯಲ್ಲಿ  ಸಿಬ್ಬಂದಿ ಯೂಸರ್ ಐಡಿ ಪಾಸ್ವರ್ಡ್ ಬದಲು ಸಿಬ್ಬಂದಿ ತನ್ನ ಕೈಬೆರಳಚ್ಚನ್ನು ನೀಡಿ ಅರ್ಜಿ ಸಲ್ಲಿಕೆ ಮಾಡುವ ಕುರಿತು.

ಪಿಂಚಣಿ ಧನ ಸಹಾಯದ ಅರ್ಜಿ ಸಲ್ಲಿಸಿದವರಿಗೆ ಆತ ಸಲ್ಲಿಸಿರುವ ದಿನಾಂಕದಿಂದಲೇ ಪಿಂಚಣಿ ದೊರೆಯಬೇಕು.
ವಿಷಯ:1) ಸಂಬಂಧಿಸಿದಂತೆ 2021-22 ನೇ ಸಾಲಿನಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಧನಸಾಯದ ಅರ್ಜಿಗಳು ಎಸ್. ಎಸ್ .ಪಿ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ರಾಜ್ಯಾದ್ಯಂತ ಶೇಖಡ 70% ರಷ್ಟು ಅರ್ಜಿಗಳು ಸರಿಯಾದ ರೀತಿಯಲ್ಲಿ ಸಲ್ಲಿಕೆ ಆಗಲಿಲ್ಲ. ಎಸ್. ಎಸ್. ಪಿ ತಂತ್ರಾಂಶದಲ್ಲಿ ಹಲವಾರು ಲೋಪದೋಷಗಳಿದ್ದು ಅರ್ಜಿಯು ತಿರಸ್ಕೃತವಾಗಿದೆ. ಫಲಾನುಭವಿಯ ಎಲ್ಲಾ ದಾಖಲೆಗಳು ಸರಿಯಾಗಿದ್ದರೂ ದಾಖಲೆಗಳು ಸರಿ ಇರುವುದಿಲ್ಲ ಎಂದು ತಂತ್ರಾಂಶ ಮಾಹಿತಿ ನೀಡುತ್ತದೆ.ಯಾರದೂ ದಾಖಲೆಗೆ ಇನ್ಯಾರದೂ ದಾಖಲೆ ತಂತ್ರಾಂಶದಲ್ಲಿ ಸೇರ್ಪಡೆಯಾಗಿದೆ. ಈ ವಿಷಯವಾಗಿ ಕಾರ್ಮಿಕ ಕಲ್ಯಾಣ ಮಂಡಳಿಗೆ ರಾಜ್ಯಾದ್ಯಂತ ದೂರು ಸಲ್ಲಿಕೆ ಯಾಗಿದೆ. ಇಲಾಖೆಯವರು ಸರಿಪಡಿಸುತ್ತೇವೆ ಎಂದು ಹೇಳುತ್ತಲೇ, ಹಲವಾರು ತಿಂಗಳುಗಳು ಕಳೆದಿದೆ. ಈಗ ಅದನ್ನು 2022-23ನೇ ಸಾಲಿನಲ್ಲಿ ಎಲ್ಲಾ ದಾಖಲೆಗಳನ್ನು ಸರಿಪಡಿಸಿ ಅರ್ಜಿ ಸಲ್ಲಿಸಿ ಎಂದು ಮಾಹಿತಿ ನೀಡುತ್ತಿದ್ದಾರೆ. ಇದರಲ್ಲಿ ಕಾರ್ಮಿಕ ಫಲಾನುಭವಿಗಳೇನು ತಪ್ಪಿರುವುದಿಲ್ಲ.
ತಂತ್ರಾಂಶ ಲೋಪದೋಷದಿಂದ ಅರ್ಜಿ  ತಿರಸ್ಕೃತವಾಗಿರುವುದರಿಂದ ರಾಜ್ಯಾದ್ಯಂತ ಶೇಕಡ 70% ರಷ್ಟು ಫಲಾನುಭವಿಗಳಿಗೆ ಅನ್ಯಾಯವಾಗಿದೆ. ಈ ಹಿಂದೆ  ಕಾರ್ಮಿಕ ಇಲಾಖೆಯ  ಕಾರ್ಯದರ್ಶಿಯವರಾದ ಮಾನ್ಯ ಅಕ್ರಂ ಪಾಷಾ ಅವರು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಎಂ.ಎನ್.ಸಿ. ಬೆಂಗಳೂರು ಮೈನಾರಿಟಿ ಫೇರ್ ರವರು ಈ ಸಿಸ್ಟಮನ್ನು ಡೆವಲಪ್ ಮಾಡಿದರು. ಅದನ್ನು ಇಡೀ ಭಾರತ ಕಾಪಿ ಮಾಡಿತು. ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ ಎನ್. ಐ. ಸಿ ಡೆಲ್ಲಿಯವರು ನಮ್ಮ ಮಾದರಿಯನ್ನು ಬಳಸಿಕೊಂಡು ಇಡೀ ಭಾರತಕ್ಕೆ ನೀಡುತ್ತಿದ್ದಾರೆ. ಅದೇ ರೀತಿ ನಾವೀಗ ನಮ್ಮ ಸ್ಟೇಟ್ ಸ್ಕಾಲರ್ಶಿಪ್ ಪೋರ್ಟಲ್ ನಲ್ಲಿ ನಾವು ಇದನ್ನು ಆನ್ಲೈನ್ ನಲ್ಲಿ ಜಾರಿಗೆ ತರುತ್ತಿದ್ದೇವೆ. ಇದು ಸಂಪೂರ್ಣ ಪೇಪರ್ ಲೆಸ್ ಇದೆ. ಜಸ್ಟ್ ಸ್ಕೂಲ್ ಐ. ಡಿ. ಸ್ಯಾಟ್ ನಂಬರ್. ಕಾಲೇಜ್ ಐ.ಡಿ .ಕಾರ್ಮಿಕರ ಕಾರ್ಡ್  ಎಂಟ್ರಿ ಮಾಡಿದ್ರೆ ಸಾಕು, ಆಟೋಮೆಟಿಕ್ ಆಗಿ ಡಾಟಾ ಆನ್ಲೈನ್ನಲ್ಲಿ ಫೀಡ್ ಆಗುತ್ತದೆ. ಇದು ಅತ್ಯಂತ ಸುಲಭವಾದ ಮತ್ತು ಸರಳವಾದ ಪ್ರಕ್ರಿಯೆವಾಗಿದೆ. ಇದರಿಂದ ನೇರವಾಗಿ ಶೀಘ್ರಗತಿಯಲ್ಲಿ ಫಲಾನುಭವಿ ಖಾತೆಗೆ ಹಣ ಡೆಬಿಟ್ ಆಗುತ್ತದೆ ಎಂದು ದೂರದರ್ಶನದಲ್ಲಿ ಮಾಹಿತಿ ನೀಡಿದರು. ಆದರೆ ಇದು ಸಂಪೂರ್ಣ ಫಲಕಾರಿ ಆಗಲಿಲ್ಲ. ಇದರಲ್ಲಿ ಸಂಪೂರ್ಣ ತಾಂತ್ರಿಕ ದೋಷಗಳಿದೆ ಆದ್ದರಿಂದ 2021 22ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಲಾಗದೆ ಇರುವ ಮತ್ತು ಅರ್ಜಿ ದುರಸ್ತಲಿರುವ ಶೈಕ್ಷಣಿಕ ಅರ್ಜಿಗಳನ್ನು ಈ ಕೂಡಲೇ ಸೇವಾ ಸಿಂಧು ತಂತ್ರಾಂಶದಲ್ಲಿ ಈ ಒಂದು ಬಾರಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು. ಮತ್ತು ವಂಚಿತರಾದ ಕಾರ್ಮಿಕರಿಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ನಾವು ವಿನಂತಿಸಿಕೊಳ್ಳುತ್ತೇವೆ.
ವಿಷಯ:2):ಸಂಬಂಧಿಸಿದಂತೆ ರಾಜ್ಯದಲ್ಲಿ ಅಂದಾಜು 45 ಲಕ್ಷ ಕಟ್ಟಡ ಕಾರ್ಮಿಕರೆಂದು ಕಲ್ಯಾಣ ಮಂಡಳಿಯ ಫಲಾನುಭವಿಗಳಾಗಿದ್ದಾರೆ. ಒಬ್ಬ ಫಲಾನುಭವಿಗೆ ಬಸ್ ಪಾಸ್ ವಿತರಣೆಗೆ ಒಂದು ತಿಂಗಳಿಗೆ ₹1400 ವೆಚ್ಚ ಆಗುತ್ತದೆ. ಅದರಂತೆ ಆತನಿಗೆ ಮೂರು ತಿಂಗಳ ಪಾಸಿಗೆ ₹4,200 ವೆಚ್ಚ ಆಗುತ್ತದೆ. ಪ್ರಾರಂಭ ಹಂತದಲ್ಲಿ ಅತಿ ಶೀಘ್ರದಲ್ಲಿ 10 ಲಕ್ಷ ಫಲಾನುಭವಿಗಳು ಬಸ್ ಪಾಸಿಗೆ ಅರ್ಜಿ ಸಲ್ಲಿಸಿದರೆ ಮೂರು ತಿಂಗಳಿಗೆ 420 ಕೋಟಿ ಮಂಡಳಿ ನಿಧಿ ಖರ್ಚಾಗುತ್ತದೆ. ಅದರಂತೆ 45 ಲಕ್ಷ ಜನ ಕೇವಲ ಆರು ತಿಂಗಳ ಒಳಗೆ ಅರ್ಜಿ ಸಲ್ಲಿಸಿ ಬಸ್ ಪಾಸ್ ಪಡೆಯುವ ಸಾಧ್ಯತೆ ಇದೆ. ಹೀಗೆನಾದ್ರೂ ಆದರೆ 45 ಲಕ್ಷ ಬಸ್ ಪಾಸಿಗೆ ಮೂರು ತಿಂಗಳ ಅವಧಿಗೆ ಒಂದು ಬಾರಿ 1890 ಕೋಟಿ ಮಂಡಳಿಯ ನಿಧಿ ಖರ್ಚಾಗುತ್ತದೆ. ಅದರ ಜೊತೆಗೆ ಈಗಿರುವ ಇರುವ ಅಂದಾಜು 45 ಲಕ್ಷ ಫಲಾನುಭವಿಗಳು ಕೇವಲ ಒಂದು ವರ್ಷದ ಅವಧಿ ಒಳಗೆ 60 ಲಕ್ಷ ಆಗುವ ಸಾಧ್ಯತೆ ಇದೆ. ಕಾರಣ ಇದಕ್ಕೆ ಹಲವಾರು ಉದಾಹರಣೆಗಳು ನಮ್ಮ ಮುಂದಿದೆ. ಕೋವಿಡ್ 19 ರ ಪರಿಹಾರವಾಗಿ 5000 ಘೋಷಣಾದ ನಂತರ ಆದಂತಹ ಮಂಡಳಿಯ ಫಲಾನುಭವಿಗಳ ಅಂಕಿ ಅಂಶಗಳನ್ನು ಗಮನಿಸಬಹುದು. ಈ ಬಸ್ ಪಾಸ್ ವ್ಯವಸ್ಥೆಯಲ್ಲಿ ಕೇವಲ ಬಸ್ ಪಾಸ್ ಪಡೆಯುವ ಗೋಸ್ಕರ ಕಾರ್ಮಿಕರ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ನೂರಕ್ಕೆ ನೂರರಷ್ಟು ಇದೆ. ನಕಲಿ ಕಾರ್ಮಿಕರು ಅತಿ ಹೆಚ್ಚಾಗಿ ಮಂಡಳಿಯ ಫಲಾನುಭವಿಗಳಾಗುತ್ತಾರೆ. ಈ ರೀತಿ ಆಗುವ ಸಾಧ್ಯತೆಗಳು ಎಂದೂ ತಳ್ಳಿ ಹಾಕುವಂತಿಲ್ಲ. ಕೇವಲ ಬಸ್ ಪಾಸಿನ ಯೋಜನೆಗೋಸ್ಕರ ಇಷ್ಟೆಲ್ಲ ಹಣ

ಖರ್ಚಾದರೆ ಮಂಡಳಿ ಇತರೆ ಸೌಲಭ್ಯಗಳಾದ ಶೈಕ್ಷಣಿಕ ಮದುವೆ ವೈದ್ಯಕೀಯ ಪಿಂಚಣಿ ಮರಣ ಹೆರಿಗೆ ಮುಂತಾದ ನೀಡಲು ಕಲ್ಯಾಣ ಮಂಡಳಿಯ ನಿಧಿಯ ಸಮತೋಲಗಳನ್ನು ಹೇಗೆ ಕಾಪಾಡುತ್ತೀರಿ ?  ಯಾವುದೇ ದೂರ ಚಿಂತನೆ. ದೂರ ದೃಷ್ಟಿ ಇಲ್ಲದ ಈ ಯೋಜನೆ ಅವಜ್ಞಾನಿಕವಾಗಿರುತ್ತದೆ. ಜೊತೆಗೆ ರಾಜ್ಯದ ಕಟ್ಟಡ ಕಾರ್ಮಿಕರಿಗೆ ಎಲ್ಲರಿಗೂ ಈ ಯೋಜನೆಯಿಂದ ಯಾವುದೇ ಫಲಕಾರಿ ಇರುವುದಿಲ್ಲವೆಂದು ಮತ್ತು ಅವೈಜ್ಞಾನಿಕವಾಗಿದೆ.  ದೂರ  ದೃಷ್ಟಿ ಇಲ್ಲದಿರುವ ಯೋಜನೆ.
ವಿಷಯ 3) ಸಂಬಂಧಿಸಿದಂತೆ ಕಲ್ಯಾಣ ಮಂಡಳಿಯು ತನ್ನ ಹೊಸ ಸಾಫ್ಟ್ವೇರ್ ಅನ್ನು ಅಭಿವೃದ್ಧಿಪಡಿಸಿದೆ. ಈ ಸಾಫ್ಟ್ವೇರ್ ಮೂಲಕ ಕಾರ್ಮಿಕರ ನೋಂದಣಿ ಮತ್ತು ನವೀಕರಣ ನಿರೀಕ್ಷಕರ ಕಚೇರಿಯಲ್ಲಿ ಆಗುತ್ತದೆ ಎಂದು ಮಾಹಿತಿ ನೀಡಿರುತ್ತಾರೆ. ಈ ಸಾಫ್ಟ್ವೇರ್ ನಲ್ಲಿ ನಿರೀಕ್ಷಕರ ಕಚೇರಿಯ ಸಿಬ್ಬಂದಿಯು ಯೂಸರ್ ಐಡಿ ಪಾಸ್ವರ್ಡ್ ಅನ್ನು ಬಳಸಿ ನೊಂದಣಿ ಪ್ರಕ್ರಿಯೆಗಳನ್ನು ಮಾಡುವುದಕ್ಕಿಂತ ಆಪರೇಟರ್ಗಳು  ತಂಬು ನೀಡಿ ಅರ್ಜಿ ಸಲ್ಲಿಕೆ ಆದರೆ ಸಂಪೂರ್ಣ ಸರಿ ಎಂದು ಕಂಡುಬರುತ್ತದೆ. ಕಾರಣ ಅರ್ಜಿ ಆನ್ಲೈನ್ನಲ್ಲಿ ಸಲ್ಲಿಸಿರುವರು ಯಾರು? ಒಂದು ದಿನಕ್ಕೆ ಎಷ್ಟು ಅರ್ಜಿ ಸ್ವೀಕೃತವಾಗಿದೆ ? ಕಚೇರಿಯ ಕೆಲಸದ ವೇಳೆಯಲ್ಲಿ ಎಷ್ಟು ಅರ್ಜಿ ಸ್ವೀಕೃತಿಯಾಗಿದೆ? ಎಂದು ಸರಿಯಾದ ಮಾಹಿತಿ ನಿರೀಕ್ಷಕರಿಗೆ ಮತ್ತು ಅಧಿಕಾರಿಗಳಿಗೆ ಕಲ್ಯಾಣ ಮಂಡಳಿಗೆ ನಿಖರವಾಗಿ ತಲುಪುತ್ತದೆ. ಈ ದೃಷ್ಟಿಕೋನದಿಂದ ಕಚೇರಿಯ ಆಪರೇಟರ್ಗಳು ತಂಬನ್ನು ನೀಡಿ ಅರ್ಜಿ ಸಲ್ಲಿಸುವುದು ಸೂಕ್ತ ಎಂದು ನಮ್ಮ ಅನಿಸಿಕೆ.  ಮತ್ತು ತುಂಬಾ ಜವಾಬ್ದಾರಿಯಿಂದ ಅರ್ಜಿ ಸ್ವಿಕೃತವಾಗುತ್ತದೆ. ಮತ್ತು ನೈಜ ಕಾರ್ಮಿಕರಿಗೆ ಅವಕಾಶ ದೊರೆಯುತ್ತದೆ. ನಕಲಿ ಕಾರ್ಮಿಕರು ಸೇರ್ಪಡೆಯಾಗುವುದು ತಪ್ಪುತ್ತದೆ.
ವಿಷಯ 4) ಸಂಬಂಧಿಸಿದಂತೆ ರಾಜ್ಯಾದ್ಯಂತ ಕಟ್ಟಡ ಕಾರ್ಮಿಕರು ತಮ್ಮ 60 ವರ್ಷ ಮುಗಿದ ನಂತರ ಪಿಂಚಣಿ ಅರ್ಜಿಗಳನ್ನು ಸಲ್ಲಿಸಿರುತ್ತಾರೆ. ಅದರಲ್ಲಿಯೂ ವಿಶೇಷವಾಗಿ ಮ್ಯಾನುಯಲ್ ಪಿಂಚಣಿ ಅರ್ಜಿಗಳನ್ನು ಹಲವಾರು ವರ್ಷಗಳ ಹಿಂದೆ ಸಲ್ಲಿಸಿರುತ್ತಾರೆ. ಅದರಲ್ಲಿ ಹಲವಾರು ಕಾರ್ಮಿಕರಿಗೆ ತಾನು ಅರ್ಜಿ ಸಲ್ಲಿಸಿದ ದಿನಾಂಕದಿಂದ ಪಿಂಚಣಿ ದೊರೆಯದೆ ವಂಚಿತರಾಗಿದ್ದಾರೆ. ಈಗ ಅರ್ಜಿಗಳು ಮಂಜುರಾಗುವ ಸಂದರ್ಭದಲ್ಲಿ ಪುನಹ ಜೀವಿತ ಪ್ರಮಾಣ ಪತ್ರವನ್ನು ಸಲ್ಲಿಸಿ ಪಿಂಚಣಿ ಪಡೆಯಬೇಕಾಗುತ್ತದೆ. ನಾಲ್ಕೈದು ವರ್ಷಗಳ ಹಿಂದಿನಿಂದ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ತಾನು ಅರ್ಜಿ ಸಲ್ಲಿಸಿದ ದಿನಾಂಕದಿಂದ  ಪಿಂಚಣಿ ಧನಸಾಯವನ್ನು ಒಟ್ಟುಗೂಡಿಸಿ ಇಡೀ ಗಂಟಾಗಿ ಏಕ ರಖಂ ಮೂಲಕ ಆತನ ಖಾತೆಗೆ ಜಮಾ ಆಗಬೇಕು. ಇಲ್ಲವಾದರೆ ಆತನಿಗೆ ಅನ್ಯಾಯವಾಗುತ್ತದೆ. ಈ ರೀತಿಯಾದೇಯಾಗಲು ಇಲಾಖೆ ಸಿಬ್ಬಂದಿಯೇ ಕಾರಣ ವಾಗಿರುತ್ತಾರೆ. ಇದರಲ್ಲಿ ಫಲಾನುಭವಿಗಳ ತಪ್ಪೇನು ಇರುವುದಿಲ್ಲ.  ಆದರಿಂದ ರಾಜ್ಯಾದ್ಯಂತ ಬಾಕಿರುವ ಮ್ಯಾನುವಲ್ ಪಿಂಚಣಿದಾರರಿಗೆ ಆತ ಸಲ್ಲಿಸಿರುವ ದಿನಾಂಕದಿಂದಲೇ ಪಿಂಚಣಿ ದೊರೆಯಬೇಕು. ಪಿಂಚಣಿ ವಂಚಿತರಾಗಬಾರದೆಂದು ನಮ್ಮ ಸಂಘಟನೆಯ ಮನವಿ.

WhatsApp
Facebook
Telegram
error: Content is protected !!
Scroll to Top