ಹೊನ್ನಾವರ ತಾಲೂಕ ಆಸ್ಪತ್ರೆಯಲ್ಲಿ   ಕಿಡ್ನಿ  ವೈಪಲ್ಯಗೊಂಡ  ರೋಗಿಗಳ ಗೋಳು ಕೇಳುವವರೆ ಇಲ್ಲಾ

ಶಾಸಕರುಗಳಿಗೆ ಹಿಡಿ ಶಾಪ ಹಾಕುತ್ತಿರುವ   ರೋಗಿಗಳು

ಹೊನ್ನಾವರ: ತಾಲೂಕ ಆಸ್ಪತ್ರೆಯಲ್ಲಿ ಡಯಾಲಿಸಸ್ ಯಂತ್ರ  ಕೆಟ್ಟು ಹೊಗಿದ್ದು  ಕಿಡ್ನಿ ವೈಪಲ್ಯಗೊಂಡ ರೋಗಿಗಳಿಗೆ ಡಯಾಲಿಸಸ್  ಮಾಡದೆ ಸಾವು ಬದುಕಿನ ಮಧ್ಯ ಹೊರಾಡುತ್ತ  ಜನ ಪ್ರತಿನಿದಿಗಳಿಗೆ ಹಿಡಿಶಾಪ ಹಾಕುತ್ತಿರುವುದು ಬೆಳಕಿಗೆ ಬಂದಿದೆ.

ಹೊನ್ನಾವರ ತಾಲೂಕ ಆಸ್ಪತ್ರೆಯಲ್ಲಿ ಈ ಡಯಾಲಿಸಸ್ ಸಮಸ್ಯೆ ಇಂದು ನಿನ್ನೆಯದಲ್ಲಾ ಇಲ್ಲಿ ಸಿಬಂದಿ ಕೊರತೆ ಗುತ್ತಿಗೆ ದಾರಿಕೆ ವಹಿಸಿಕೊಂಡಿರುವ ಕಂಪನಿಗಳ ಬೆಜವಬ್ದಾರಿ ತನ ಹೀಗೆ ಒಂದೆ ಎರಡೆ ದಿನ ಬೆಳಗಾದರೆ ಸಮಸ್ಯೆಯ ಮೇಲೆ ಸಮಸ್ಯೆ ಈ ರಾಜಕಾರಣಗಳು ಮಾತ್ರ ರೋಗಿಗಳಿಗೆ ಇರುವ ಆಂಬುಲೆನ್ಸಗಳ ಮೇಲೆ ತಮ್ಮ ಪೋಟೊ ಹಾಕಿಸಿ ಪ್ರಚಾರ ಪಡೆಯುದರಲ್ಲೆ ವ್ಯಸ್ತರಾಗಿರುತ್ತಾರೆ ಎಂದರೆ ತಪ್ಪಾಗಲಿಕ್ಕಿಲ್ಲಾ

ಆದರೆ ಹೊನ್ನಾವರ ತಾಲೂಕ ಆಸ್ಪತ್ರೆಯ ಕಿಡ್ನಿ ವೈಪಲ್ಯಗೊಂಡ ರೋಗಿಗಗಳ ಗೋಳು ನರಕ ಸದ್ರಶವಾಗಿರುತ್ತದೆ ಅವರ ಕಷ್ಟವನ್ನು ನೋಡಿದರೆ ಎಂಥ ಕಠೋರ ಹೃದಯದವನು ಕರಗಿ ಹೊಗುತ್ತಾನೆ ಆದರೆ ಭಟ್ಕಳ ಮತ್ತು ಹೊನ್ನಾವರದಲ್ಲಿರುವ ಇಬ್ಬಿಬ್ಬರು ಶಾಸಕರಿಗೆ ಮಾತ್ರ  ಹೃದಯವೆ ಇಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ರೋಗಿಗಳು ಶಾಪವನ್ನು ಹಾಕುತ್ತಿದ್ದಾರೆ  ಹೊನ್ನಾವರ ಸರಕಾರಿ ಆಸ್ಪತ್ರೆಯಲ್ಲಿ ನಾಲ್ಕು ಡಯಾಲಿಸಸ್ ಯಂತ್ರ  ವಿದ್ದು  ಈ ನಾಲ್ಕು ಯಂತ್ರದಲ್ಲಿ ಮೂರು ಯಂತ್ರಗಳು ಸಂಪೂರ್ಣ ಕೆಟ್ಟು ಹೊಗಿದ್ದು ಇರುವ ಒಂದು ಯಂತ್ರ ಆಗಲೋ ಇಗಲೋ ಎಂಬಂತಿದೆ ಕಿಡ್ನಿ ವೈಪಲ್ಯದ ರೋಗಿಗಳ ಗೋಳನ್ನು ಯಾರು ಕೆಳುವವರೆ ಇಲ್ಲಾ ರೋಗಿಗಳು ಹತಾಶರಾಗಿ ಹೊಗಿದ್ದು  ಈ ಸಮಸ್ಯೆ ಹೀಗೆ ಮುಂದುವರಿದಲ್ಲಿ ನಾವು  ಶಾಸಕರ ಮನೆಗೆ ಹೋಗಿ ವಿಷಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತೆವೆ ಈ ಭಟ್ಕಳ ಮತ್ತು ಹೊನ್ನಾವರದಲ್ಲಿ ಇಬ್ಬರು ಶಾಸಕರಿದ್ದರು ಕೂಡ ನಮ್ಮ ಗೋಳನ್ನು ಕೆಳುವವರೆ ಇಲ್ಲಾ ಎಂದು ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ.

ಇದರಿಂದ ಬೆಸತ್ತ ರೋಗಿಗಳು ಮತ್ತು ರೋಗಿಗಳ ಕುಟುಂಬಸ್ತರು ದಯಮಾಡಿ ಡಯಾಲಿಸಸ್ ಯಂತ್ರ ದುರಸ್ತಿಗೊಳಿಸಿ ನಮ್ಮ ಜಿವ ಉಳಿಸಿಕೊಡಿ ಎಂದು ಹೊನ್ನಾವರ ತಾಲೂಕ ತಹಶಿಲ್ದಾರರಿಗೆ ಮನವಿಯನ್ನು ಸಲ್ಲಿಸಿದರು

ಒಟ್ಟಾರೆ ಹೊನ್ನಾವರ ಕಿಡ್ನಿ ವೈಪಲ್ಯದ ರೋಗಿಗಳು ಈ ಅಧಿಕಾರಿಗಳು ಮತ್ತು ಜನಪ್ರತಿನಿದಿಗಳ ಬೆಜವಬ್ದಾರಿತನಕ್ಕೆ ತಮ್ಮ ಜೀವವನ್ನು ಬಲಿಕೊಟ್ಟು ಬೆಲೆಯನ್ನು ತೆರುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ

WhatsApp
Facebook
Telegram
error: Content is protected !!
Scroll to Top