Sunday, December 4, 2022
Homeವಿಶೇಷ ವರದಿಹೆಬ್ಳೆ ಗ್ರಾಮ ಪಂಚಾಯತ್ ಭ್ರಷ್ಟಾಚಾರಿಗಳ ವಿರುದ್ದ ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲಾ ಪಂಚಾಯತ್ ಮುಂಬಾಗದಲ್ಲಿ ...

ಹೆಬ್ಳೆ ಗ್ರಾಮ ಪಂಚಾಯತ್ ಭ್ರಷ್ಟಾಚಾರಿಗಳ ವಿರುದ್ದ ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲಾ ಪಂಚಾಯತ್ ಮುಂಬಾಗದಲ್ಲಿ ಪ್ರತಿಭಟನೆ ಕೈಗೊಳ್ಳಲಾಗುವುದು ಆರ್ ಟಿ ಐ ರಾಜ್ಯಾಧ್ಯಕ್ಷ ರಮೇಶ ಕುಣಿಗಲ್ ಆಕ್ರೋಶ

ಭಟ್ಕಳ: ತಾಲೂಕ ಹೆಬ್ಳೆ ಗ್ರಾಮ ಪಂಚಾಯತ್ ಅಲ್ಲಿ ಲಕ್ಷಾಂತರ ಭ್ರಷ್ಟಾಚಾರ ನಡೆದಿರುವುದು ಸಾಭಿತಾಗಿದೆ ಇನ್ನು ಭ್ರಷ್ಟಾಚಾರಿಗಳ ವಿರುದ್ದ ಕ್ರಮ ಕೈಗೊಳ್ಳುವ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲಾ ಇದು ಹೀಗೆ ಮುಂದುವರಿದಲ್ಲಿ ರಾಜ್ಯದಾಧ್ಯಂತ ಇರುವ ನಮ್ಮ‌ ಸಂಘಟನೆ ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಮುಂಬಾಗದಲ್ಲಿ ಪ್ರತಿಭಟನೆ ನಡೆಸುತ್ತೆವೆ ಎಂದು ಆಕ್ರೋಶ ವ್ಯಕ್ತಪಡಿಸಿದರು

ರಾಜ್ಯ ಮಾಹಿತಿ‌ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಭಟ್ಕಳ ಘಟಕ ಇದು ಇದರ ಪ್ರಧಾನ ಕಾರ್ಯದರ್ಶಿಗಳಾದ ನಾಗೇಶ ನಾಯ್ಕ ಹೆಬ್ಳೆ ಇವರು ತಾಲೂಕಿನ ಹೆಭ್ಳೆ ಗ್ರಾಮ‌ ಪಂಚಾಯತ್ ಅಲ್ಲಿ ಲಕ್ಷಾಂತರ ಭ್ರಷ್ಟಾಚಾರ ನಡೆದಿರುವ ಬಗ್ಗೆ ದೂರನ್ನು ನೀಡಿದ್ದರು ಈ ದೂರಿನ ಹಿನ್ನೆಲೆಯಲ್ಲಿ ತಾಲೂಕ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ತನಿಖಾ ತಂಡ ಪರಿಶೀಲನೆ ನಡೆಸಿ ಹೆಭ್ಳೆ ಗ್ರಾಮ‌ ಪಂಚಾಯತ್ ಅಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ವರದಿಯನ್ನು ಒಪ್ಪಿಸಿದ್ದರು ಆದರಂತೆ ಜಿಲ್ಲಾ ಪಂಚಾಯತ್ ಗ್ರಾಮ ಪಂಚಾಯತ್ ಪಿಡಿಓ ಅವರಿಗೆ ಎರಡು ದಿನದ ಗಡುವು ನೀಡಿ ಶೋಕಾಸ್ ನೊಟಿಸನ್ನು ಕೂಡ ಕೊಟ್ಟಿತ್ತು ತಪ್ಪಿತಸ್ಥರಿಗೆ ಶಿಕ್ಷೇಯಾಗುವ ಎಲ್ಲಾ ಲಕ್ಷಣಗಳು ಕಂಡು ಬಂದಿತ್ತು ಆದರೆ ಈಗ ಒಂದು ದೊಡ್ಡ ಬೆಳವಣಿಗೆ ಆಗಿರುವ ಮಾಹಿತಿ ಕೆಳಿಬರುತ್ತಿದ್ದೆ ಭಟ್ಕಳ ತಾಲೂಕಿನ ಜನಪ್ರತಿನಿದಿಯೊಬ್ಬರು ಹಾಗು ಜಿಲ್ಲೆಯ ಪ್ರತಿಷ್ಟಿತ ಜನ ಪ್ರತಿನಿದಿ ಒಬ್ಬರು ಈ ಬಗ್ಗೆ ಕ್ರಮ ಕೈಗೊಳ್ಳ ಬಾರದು ಎಂಬಂತೆ ಕ್ರಮ ಕೈಗೊಳ್ಳಬಾರದು ಎಂಬುವುದಾಗಿ ಒತ್ತಡ ಹಾಕಿದ್ದಾರೆ ಎಂಬ ಗುಸು ಗುಸು ಭಟ್ಕಳ ತಾಲೂಕಿನಾಧ್ಯಂತ ಕೇಳಿ ಬರುತ್ತಿದೆ ಅಲ್ಲದೆ ಈ ಬಗ್ಗೆ ಜಿಲ್ಲಾ ಪಂಚಾಯತ್ ಅಧಿಕಾರಿಗಳೊಬ್ಬರನ್ನು ವರ್ಗಾವಣೆಗೂ ಪ್ರಯತ್ನ ನಡೆಸಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಒಟ್ಟಾರೆ ಈ ಕೆಲವು ಜನಪ್ರತಿನಿದಿಗಳು ಭ್ರಷ್ಟಾಚಾರಿಗಳ ಬೆಂಬಲ ನೀಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಬಗ್ಗೆ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಅಧ್ಯಕ್ಷರಾದ ರಮೇಶ ಕುಣಿಗಲ್ ಅವರು ಮಾತನಾಡಿ ಭಟ್ಕಳ ತಾಲೂಕ ಹೆಬ್ಳೆ ಗ್ರಾಮ ಪಂಚಾಯತ್ ಅಲ್ಲಿ ಲಕ್ಷಾಂತರ ಭ್ರಷ್ಟಾಚಾರ ನಡೆದಿರುವುದು ಈಗಾಗಲೆ ಸಾಭಿತಾಗಿದೆ ಆದರೆ ತಪ್ಪಿತಸ್ಥರ ಮೇಲೆ ಯಾವುದೆ ಕ್ರಮ ಕೈಗೊಳ್ಳುವ ಯಾವುದೇ ಲಕ್ಷಣಗಳು ಕಂಡು ಬರುತ್ತಿಲ್ಲಾ ಇದು ಹೀಗೆ ಮುಂದುವರಿದಲ್ಲಿ ನಮ್ಮ ಸಂಘಟನೆ ಜಿಲ್ಲಾ ಪಂಚಾಯತ್ ಮುಂಬಾಗದಲ್ಲಿ ಬ್ರಹತ್ ಪ್ರತಿಭಟನೆ ಕೈಗೊಳ್ಳುತ್ತೆವೆ ಎಂದು ಹೇಳಿದರು

ಒಟ್ಟಾರೆ ಈ ಭ್ರಷ್ಟರಿಗೆ ಭ್ರಷ್ಟರಾಜಕಾರಣಿಗಳು ಯಾವಾಗಲು ಬೆನ್ನಿಗೆ ನಿಲ್ಲುತ್ತಾರೆ ಎನ್ನುವುದು ನೂರಕ್ಕೆ ನೂರು ಸತ್ಯವಾಗಿದೆ ಆದರೆ ತಾಲೂಕಿನ ಹೆಬ್ಳೆ ಗ್ರಾಮ ಪಂಚಾಯತ್ ಅಲ್ಲಿ ನಡೆದ ಭ್ರಷ್ಟಾಚಾರವನ್ನು ಮುಚ್ಚಿಹಾಕಿ ತಮ್ಮನ್ನು ಈ ಈ ಜನ ಪ್ರತಿನಿದಿಗಳು ರಕ್ಷಣೆ ಮಾಡುತ್ತಾರೆ ಎಂಬ ಕನಸನ್ನು ಕಾಣುತ್ತಿದ್ದರೆ ಅದು ಹಗಲು ಕನಸ್ಸೆ ಹೊರತು ಅದು ನನಸಾಗಲು ಸಾಧ್ಯವೇ ಇಲ್ಲ ಎಂಬುವುದು ಮಾತ್ರ ನೆನಪಿಟ್ಟುಕೊಳ್ಳಬೇಕು ಭ್ರಷ್ಟರಿಗೆ ಶಿಕ್ಷೇಯಾಗದೆ ನಾವು ನಮ್ಮ ಹೊರಾಟ ನಿಲ್ಲಿಸಲಾರೆವು ಎಂಬುವುದು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಮಾತಾಗಿದೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!