ಸಾಮಾಜಿಕವಾಗಿ ದುಡಿಯುವ ಮನಸ್ಸು ಸಾಹಿತಿಗಳ ಬರವಣಿಗೆಯಲ್ಲಿರಬೇಕು ಸಾಹಿತಿ ಡಾ,ಆನಂದ ಪಾಟೀಲ್

ಸಿದ್ದಾಪುರ:- ಸಾಮಾಜಿಕವಾಗಿ ದುಡಿಯುವ ಮನಸ್ಸು ಸಾಹಿತಿಗಳ ಬರವಣಿಗೆಯಲ್ಲಿರಬೇಕು. ಬರವಣಿಗೆಯನ್ನು ಸಾಮಾಜಿಕ ಅವ್ಯವಸ್ಥೆಯ ಮಧ್ಯ ನಿಂತು ಬರೆಯಬೇಕು ಎಂದು ಧಾರವಾಡದ ಸಾಹಿತಿ ಡಾ,ಆನಂದ ಪಾಟೀಲ್ ಅಭಿಪ್ರಾಯ ಪಟ್ಟರು.


ಅವರು ಪಟ್ಟಣದ ಬಾಲಭವನದಲ್ಲಿ ನಡೆದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಅಭಿನವ ಪ್ರಕಾಶನ ಬೆಂಗಳೂರು, ಮಕ್ಕಳ ಸಾಹಿತ್ಯಾಸಕ್ತರ ಗೆಳೆಯರ ಬಳಗ ಧಾರವಾಡ ಇವರ ಸಹಯೋಗದಲ್ಲಿ 2022 ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲಸಾಹಿತ್ಯ ಪುರಸ್ಕೃತ ತಮ್ಮಣ್ಣ ಬೀಗಾರ್ ಅವರಿಗೆ ಸಾಹಿತ್ಯಾಭಿನಂದನೆ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಮ್ಮಣ್ಣ ಬೀಗಾರ್ ರವರ ಬರವಣಿಗೆಯನ್ನು ಸರಿಯಾಗಿ ಮೊದಲೆ ಗುರುತಿಸಬೇಕಾಗಿತ್ತು.
ದಿನಕರ ದೇಸಾಯಿ ಯವರಂತೆ ಸ್ಪಷ್ಟವಾಗಿ ಮಕ್ಕಳ ಸಾಹಿತ್ಯ ವನ್ನು ಯಾರು ಬರೆದಿಲ್ಲಾ.
ಸಾಮಾಜಿಕ ಪ್ರಜ್ಞೆಯನ್ನು ಇಟ್ಟುಕೊಂಡು ಕೊಂಡು ಬರೆದವರು ಆರ್ ವಿ ಭಂಡಾರಿಯವರು.
ಉತ್ತರ ಕನ್ನಡ ಜಿಲ್ಲೆಯ ಮಕ್ಕಳ ಸಾಹಿತಿಗಳು ಮಾಡಿದ ಸಾಧನೆಯನ್ನು ಬೆರೆಲ್ಲೂ ಯಾರು ಮಾಡಿಲ್ಲ.
ನನ್ನ ಒಳಗಿನ ಬರವಣಿಗೆ ಎಂದು ಬರೆಯಬೇಕು. ಎಲ್ಲವನ್ನೂ ಅರ್ಥ ಮಾಡಿಕೊಂಡ ತಮ್ಮಣ್ಣ ಬೀಗಾರ್ ರವರು ಮಲೆನಾಡಿನ ಮಕ್ಕಳ ಬಾಲ್ಯದ ಮನಸ್ಸನ್ನು ಚನ್ನಾಗಿ ಗ್ರಹಿಸಿ ತುಂಬಾ ಸೊಗಸಾಗಿ ಬರೆದಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಯ ಬಾಲ ಸಾಹಿತ್ಯ ಪುರಸ್ಕಾರ ಪಡೆದ “ಬಾವಲಿ ಗುಹೆ” ಯ ಮೂರನೇ ಮುದ್ರಣ ಹಾಗೂ “ಕೋಲ್ಜೇನು” ಮಕ್ಕಳಿಗಾಗಿ ಬಾಲ್ಯದ ಲಹರಿ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಕೊಳಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಬಳ್ಳಾರಿಯ ಡಾ, ಶಿವಲಿಂಗಪ್ಪ ನಂದಿಹಾಳ, ಗದಗದ ಡಾ, ವಿನಾಯಕ ಕಮತದ, ಜಿ ಜಿ ಹೆಗಡೆ ಬಾಳಗೋಡ, ಕಸಾಪದ ತಾಲೂಕು ಅಧ್ಯಕ್ಷ ಗೋಪಾಲ್ ನಾಯ್ಕ ಉಪಸ್ಥಿತರಿದ್ದರು.

ಕುಮಾರಿ ಮಹಿಮಾ ಹೆಗಡೆ ಬಾವಲಿ ಗುಹೆ ಪುಸ್ತಕದ ಕುರಿತು ಅನಿಸಿಕೆ ವ್ಯಕ್ತ ಪಡಿಸಿದರು.
ಬಾಲಿಕೊಪ್ಪ ಶಾಲೆಯ ವಿದ್ಯಾರ್ಥಿಗಳು ಬಿಗಾರ್ ರವರ ಮಕ್ಕಳ ಕವನ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬೆಂಗಳೂರು ಅಭಿನವ ಪ್ರಕಾಶನದ ನ.ರವಿಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪತ್ರಕರ್ತ ಸುರೇಶ ಕಡಕೇರಿ ಸ್ವಾಗತಿಸಿದರು. ಎಮ್ ಆರ್ ಭಟ್ ನಿರೂಪಿಸಿದರು.

WhatsApp
Facebook
Telegram
error: Content is protected !!
Scroll to Top