ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ಕ್ರೀಡಾ ಕೂಟ ಸಂಪನ್ನ

ಸಿದ್ದಾಪುರ :- ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ 17 ವರ್ಷ ವಯೋಮಿತಿಯ ಒಳಗಿನ ಪ್ರೌಢಶಾಲಾ ವಿದ್ಯಾರ್ಥಿಗಳ ಇಲಾಖಾ ಕ್ರೀಡಾ ಕೂಟವು ಪಟ್ಟಣದ ಎಂ ಜಿ ಸಿ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿ ನಡೆಯಿತು.


ಶಿರಸಿ ಶೈಕ್ಷಣಿಕ ಜಿಲ್ಲೆಯ 6 ತಾಲೂಕಿನಿಂದ 720 ವಿದ್ಯಾರ್ಥಿಗಳು, 100 ದೈಹಿಕ ಶಿಕ್ಷಕರು ಈ ಕ್ರೀಡಾ ಕೂಟದಲ್ಲಿ ಪಾಲ್ಗೊಂಡಿದ್ದರು.
ಕಬ್ಬಡ್ಡಿ, ಖೊ ಖೋ, ವಾಲಿಬಾಲ್, ತ್ರೊಬಾಲ್ ಬ್ಯಾಡ್ಮಿಂಟನ್ ಗುಂಪು ಆಟಗಳು ನಡೆದವು.
ಡಿಡಿಪಿಐ ಬಸವರಾಜ್ ಮಾತನಾಡಿ ಕ್ರೀಡಾ ಕೂಟಕ್ಕೆ ಇಲಾಖೆಯಿಂದ ಅನುಧಾನ ಕಡಿಮೆ ಇದೆ. ಆದರೂ ಬಿಇಓ ರವರು ಸ್ಥಳೀಯ ದಾನಿಗಳಿಂದ ಕ್ರೀಡಾ ಕೂಟವನ್ನು ಅದ್ದೂರಿಯಾಗಿ ನಿರ್ವಹಿಸಿದ್ದಾರೆ.
ಮಕ್ಕಳು ತಮ್ಮ ಪರೀಶ್ರಮದಿಂದ ಗಲ್ಲುತ್ತಿದ್ದೀರಿ. ನಮ್ಮಲ್ಲಿ ಇಂದು ದೈಹಿಕ ಪರಿಶ್ರಮ ಕಡಿಮೆ ಆಗಿದೆ. ಆರೋಗ್ಯ ಕರವಾದ ಮನಸ್ಸು ಇರಲು, ದೈಹಿಕ ಪರಿಶ್ರಮ ಇರಬೇಕು, ದೈಹಿಕ ಶಿಕ್ಷಕರು ಮಕ್ಕಳಿಗೆ ಹೆಚ್ಚಿನ ತರಬೇತಿ ನಿಡಬೇಕು, ಶಕ್ತಿ ಇದ್ದರೆ ಸಾಲಲ್ಲ. ಅದಕ್ಕೆ ಸರಿಯಾದ ಮಾರ್ಗದರ್ಶನ ಅವಶ್ಯಕ. ಮಕ್ಕಳ ತಾಂತ್ರಿಕ ಕೌಶಲಗಳನ್ನು ಶಿಕ್ಷಕರು ಗುರುತಿಸಬೇಕು ಎಂದರು.
ದ್ವಜಾರೋಹಣ ಮಾಡಿ ಕಾರ್ಯಕ್ರಮ ಉದ್ಘಾಟಿಸಿದ ಪಟ್ಟಣ ಪಂಚಾಯತ ಅಧ್ಯಕ್ಷೆ ಚಂದ್ರಕಲಾ ಎಸ್ ನಾಯ್ಕ ಮಾತನಾಡಿ
ಎಲ್ಲರೂ ಗೆಲುವು ಬಯಸುತ್ತಾರೆ, ಆದರೆ ಸೋಲು ಗೆಲುವ ಮುಖ್ಯವಲ್ಲ. ಆಟದಲ್ಲಿ ಭಾಗವಹಿಸುವುದು ಮುಖ್ಯ. ಸೋತವರು ಇದರಿಂದ ಅನುಭವ ಪಡೆದು ಮುಂದೇ ಗೆಲ್ಲಲು ಸಾಧ್ಯವಾಗುತ್ತದೆ ಎಂದರು.
ಪಟ್ಟಣ ಪಂಚಾಯತ ಉಪಾಧ್ಯಕ್ಷ ರವಿಕುಮಾರ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ದೈಹಿಕ ಪರಿವೀಕ್ಷ ವಸಂತ ಭಂಢಾರಿ, ಶಿರಸಿ ಬಿ ಇ ಓ ಎಮ್ ಎಸ್ ಹೆಗಡೆ, ಯಲ್ಲಾಪುರ ಬಿ ಇ ಓ ಎನ್ ಆರ್ ಹೆಗಡೆ, ಪಿ ಎಂ ಪೋಷಣ ಅಭಿಯಾನದ ಶಿಕ್ಷಣಾಧಿಕಾರಿ ಜಿ ಆಯ್ ನಾಯ್ಕ, ಉಪ ನಿರ್ದೇಶಕರ ಕಚೇರಿಯ ಪರಶುರಾಮಪ್ಪ, ದೈಹಿಕ ಪರಿವೀಕ್ಷಕ ರಾಜು ನಾಯ್ಕ, ಸಹ ಶಿಕ್ಷಕರ ಸಂಘದ ಅಧ್ಯಕ್ಷ, ಆರ್ ಆರ್ ನಾಯ್ಕ, ಕಸಾಪ ತಾಲೂಕಾಧ್ಯಕ್ಷ ಗೋಪಾಲ ನಾಯ್ಕ, ಪ್ರಾ.ಶಾ ಶಿ ಸಂಘದ ಅಧ್ಯಕ್ಷ ಸತೀಶ ಹೆಗಡೆ, ಕಾರ್ಯದರ್ಶಿ ಲೋಕೇಶ ನಾಯ್ಕ, ಅಕ್ಷರ ದಾಸೋಹದ ಭೀಮೇಶ್, ಶಿರಸಿ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ತಾಲೂಕಿನ ದೈಹಿಕ ಪರಿವೀಕ್ಷಕರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಕ ಕೆ ಬಿ ನಾಯ್ಕ ಪ್ರತಿಜ್ಞಾ ವಿಧಿ ಬೋಧಿಸಿದರು.
ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ ಸ್ವಾಗತಿಸಿದರು.
ಶಿಕ್ಷಕ ಟಿ ಎನ್ ಭಟ್ಟ ನಿರೂಪಿಸಿದರು. ಬಿ ಆರ್ ಸಿ ಯ ಚೈತನ್ಯಕುಮಾರ ವಂದಿಸಿದರು.

WhatsApp
Facebook
Telegram
error: Content is protected !!
Scroll to Top