ಭಟ್ಕಳ ಅತಿವೃಷ್ಟಿ ನಷ್ಟಪರಿಹಾರದ ಬಗ್ಗೆ ಉಸ್ತುವಾರಿ ಸಚಿವರ ಅವಲೋಕನ

ತಾಲೂಕಾಡಳಿತ ಅಧಿಕಾರಿಗಳೊಂದಿಗೆ ಸಭೆ

ಭಟ್ಕಳದಲ್ಲಿ ಸುರಿದ ಬಾರಿ ಅತಿವೃಷ್ಟಿಯ ಕಾರಣ ಕೊಟ್ಯಾಂತ ನಷ್ಟ ಉಂಟಾಗಿದ್ದು ನಷ್ಟ ಅನುಭವಿಸಿದ ಪ್ರತಿಯೊಬ್ಬರಿಗೂ ಕರ್ನಾಟಕ ಸರಕಾರ ನಷ್ಟ ಪರಿಹಾರದ ಬರವಸೆಯನ್ನು ನಿಡಿತ್ತು ಈ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಯಾವ ಪ್ರಮಾಣದಲ್ಲಿ ನಷ್ಟ ಪರಿಹಾರ ನಡೆಯುತ್ತಿದೆ ಎಂಬುವುದರ ಅವಲೋಕನಾ ಸಭೆಯನ್ನು ಭಟ್ಕಳ ತಾಲೂಕಾಡಳಿತದ ಜೊತೆ ನಡೆಸಿದರು

ಈ ಸಂದರ್ಬದಲ್ಲಿ ಅವರು ಬಡ ಅಮಾಯಕರಿಗೆ ನಷ್ಟ ಪರಿಹಾರವನ್ನು ಒದಗಿಸುವ ಕೆಲಸ ಮಾಡಿ ಸರಕಾರ ನಿಮ್ಮೊಂದಿಗಿದೆ ನಾನು ಇಲ್ಲಿ ರಾಜಿ ಪಂಚಾಯತಿಯನ್ನು ಮಾಡಲು ಬಂದಿಲ್ಲಾ ನಷ್ಟ ಪರಿಹಾರವನ್ನು ಸರಿಯಾಗಿ ಮಾಡಿ ಇಲ್ಲವಾದಲ್ಲಿ ಅಂತಹ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು

ಈ ಸಂದರ್ಬದಲ್ಲಿ ಶಾಸಕ ಸುನಿಲ್ ನಾಯ್ಕ ನಷ್ಟ ಪರಿಹಾರವನ್ನು ಸರಿಯಾಗಿ ಮಾಡಲಿಲ್ಲ ಎಂದು ಏಕಾಏಕಿ ತಾಲೂಕ ತಹಶಿಲ್ದಾರರ ಮೇಲೆ ಅನಾವಶ್ಯಕ ಎರ್ರಾಬಿರ್ರಿ ಎರಿ ಹೊದರು ನಾನು ಹೇಳಿದ ಕೆಲಸ ನೀವು ಮಾಡುವುದಿಲ್ಲಾ ಎಂದು ಪಕ್ಕದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಇರುವುದನ್ನು ಮರೆತವರಂತೆ ಎರಿ ಹೋದರು ತಹಶಿಲ್ದಾರ್ ಸುಮಂತ ಅವರು ಕಾನೂನು ಪ್ರಕಾರ ಏನಿರುತ್ತೊ ಅದನ್ನು ನಾನು ಮಾಡುತ್ತಿದ್ದೆನೆ ಎಂದು ನಯವಾಗೆ ಉತ್ತರಿಸಿದರು

ಸಭೆಯ ನಂತರ ಕೆಲವು ವ್ಯಕ್ತಿಗಳು ತಮಗೆ ಕಲ್ಲು ಕ್ವಾರಿ ನಡೆಸಲು ಸಹಕರಿಸ ಬೇಕು ಎಂದು ವಿನಂತಿಸಿಕೊಂಡರು

ಈ ಸಂದರ್ಬದಲ್ಲಿ ಸಹಾಯಕ ಆಯುಕ್ತರಾದ ಮಮತಾ ದೇವಿ, ತಾಲೂಕ ತಹಶಿಲ್ದಾರರಾದ ಸುಮಂತ ಬಿ , ಹಾಗು ತಾಲೂಕ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top