ಸಿದ್ದಾಪುರ: ತಾಲೂಕಿನ ಬೇಡ್ಕಣಿಯ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ 15.72 ಲಕ್ಷ ಲಾಭ

ಸಿದ್ದಾಪುರ: ತಾಲೂಕಿನ ಬೇಡ್ಕಣಿಯ ವ್ಯವಸಾಯ ಸೇವಾ ಸಹಕಾರಿ ಸಂಘವು 2021-22ನೇ ಸಾಲಿನಲ್ಲಿ 15.72 ಲಕ್ಷ ಲಾಭ ಗಳಿಸಿದೆ. ಎಂದು ಸಂಘದ ಅಧ್ಯಕ್ಷ ಗಣಪತಿ ನಾಯ್ಕ ಹೇಳಿಕೆ
ಬೇಡ್ಕಣಿಯ ಕೋಟೆ ಆಂಜನೇಯ ದೇವಾಲಯದ ಸಭಾಭವನದಲ್ಲಿ ಗುರುವಾರ ನಡೆದ 46ನೇ ವಾರ್ಷಿಕ ಸರ್ವ ಸಾಧಾರಣಾ ಸಭೆಯಲ್ಲಿ ಸಂಘದ ಅಧ್ಯಕ್ಷ ಗಣಪತಿ ನಾಯ್ಕ ಮಾಹಿತಿ ನೀಡಿ, ಸಂಘವು ಸಾಲ ವಸೂಲಾತಿಯಲ್ಲಿ 100% ಪ್ರಗತಿ ಸಾಧಿಸಿದ್ದು, ಕೆಡಿಸಿಸಿ ಬ್ಯಾಂಕಿನಿಂದ ಉತ್ತಮ ಸೊಸೈಟಿ ಎಂಬ ಪ್ರಶಸ್ತಿ ಪಡೆದುಕೊಂಡಿದೆ. ಪ್ರಸಕ್ತ ಸಾಲಿನಲ್ಲಿ 1.24 ಕೋಟಿ ರು ವ್ಯವಹಾರ ನಡೆಸಿದ್ದು, ವಾರ್ಷಿಕ ಖರ್ಚು ವೆಚ್ಚಗಳನ್ನು ತೆಗೆದಿರಿಸಿದ ನಂತರ 15.72 ಲಕ್ಷ ಲಾಭ ಗಳಿಸಿದೆ ಎಂದರು.
ಸದಸ್ಯ ಉಮೇಶ ನಾಯ್ಕ ಕಡಕೇರಿ ಮಾತನಾಡಿ, ಸದಸ್ಯರಿಗೆ ಡಿವಿಡೆಂಟ್ 8% ಕೊಡಬೇಕು. ಸೊಸೈಟಿಯ ಸಿಬ್ಬಂದಿಗಳಿಗೆ ನೀಡುವ ವೇತನದ ಕುರಿತು ಮಾಹಿತಿ ನೀಡುವಂತೆ ಆಗ್ರಹಿಸಿದರು.
ಈ ವೇಳೆ ಸಂಘದ ಉಪಾಧ್ಯಕ್ಷ ಬಾಬು ನಾಯ್ಕ, ನಿರ್ದೇಶಕರಾದ ಪ್ರಶಾಂತ ನಾಯ್ಕ ಕುಂಬ್ರಿಗದ್ದೆ, ಕೆ.ಟಿ.ನಾಯ್ಕ ಕಡಕೇರಿ, ಗಣಪತಿ ನಾಯ್ಕ ಹೊಸಗದ್ದೆ, ಅನಂತ ಗೌಡ, ಕೃಷ್ಣ ನಾಯ್ಕ ಬೇಡ್ಕಣಿ, ಗೌರ್ಯ ಹರಿಜನ, ಅಬ್ದುಲ್ ಖಾದರ್ ಸಾಬ್, ಮಹಾಲಕ್ಷ್ಮೀ ನಾಯ್ಕ, ಗೀತಾ ಹೆಗಡೆ, ರಾಜಕುಮಾರ ಹೆಗಡೆ, ಸೇರಿದಂತೆ ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಾಹಕ ಜಿ.ಕೆ.ಶಶಿಧರ ನಿರೂಪಿಸಿದರು.

WhatsApp
Facebook
Telegram
error: Content is protected !!
Scroll to Top