ಭಟ್ಕಳ ತಾಲೂಕ ಹೆಬ್ಳೇ ಗ್ರಾಮ ಪಂಚಾಯತ ಅಲ್ಲಿ ಬ್ರಷ್ಟಾಚಾರ ನಡೆದಿರುವುದು ಸಾಬಿತು

ಹೆಬ್ಳೆ ಗ್ರಾಮ ಪಂಚಾಯತ್ ಪಿಡಿಓ ಗೆ ಶೋಕಾಸ್ ನೋಟಿಸ್

ಅಧಿಕಾರಿಗಳ ಅಧ್ಯಕ್ಷರು ಮತ್ತು ಕೆಲವು ಸದಸ್ಯರ ತಲೆ ದಂಡಕ್ಕೆ ಕ್ಷಣಗಣನೆ

ಭಟ್ಕಳ ತಾಲೂಕ ಹೆಬ್ಳೆ ಗ್ರಾಮ ಪಂಚಾಯತ್ ಅಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ರಾಜ್ಯ ಮಾಹಿರಿ ಹಕ್ಕು ಮತ್ತು ಸಾಮಾಜಿಕ ಕರ‍್ಯಕರ್ತರ ವೇದಿಕೆಯ ಭಟ್ಕಳ ತಾಲೂಕ ಪ್ರಧಾನ ಕರ‍್ಯದರ್ಶಿ ನಾಗೇಶ ನಾಯ್ಕ ಹೆಬ್ಳೆ ಆರೋಪ ಸಾಭಿತಾದಂತಾಗಿದ್ದು ಪಂಚಾಯತ್ ಅಭಿವೃದ್ದಿ ಅಧಿಕಾರಿಗೆ ೧೨ ಆರೋಪಗಳಿಗೆ ಈಗಾಗಲೆ ಏರಡು ದಿನಗಳ ಗಡುವಿನಲ್ಲಿ ಉತ್ತರ ನೀಡಬೇಕು ಎಂದು ಶೋಕಾಷ್ ನೋಟಿಸ್ ನಿಡಲಾಗಿದ್ದು ಅಧಿಕಾರಿಗಳು ಹಾಗು ಗ್ರಾಮ ಪಂಚಾಯತ ಅಲ್ಲಿ ಭ್ರಷ್ಟಾಚಾರ ನಡೆಸಿದ ಅಧ್ಯಕ್ಷರು ಮತ್ತು ಕೆಲವು ಸದಸ್ಯರ ತಲೆದಂಡಕ್ಕೆ ಕ್ಷಣಗಣನೆ ಪ್ರಾರಂಬವಾಗಿದೆ

ಸುಮಾರು ಒಂದುವರೆ ವರ್ಷಗಳ ಹಿಂದೆ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕರ‍್ಯಕರ್ತರ ವೇದಿಕೆ ಭಟ್ಕಳ ಘಟಕದ ಪ್ರಧಾನ ಕಾರ್ಯದರ್ಶಿ ನಾಗೇಶ ನಾಯ್ಕ ಹೆಬ್ಳೆ ಇವರು ಹೆಬ್ಳೇ ಗ್ರಾಮ ಮಪಂಚಾಯತ್ ಅಲ್ಲಿ ಲಕ್ಷಗಟ್ಟಲೆ ಭ್ರಷ್ಟಾಚಾರ ನಡೆದಿರುತ್ತದೆ ಎಂದು ಮುಖ್ಯ ಕರ‍್ಯನರ‍್ವಹಣಾಧಿಕಾರಿ ಕಾರವಾರ ಇವರಲ್ಲಿ ದೂರನ್ನು ಸಲ್ಲಿಸಿದ್ದರು ಈ ಬಗ್ಗೆ ಜಿಲ್ಲಾ ಪಂಚಾಯತ್ ಆದೇಶದಂತೆ ತಾಲೂಕ ಪಂಚಾಯತ್ ಹಾಗು ಜಿಲ್ಲಾ ಪಂಚಾಯತ್ ಅಧಿಕಾರಿಗಳ ತಂಡ ಪರಿಶಿಲನೆ ನಡೆಸಿತ್ತು ಪರಿಶಿಲನೆಯಲ್ಲಿ ಈ ಗ್ರಾಮ ಪಂಚಾಯತ್ ಅಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಮಾಹಿತಿ ಗೋರೆತಂತಾಗಿದೆ ಈಗಾಗಲೆ ತಾಲೂಕ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಅಧಿಕಾರಿಗಳ ತನಿಖಾ ತಂದ ವರದಿಯನ್ನು ಜಿಲ್ಲಾ ಪಂಚಾಯತ್ ಮುಖ್ಯ ಕರ‍್ಯನರ‍್ವಹಣಾ ಅಧಿಕಾರಿಗಳಿಗೆ ವರದಿಯನ್ನು ಒಪ್ಪಿಸಿದ್ದು ಭ್ರಷ್ಟಾಚಾರದ ಆರೋಪ ಹೊತ್ತಿರುವ ಹೆಭ್ಳೆ ಗ್ರಾಮ ಪಂಚಾಯತ್ ಹಿಂದಿ ಪಿಡಿಓ ಜಯಂತಿ ನಾಯ್ಕ ಅವರಿಗೆ ಎರಡು ದಿನಗಳ ಅವದಿಯನ್ನು ನೀಡಿ ವರದಿಯಲ್ಲಿ ಸಾಭಿತಾಗಿರುವ ೧೨ ಭ್ರಷ್ಟಾಚಾರದ ಆರೋಪಗಳಿಗೆ ಉತ್ತರ ನೀಡುವಂತೆ ಶೊಕಾಷ್ ನೋಟಿಸನ್ನು ನಿಡಲಾಗಿದೆ.

ತಾಲೂಕಿನ ಹೆಭ್ಳೇ ಹ್ರಾಮ ಪಂಚಾಯತ್ ಅಲ್ಲಿ ಭ್ರಷ್ಟಾಚಾರ ನಡೆಸಿರುವ ಅಧಿಕಾರಿಗಳು ಅಧ್ಯಕ್ಷರು ಹಾಗು ಕೆಲವು ಸದಸ್ಯರುಗಳಿಗೆ ಚಳಿಜ್ವರ ಈಗಾಗಲೆ ಪ್ರಾರಂಬವಾಗಿದ್ದು ಇವರೆಲ್ಲರ ತಲೆದಂದಕ್ಕೆ ಕ್ಷಣಗಣನೆ ಪ್ರಾರಂಬವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ ಒಟ್ಟಾರೆ ರಾಜ್ಯ ಮಾಹಿತಿಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ಹೋರಾಟಕ್ಕೆ ಜಯ ಸಂದAತಾಗಿದೆ

ಮುಖ್ಯವಾಗಿ ಇಲ್ಲಿನ ಗ್ರಾಮ ಪಂಚಾಯತ್ ಸರಕಾರಿ ಅಧಿಕಾರಿಗಳಿಗಷ್ಟೆ ಶಿಕ್ಷೇಯಾದರೆ ಏನು ಸಾದಿಸಿದಂತಾಗುವುದಿಲ್ಲಾ ಇದಕ್ಕೆ ಮುಖ್ಯವಾಗಿ ಕಾರಣರಾಗಿರುವ ಗ್ರಾಮ ಪಂಚಾಯತ್ ಜನ ಪ್ರತಿನಿದಿಗಳ ತಲೆದಂದವಾದರೆ ಮಾತ್ರ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತಗಳಲ್ಲಿ ಇಂತಹ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದಂತಾಗುತ್ತದೆ ಇಲ್ಲಿ ಸದಸ್ಯರ ಸಂಬAದಿಕರಿಗೆ ಚೆಕ್ ಅನ್ನು ಪಾಸ್ ಮಾಡಲಾಗಿದೆ ಎಂಬ ಒಂದು ಆರೋಪ ಕೂಡ ಇದೆ ಆದಕಾರಣ ಇಂತಹ ಸದಸ್ಯರವಿರುದ್ದ ಕಾನೂನು ಕ್ರಮದ ಹೊರಾಟ ಮಾಡಿ ಇಲೆಕ್ಷನ ಕಮೀಷನ್ ಗಮನಕ್ಕೆ ತಂದು ಇಂಥ ಸದಸ್ಯರ ಸದಸ್ಯತ್ವ ರದ್ದುಗೋಳಿಸಿ ೫ ವರ್ಷಗಳ ವರೆಗೆ ಕಾನೂನಿನ ಪ್ರಕಾರ ಚುನಾವಣೆಗೆ ಸ್ಪರ್ದಿಸಲು ಅನರ್ಹರರನ್ನಾಗಿಸ ಬೇಕು ಎನ್ನುವುದು ಸರ‍್ವಜನಿಕರ ಒಕ್ಕೋರಲಿನ ಕೂಗಾಗಿದೆ

ಮುಂದಿನ ದಿನಗಳಲ್ಲಿ ಭಟ್ಕಳ ತಾಲೂಕಿನಲ್ಲಿ ನಡೆದಿರುವ ನಡೆಯುತ್ತಿರುವ ಬ್ರಷ್ಟಾಚಾರದ ಬಗ್ಗೆ ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ವತಿಯಿಂದ ನಿರಂತರ ಹೋರಾಟ ನಡೆಸಿ ಭ್ರಷ್ಟಾಚಾರಿಗಳನ್ನು ಬುಡಸಹಿತ ಕಿತ್ತೆಸೆಯಲ್ಲಿದ್ದೆವೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷರಾದ ರಮೇಶ ಕುಣಿಗಲ್ ಹೇಳಿದ್ದಾರೆ

WhatsApp
Facebook
Telegram
error: Content is protected !!
Scroll to Top