ಮುರ್ಡೆಶ್ವರ ತೆರ್ನಮಕ್ಕಿ ಕಟಗೇರಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪಿಟ್ ಆಡುತ್ತಿದ್ದ ಜೂಜುಕೊರರ ಮೇಲೆ ಪ್ರಕರಣ ದಾಖಲು

ಮುರ್ಡೆಶ್ವರ ತೆರ‍್ನಮಕ್ಕಿ ಕಟಗೇರಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪಿಟ್ ಜೂಜುಕೊರರ ಮೇಲೆ ಪ್ರಕರಣ ದಾಖಲು

ಎಂಟು ಆರೋಪಿಗಳನ್ನು ಹೇಡೆಮುರಿ ಕಟ್ಟಿದ ಪೋಲಿಸರು

ಭಟ್ಕಳ: ತಾಲೂಕಿನ ಮುರ್ಡೆಶ್ವರ ತೆರ್ನಮಕ್ಕಿ ಕಟಗೇರಿ ಸಾರ್ವಜನಿಕ ಸ್ಥಳದಲ್ಲಿ ತಮ್ಮ ಲಾಭಕೊಸ್ಕರ ಇಸ್ಪಿಟ್ ಎಲೆಗಳ ಮೇಲೆ ಹಣವನ್ನು ಕಟ್ಟಿ ಜುಗಾರಿ ಆಟವನ್ನು ಆಡುತ್ತಿದ್ದ ಬಗ್ಗೆ ಖಚಿತ ಮಾಹಿತ ಪಡೆದ ಮುರ್ಡೆಶ್ವರ ಪೋಲಿಸ್ ಠಾಣೆಯ ಎ ಎಸ್ ಐ ಅಂತೋನ ಎಸ್ ರ‍್ನಾಂಡಿಸ್ ಅವರು ಏಕಾಏಕಿ ದಾಳಿನಡೆಸಿ ಎಂಟು ಜೂಜುಕೊರರನ್ನು ಬಂದಿಸಿ ಪ್ರಕರಣ ದಾಖಲಿಸಿದ್ದಾರೆ

ಪೋಲಿಸರು ಚಾಪೆಯ ಕೆಳಗೆ ನುಗ್ಗಿದರೆ ಈ ಜೂಜುಕೊರರು ರಂಗೋಲಿಯ ಕೆಳಗೆ ನುಗ್ಗುತ್ತಾರೆ ತಾಲೂಕಿನಲ್ಲಿ ಪೋಲಿಸ್ ಇಲಾಖೆ ಮಟ್ಕಾ ಮತ್ತು ಇಸಿಟ್ ಅಡ್ಡಾಗಳನ್ನು ಮಟ್ಟಹಾಕಲು ಪ್ರಯತ್ನಿಸುತ್ತಿದ್ದರು ಈ ಜೂಜುಕೊರರು ಮಾತ್ರ ಜೂಜನ್ನು ಆಡದೆ ಒಂದು ಹನಿ ನೀರನ್ನು ಸೇವಿಸುದಿಲ್ಲ ಎಂಬ ಪ್ರತಿಜ್ಙೇ ಮಾಡಿದವರಂತೆ ವರ್ತಿಸುತ್ತಿದ್ದಾರೆ.
ಸುಮಾರು ಎಂಟು ಜನ ಜೂಜುಕೊರರು ಮುರ್ಡೆಶ್ವರ ತೆರ್ನಮಕ್ಕಿ ಕಟಗೇರಿ ಸಾರ್ವಜನಿಕ ಸ್ಥಳದಲ್ಲಿ ತಮ್ಮ ಲಾಭಕ್ಕಾಗಿ ಇಸ್ಪಿಟ್ ಎಲೆಗಳ ಮೇಲೆ ಹಣವನ್ನು ಕಟ್ಟಿ ಇಸ್ಪಿಟ್ ಆಟವನ್ನು ಆಡುತ್ತಿದ್ದರು ಈ ಬಗ್ಗೆ ಮುರ್ಡೆಶ್ವರ ಪೋಲಿಸ್ ಠಾಣೆ ಎ ಎಸ್ ಐ ಅಂತೋನ ಎಸ್ ಪರ್ನಾಂಡಿಸ್ ಅವರು ಖಚಿತ ಮಾಹಿತಿಯ ಮೇರೆಗೆ ಜೂಜುಕೊರರು ಆಟವಾಡುತ್ತಿದ್ದ ಸ್ಥಳಕ್ಕೆ ಏಕಾಏಕಿ ದಾಳಿ ನಡೆಸಿ ಭಟ್ಕಳ ಕಾಯ್ಕಿಣಿ ತೆರ್ನಮಕ್ಕಿ ಕೊಲರ ಮನೆ ವೃತ್ತಿಯಲ್ಲಿ ಚಾಲಕನಾಗಿರುವ ಮಾರುತಿ ತಿಮ್ಮಯ್ಯ ನಾಯ್ಕ , ಮಾವಳ್ಳಿ ೨ ಗುಮ್ಮನಹಕ್ಲು ಜಾಡರ ಮನೆ ವೃತ್ತಿಯಲ್ಲಿ ಚಾಲಕ ಸುರೇಶ ಜಟ್ಟಾ ನಾಯ್ಕ , ತಾಲೂಕಿನ ಕಾಯ್ಕಿಣಿ ಬಸ್ತಿಯ ಗುಂಜಿಮನೆ ವೃತ್ತಿಯಲ್ಲಿ ಚಾಲಕನಾಗಿರುವ ವೆಂಕಟರಮಣ ಜಟ್ಟಾ ನಾಯ್ಕ ಹಾಗೆ ಮುಡೆಶ್ವರ ಮಾವಳ್ಳಿ ೨ ಚಂದ್ರಹಿತ್ಲು ಬೈರನಮನೆ ವೃತ್ತಿಯಲ್ಲಿ ಶಿಲ್ಪಿಯಾಗಿದ್ದ ಶ್ರೀಕಾಂತ ನಾರಾಯಣ ನಾಯ್ಕ ತಾಲೂಕಿನ ಕೈಕಿಣಿ ಬಸ್ತಿ ಕೈಮರ‍್ಗಿ ಮನೆ ವೃತ್ತಿಯಲ್ಲಿ ಶಿಲ್ಪಿ ಕೆಲಸ ಮಾಡುತ್ತಿದ್ದ ರಮೇಶ ನಾಗಪ್ಪ ನಾಯ್ಕ, ಕಾಯ್ಕಿಣಿ ಬಿದ್ರಮನೆ ಹಾದಯ್ಯನ ಮನೆ ಶಿಲ್ಪಿ ಕೆಲಸ ಮಾಡುತ್ತಿದ್ದ ರಾಮ ಮಾದೇವ ನಾಯ್ಕ, ಮಾವಳ್ಳಿ ಗುಮ್ಮನ ಹಕ್ಲು ಪರಮುಂಜಿ ಮನೆ ಟೆಲರಿಂಗ್ ವೃತ್ತಿಯ ಸುಬ್ರಮಣ್ಯ ಜಟ್ಟಾ ನಾಯ್ಕ , ಹಾಗು ಕಾಯ್ಕಿಣಿ ತೆರ್ನಮಕ್ಕಿ ಪೋಕಜ್ಜಿ ಮನೆ ಚಾಲಕ ವೃತ್ತಿ ಮಾಡುತ್ತಿರುವ ರಾಜೇಶ ಮಾದೇವ ನಾಯ್ಕ ಎಂಬ ಒಟ್ಟು ಎಂಟು ಜನರ ಮೇಲೆ ದಾಳಿ ನಡೆಸಿ ೬೬೩೦ ನಗದು ಹಣ ಇಸ್ಪಿಟ್ ಎಲೆಗಳು ಮುಂತಾದವುಗಳನ್ನು ವಶಪಡಿಸಿಕೊಂಡು ಆಪಾಧಿಕತರ ಮೇಲೆ ಮುರ್ಡೆಶ್ವರ ಪೊಲೀಸ್ ಠಾಣೆಯಲ್ಲಿ ಕಲಂ ೮೭ ಕೆ ಪಿ ಆಕ್ಟ ಅಡಿಯಲ್ಲಿ ದೂರು ದಾಖಲಿಸಲಾಗಿದೆ

WhatsApp
Facebook
Telegram
error: Content is protected !!
Scroll to Top