ಭಟ್ಕಳ ಪಿ ಎಲ್ ಡಿ ಭ್ಯಾಂಕ್ ಇದರ ೫೦ ನೇ ವಾರ್ಷಿಕ ಮಹಾಸಭೆ

ಸಭೇಯಲ್ಲಿ ಮೃತ ನಿರ್ದೆಶಕ ಮಂಜುನಾಥ ನಾಯ್ಕ ಅವರ ಕುಟುಂಬಕ್ಕೆ ಬ್ಯಾಂಕ್ ನಿರ್ದೇಶಕರು ಅಪಮಾನ ಮಾಡಿದ್ದಾರೆ ಎಂಬ ಆರೋಪ

ಭಟ್ಕಳ ತಾಲೂಕಿನ ಹಣಕಾಸು ಸಂಸ್ಥೇಯಲ್ಲೊAದಾದ ಭಟ್ಕಳ ಕ್ರಷೀ ಹಾಗು ಗ್ರಾಮೀಣ ಅಭಿವೃದ್ದಿ ಸಹಕಾರಿ ಭ್ಯಾಂಕ್ ನಿಯಮಿತ ಭಟ್ಕಳ ಇದರ ೫೦ ನೇ ವಾರ್ಷಿಕ ಮಹಾಸಭೆ ಹಮ್ಮಿಕೊಳ್ಳಲಾಯಿತು

ಸಭೆಯಲ್ಲಿ ಬ್ಯಾಂಕಿನ ಮೃತ ನಿರ್ದೆಶಕರಾದ ಮಂಜಪ್ಪ ನಾಯ್ಕ ಅವರ ಸಂಬAದಿ ಜಾಲಿ ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಶಾಂತರಾಮ್ ನಾಯ್ಕ ಮಾತನಾಡುತ್ತ ಬ್ಯಾಂಕಿನ ನಿಷ್ಟಾವಂತ ನಿರ್ದೆಶಕರಾದ ಮಂಜಪ್ಪ ನಾಯ್ಕ ಅವರು ವಾಹನ ಅಪಘಾತಕ್ಕೆ ಒಳಗಾಗಿ ಅಕಾಲಿಕ ಮರಣವನ್ನಪ್ಪುತ್ತಾರೆ ಈ ಹಿನ್ನೆಲೆಯಲ್ಲಿ ಅವರ ಹೆಂಡತಿಗೆ ಮೊದಲು ನಿರ್ದೇಶಕರಾಗಿ ನೇಮಕ ಮಾಡಿಕೊಳ್ಳಲು ವಿನಂತಿಸಲಾಯಿತು ಆದರೆ ನಿರ್ದೆಶಕರ ಹುದ್ದೆಯಿಂದ ಆ ಕುಟುಂಬಕ್ಕೆ ಹೊಟ್ಟೆತುಂಬಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಸಂಗತಿ ತಿಳಿದಾದ ಅವರ ಪತ್ನಿ ತನಗೆ ಸಂಘದಲ್ಲಿ ನರ‍್ದೇಶಕ ಹುದ್ದೆ ಬೇಡ ತನಗೆ ಸಂಘದಲ್ಲೊAದು ನೌಕರಿಯನ್ನು ಕೋಡಿ ಎಂಬ ವಿನಂತಿಯನ್ನು ಮುಂದಿಡುತ್ತಾರೆ ಆದರೆ ಇದೆ ಬ್ಯಾಂಕಿನ ನಿರ್ದೆಶಕರೊಬ್ಬರು ಆ ಮಹಿಳೆಗೆ ಕರೆ ಮಾಡಿ ನಿಮಗೆ ಸಂಘದಲ್ಲಿ ಕೆಲಸ ಮಾಡುವಷ್ಟು ವಿಧ್ಯ ಅಹರರ್ತೆ ಇಲ್ಲ ನೀವು ನಮ್ಮ ಸಂಗದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಅವಮಾನ ಮಾಡುತ್ತಾರೆ ಇದು ಒಬ್ಬರು ನಿಷ್ಟಾವಂತ ನರ‍್ದೇಶಕರ ಕುಟ್ಟುಂಬಕ್ಕೆ ಮಾಡಿರುವ ಅವಮಾನ ಎಂದು ಅವªರ ಸಂಬAದಿಯೋಬ್ಬರು ಸಭೆಯಲ್ಲಿ ಆಕ್ರೋಶವನ್ನು ವ್ಯಕ್ತ ಪಡಿಸುತ್ತಾರೆ ಈ ಬಗ್ಗೆ ಸಂಘದ ಅಧ್ಯಕ್ಷ ಶಾಸಕ ಸುನಿಲ್ ನಾಯ್ಕ ಸಮಜಾಯಿಸಿ ಕೊಡಲು ಹೋಗುತ್ತಾರೆ ಇದಕ್ಕೆ ಶಾಂತರಾಮ್ ನಾಯ್ಕ ಪ್ರತಿಕ್ರಿಯಿಸಿ ನಾನು ಈಗಾಗಲೆ ಅವರ ಹೆಂಡತಿಗೆ ಕೆಲಸ ಕೋಡಲು ಸಾಧ್ಯವಾಗದಿದ್ದರೆ ಅವರ ಮಕ್ಕಳಿಗಾದರು ಒಂದು ನೌಕರಿ ಕೊಡಿ ಎಂದು ರ‍್ಜಿ ಸಲ್ಲಿಸಿರುತ್ತೆನೆ ಆದರೆ ನೀವುಗಳು ಯಾವುದೆ ಪ್ರತಿಕ್ರಿಯೇಯನ್ನು ವ್ಯಕ್ತಪಡಿಸಿರುವಿಲ್ಲಾ ನೀವು ಕಾನೂನು ಪ್ರಕಾರ ಮೃತರ ಹೆಂಡತಿಗೆ ಊದ್ಯೋಗ ಕೊಡಲು ಸಾಧ್ಯವಾಗದಿದ್ದರು ಪರವಾಗಿಲ್ಲಾ ಅವರಿಗೆ ನಿಮ್ಮ ನರ‍್ದೇಶಕರು ಆ ಪರಿ ಅವಮಾನ ಮಾಡಬಾರದಿತ್ತು ಎಂದು ತಮ್ಮ ದುಖಃವನ್ನು ವ್ಯಕ್ತಪಡಿಸಿದರು

ಇದೆ ಸಂದರ್ಬದಲ್ಲಿ ಸದಸ್ಯರಾದ ಗೋಪಾಲ ಮಂಜುನಾಥ ನಾಯ್ಕ ಅವರ ಭ್ಯಾಂಕಿನ ಠೇವಣಿಗಳನ್ನು ಬೇರೆ ಬೇರೆ ಭ್ಯಾಂಕಿನಲ್ಲಿ ಇಟ್ಟಿರುವ ಬಗ್ಗೆ ಬೇರೆ ಭ್ಯಾಂಕಿನಲ್ಲಿ ಠೇವು ಪಡೆದ ಬಗ್ಗೆ ಶಾಖಾ ಕಛೇರಿಗಳ ನರ‍್ಮಾಣದ ಬಗ್ಗೆ ಆದ ಖರ್ಚು ವೆಚ್ಚದ ಮಾಹಿತಿ ಸಿಬ್ಬಂದಿ ನೇಮಕಾತಿಯ ಬಗ್ಗೆ ಪ್ರಧಾನ ಖಚೇರಿ ಮತ್ತು ಶಾಖಾ ಕಚೇರಿಗಳು ಎಷ್ಟೇಷ್ಟು ಲಾಭ ನಷ್ಟದಲ್ಲಿದೆ ಶೇರು ಟಿಬೇಡಿಂಟ್ ಎಷ್ಟು ಪ್ರಮಾಣದಲ್ಲಿ ನಿಡಲಾಗಿದೆ ಈ ಹಿಂದೆ ರಿಕ್ಷಾ ನಿಲ್ದಾಣವನ್ನು ನರ‍್ಮಾಣಕ್ಕೆ ಯಾವ ಮೂಲದಿಂದ ಖರ್ಚು ಹಾಕಲಾಗಿದೆ ಬ್ಯಾಂಕಿನ ೨೦೨೧ ಮತ್ತು ೨೨ ರ ಟಡಿಟ್ ಅಡಾವೆ ಜಮಾ ಖರ್ಚು ಲಾಭ ಹಾನಿ ಪತ್ರಿಕೆ ೨೦೨೧ ೨೨ ನೆ ಸಾಲಿನ ವರ‍್ಷೀಕ ಮಹಾಸಭೆಗೆ ಅರ್ಹ ಸದಸ್ಯರ ಲಿಷ್ಟ ಅಧ್ಯಕ್ಷರು ನರ‍್ದೇಶಕರು ಮತ್ತು ಅವರ ಸಂಬAದಿಗಳ ಸಾಲದ ಬಗ್ಗೆ ಮಾಹಿತಿ ಪ್ರಧಾನ ಕಛೇರಿ ಮತ್ತು ಶಾಖಾ ಕಛೇರಿ ದೃಡಿಕರಿಸಿದ ಪ್ರತಿ ಸಂಘದ ಸಿಬ್ಬಂದಿಗಳ ಮಾಹಿತಿ ಹಿಗೆ ಅನೇಕ ಮಾಹಿತಿಗಳನ್ನು ನೀಡಲು ಅರ್ಜಿ ಸಲ್ಲಿಸಿದರು ಯಾವುದೇ ಮಾಹಿತಿ ನಿಡಿರುವುದಿಲ್ಲಾ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು ಈ ಸಂರ‍್ಬದಲ್ಲಿ ಸಂಘದ ವ್ಯವಸ್ಥಾಪಕರು ತಡಬಡಾಯಿಸುತ್ತ ಸಭೇ ಮುಗಿದ ನಂತರ ಈ ಬಗ್ಗೆ ನರ‍್ದೇಶಕರ ಮೀಟಿಗ್ ಕರೆದು ನಿಮಗೆ ಮಾಹಿತಿ ಒದಗಿಸಲಲಾಗುವುದು ಎಂದು ಹೇಳುವುದರ ಮೂಲಕ ಬೀಸೋ ದೋಣ್ಣೆಯಿಂದ ತಪ್ಪಿಸಿಕೊಳ್ಳುವ ಕೆಲಸವನ್ನು ಮಾಡಿದ್ದಾರೆ.
ಇದೆ ಸಂದರ್ಬದಲ್ಲಿ ಮುಖ್ಯವಾಗಿ ಸಂಘದ ಪ್ರಧಾನ ಕಛೇರಿಯ ಮೆಲ್ಚಾವಣಿಗಾಗಿ ಟೆಂಡರ್ ಕರೆಯದೆ ಜನರಲ್ ಬಾಡಿಯಿಂದ ಯಾವುದೆ ಅಪ್ರೂವಲ್ ತೆಗೆದುಕೊಳ್ಳದೆ ೪೪ ಲಕ್ಷಗಳನ್ನು ಖರ್ಚು ಮಾಡಲಾಗಿದೆ ೨ ಲಕ್ಷಕ್ಕಿಂತ ಹೆಚ್ಚಿನ ಖರ್ಚು ಮಾಡಲು ಕಾನೂನು ಪ್ರಕಾರ ಟೆಂಡರ್ ಕರೆಯ ಬೇಕು ಎಂದಿದೆ ಆದರೆ ನೀವು ೪೪ ಲಕ್ಷಗಳ ಮೇಲ್ಚಾವಣಿ ಮಾಡಲು ಯಾವುದೆ ಟೆಂಡರ್ ಕರೆಯದೆ ಯಾವುದೆ ಅಪ್ರೂವಲ್ ಪಡೆಯದೆ ೪೪ ಲಕ್ಷ ಖರ್ಚು ಮಾಡಲಾಗಿದೆ ಎಂದು ಸದಸ್ಯ ಮಹೇಶ ನಾಯ್ಕ ಆರೋಪಿಸಿದರು ಈ ಬಗ್ಗೆ ಅಧ್ಯಕ್ಷರು ಶಾಸಕರು ಆದ ಸುನಿಲ್ ನಾಯ್ಕ ಮಾತನಾಡಿ ಅದು ಹಳೆಯ ಕಟ್ಟಡವಾಗಿದ್ದು ಅಲ್ಲದೆ ನಮ್ಮ ಸಂಘದ ಬಾಡಿಯ ಪವರ್ ಉಪಯೋಗಿಸಿ ನರ‍್ಮಿಸಿದ್ದೇವೆ ಎಂದು ಹೇಳಿದರು

ಹಾಗು ಈ ಹಿಂದೆ ಜನರಲ್ ಮಾನ್ಯೆಜರ್ ವಾಸು ನಾಯ್ಕ ಅವರು ನಿವೃತ್ತಿಯಾದ ನಂತರ ಸಂಘದ ಅಧ್ಯಕ್ಷರು ಶಾಸಕರು ಆದ ಸುನಿಲ್ ನಾಯ್ಕ ಆ ಸ್ಥಾನಕ್ಕೆ ನಿಮ್ಮ ಸಂಬAದಿಯನ್ನು ನೇಮಕ ಮಾಡಿಕೊಂಡಿದ್ದಿರಾ ವಾಸು ನಾಯ್ಕ ಅವರ ಪತ್ನಿಯವರಿದ್ದರು ಅಲ್ಲದೆ ಇತರ ಸಿನಿರ‍್ಸಗಳು ಕೂಡಾ ಇದ್ದರು ತಾವು ನಿಮ್ಮ ಸಂಬAದಿಗಳನ್ನು ಜನರಲ್ ಮ್ಯಾನೆಜರ್ ಆಗಿ ನೇಮಿಸಿರುತ್ತಿರಿ ಎಂದು ಕಠಿಣ ಪ್ರಶ್ನೇಯನ್ನು ಎಸೆದರು ಇದಕ್ಕೆ ಶಾಸಕ ಸುನಿಲ್ ನಾಯ್ಕ ಅವರು ಅದು ನಮ್ಮ ಸಂಘದ ಬಾಡಿಯ ಪವರ್ ಅನ್ನು ಉಪಯೋಗಿಸಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು

ಹೀಗೆ ಇಂದು ನಡೆದ ಪಿ ಎಲ್ ಡಿ ಭ್ಯಾಂಕ್ ೫೦ ನೇ ವರ‍್ಷೀಕ ಮಹಾಸಭೆಯಲ್ಲಿ ಪ್ರಶ್ನೋತ್ತರಗಳ ಸರಮಾಳೆಗಳೆ ಎರ್ಪಟ್ಟಿತ್ತು

ಈ ಸಂದರ್ಬದಲ್ಲಿ ಭ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿರ್ದೆಶಕರು , ಸದಸ್ಯರು ಹಾಗು ಇನ್ನಿತರರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top