ಕಚೇರಿ ಸಮಯದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ತುಮಕೂರು ಉಪವಿಭಾಗಾಧಿಕಾರಿ ಅಜಯ್ ಕುಮಾರ್

ನಾಗರಿಕ ಸೇವಾ ನಿಯಮಾವಳಿ ಉಲ್ಲಂಗಿಸಿದ ಉಪವಿಭಾಗಾಧಿಕಾರಿ ಅಜಯ್ ಕುಮಾರ್ ವಿರುದ್ದ ಹೊರಾಟಗಾರರ ಆಕ್ರೋಶ

ಜವಬ್ದಾರಿಯುತ ಅಧಿಕಾರಿಯಿಂದ ಕಛೇರಿಯಲ್ಲೆ ಹುಟ್ಟು ಹಬ್ಬದ ಹೆಸರಲ್ಲಿ ಮೋಜು ಮಸ್ತಿ

ತುಮಕೂರು: ಉಪವಿಭಾಗಾಧಿಕಾರಿ ಅಜಯ ಕುಮಾರ್ ನಾಗರಿಕ ಸೇವಾ ನಿಯಮಾಳಿ ಗಾಳಿಗೆ ತೂರಿ ಕಚೇರಿ ಸಮಯದಲ್ಲಿ ಸಾರ್ವಜನಿಕರನ್ನು ಹೊರಗಡೆ ಇಟ್ಟು ಕಚೇರಿ ಒಳಗೆ ಹುಟ್ಟುಹಬ್ಬ ಆಚರಿಸಿಕೊಂಡು ಕಾನೂನು ಉಲ್ಲಂಗಿಸಿರುವ ಬಗ್ಗೆ ವರದಿಯಾಗಿದೆ

ಕಚೇರಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದಕ್ಕೆ ಸಾಮಾಜಿಕ ಹೋರಟಗಾರ ಹಾಗೂ ದಲಿತ‌ಮುಖಂಡ ಜೆಟ್ಟಿ ಅಗ್ರಹಾರ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿ

ಕಚೇರಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಸಹಾಯಕ ಆಯುಕ್ತರ ವಿರುದ್ದ ಶಿಸ್ತುಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದರು ಹುಟ್ಟುಹಬ್ಬ ಆಚರಣೆಯಲ್ಲಿ ಭಾಗಿಯಾದ ಜಿಲ್ಲಾಮಟ್ಟದ ಎಲ್ಲಾ ಅಧಿಕಾರಿಗಳ ವಿರುದ್ಧ ಸರ್ಕಾರಕ್ಕೆ ಕ್ರಮವಹಿಸಲು ಜೆಟ್ಟಿ ಅಗ್ರಹಾರ ನಾಗರಾಜ್ ಒತ್ತಾಯ

ಮಳೆಯಿಂದ ಹಾನಿಯಾದ ಬೆಳೆ ಪರಿಹಾರ ಹಾಗೂ ಮನೆಗಳ ದುರಸ್ತಿ ಕ್ರಮಕ್ಕೆ ಕ್ರಮವಹಿಸಿದೆ ಹುಟ್ಟುಹಬ್ಬ ಆಚರಣೆಯಲ್ಲಿ ತಲ್ಲೀನರಾದ್ದ ಎಸಿ ವಿರುದ್ದ ಗುಡುಗಿದ ವಿಶ್ವ ಮಾನವ ಹಕ್ಕುಗಳ ಹೋರಾಟಗಾರರಾದ ಕೊರಟಗೆರೆ ನವೀನ್ ಕುಮಾರ ಜನರ ಸಮಸ್ಯೆಗಳ ಬಗ್ಗೆ ಚಿಂತನೆ ನಡೆಸದೆ ಹುಟ್ಟುಹಬ್ಬ ಆಚರಣೆಯಲ್ಲಿ ತೊಡಗಿರುವ ಉಪವಿಭಾಗಾಧಿಕಾರಿಗಳಿಗೆ ಶಿಸ್ತು ಕ್ರಮದ ಬಗ್ಗೆ ತರಬೇತಿ ಕೊಡಬೇಕು ಎಂದು ಹೇಳಿದರು

ಇದೆ ಸಂದರ್ಬದಲ್ಲಿ ಕರ್ತವ್ಯಲೋಪ ಎಸಗಿರುವ ಉಪವಿಭಾಗಾಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು ಕೂಡಲೇ ಕ್ರಮವಹಿಸುವಂತೆ ಸಾಮಾಜಿಕ ಹೋರಾಟಗಾರರಾದ ನವೀನ್ ಮತ್ತು ಅಗ್ರಹಾರ ನಾಗರಾಜ ಒತ್ತಾಯ.

ಒಟ್ಟಾರೆ ಕೆಲವು ಸರಕಾರಿ ಇಲಾಖೆಯ ಅಧಿಕಾರಿಗಳು ಸರಕಾರಿ ಕಛೇರಿಗಳನ್ನು ತಮ್ಮ ಪಿತ್ರಾರ್ಜಿತ ಆಸ್ತಿ ಎಂಬಂತೆ ನಡೆದುಕೊಳ್ಳುತ್ತಿರುವುದು ತುಂಬ ಶೊಚನಿಯ ಸಂಗತಿಯಾಗಿದೆ ಇಂಥ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಂಡು ಇನ್ನು ಯಾವೊಬ್ಬ ಸರಕಾರಿ ಅಧಿಕಾರಿಯು ಕೂಡ ಇಂಥ ಉದ್ದಟತನವನ್ನು ತೋರಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುವುದು ಸಾಮಾಜಿಕ ಹೋರಾಟಗಾರರ ಮಾತಾಗಿದೆ

WhatsApp
Facebook
Telegram
error: Content is protected !!
Scroll to Top