ಶಿವಾಚಾರ್ಯ ಮಹಾಸ್ವಾಮಿ ಜಗದ್ಗುರು ಡಾ, ಚನ್ನಸಿದ್ಧರಾಮ ಪಂಡಿತಾರಾಧ್ಯ ದ್ವಾದಶ ಪೀಠಾರೋಹಣ: ಶಿವಾಚಾರ್ಯ ಮಹಾಸ್ವಾಮಿ

ಸಿದ್ದಾಪುರ :- ಶ್ರೀಮದ್ಗಿರಿರಾಜ ಸೂರ್ಯ ಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ 1008 ಶ್ರೀಶೈಲ ಜಗದ್ಗುರು ಡಾ, ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ರವರ ದ್ವಾದಶ ಪೀಠಾರೋಹಣ ಮಹೋತ್ಸವ ಹಾಗೂ ಜನ್ಮ ಸುವರ್ಣ ಮಹೋತ್ಸವದ ನಿಮಿತ್ತ ಅಕ್ಟೋಬರ್ 29 ರಿಂದ ನವೆಂಬರ್ 15ರ ವರೆಗೆ ಶ್ರೀಶೈಲ ಜಗದ್ಗುರುಗಳ ದಿವ್ಯ ಸಾನಿಧ್ಯದಲ್ಲಿ ವಿವಿಧ ಧಾರ್ಮಿಕ ಸಾಮಾಜಿಕ ಹಾಗೂ ಜನಜಾಗೃತಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಶ್ರೀಶ್ರೀ 1008 ಶ್ರೀಶೈಲ ಜಗದ್ಗುರು ಡಾ, ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿ ಹೇಳಿದರು.


ಅವರು ತಾಲೂಕಿನ ಕಾನಳ್ಳಿಮಠದಲ್ಲಿ ಸುದಿಗೋಷ್ಠಿಯಲ್ಲಿ ಮಾತನಾಡಿ
ಕಾಲಕಾಲಕ್ಕೆ ಧರ್ಮ ಜಾಗೃತಿ ಮಾಡುವುದು ಮಠಾಧಿಶರ ಕರ್ತವ್ಯ. ಎಲ್ಲದಕ್ಕೂ ಒಂದು ಕಾರಣ ಇರಬೇಕು. ಆ ಕಾಲ ಈಗ ಕೂಡಿ ಬಂದಿದೆ. ಈ ಪಾದಯಾತ್ರೆ ಬರೀ ಯಾತ್ರೆಯಾಗಬಾರದು ಅದು ಧರ್ಮ ಜಾಗೃತಿಯ ಜಾತ್ರೆಯಾಗಬೇಕೆಂಬ ಉದ್ದೇಶದಿಂದ ಇದರ ಜೊತೆಗೆ ಅನೇಕ ಕಾರ್ಯಕ್ರಮಗಳನ್ನು ಕೂಡ ಜೋಡಿಸಿಕೊಳ್ಳಲಾಗಿದೆ
ಮೊದಲನೆಯದು ಯುವಕರಿಂದ ದುಶ್ಚಟಗಳ ಭಿಕ್ಷೆಯನ್ನು ಬೇಡುವುದು ಯುವಕರನ್ನು ವ್ಯಸನ ಮುಕ್ತರನ್ನಾಗಿ ಮಾಡಿ ಬಲಿಷ್ಠ ಭಾರತವನ್ನು ನಿರ್ಮಾಣ ಮಾಡುವಲ್ಲಿ ಯುವಕರಿಗೆ ಪ್ರೇರಣೆಯನ್ನು ಕೊಡುವುದು.
ಎರಡನೆಯದು ಎಲ್ಲಾ ಕಡೆಗೂ ಜಾತ್ಯಾತೀತವಾಗಿ ಸಾಮೂಹಿಕವಾಗಿ ಉಚಿತ ಲಿಂಗಧಾರಣೆಯನ್ನು ಮಾಡುತ್ತ ಸಾಗುವುದು.
ಮೂರನೆಯದು ಯಾವ ದಾರಿಯ ಮೂಲಕ ಪಾದಯಾತ್ರೆ ಸಾಗುತ್ತೋ ದಾರಿಯ ಎರಡು ಬದಿಗೆ ಯಡಿಯೂರಿನಿಂದ ಶ್ರೀಶೈಲದವರೆಗೆ ಲಕ್ಷಾಂತರ ಸಸ್ಯಗಳನ್ನು ನೆಡುವ ಕಾರ್ಯಕ್ರಮವನ್ನು ಕೂಡ ಇದರ ಜೊತೆಗೆ ಜೋಡಿಸಿಕೊಳ್ಳಲಾಗಿದೆ ಎಂದರು.
ಧ್ಯಾನ ಮಾಡಬೇಕು ಅದರಿಂದ ಪುಣ್ಯದ ಪ್ರಾಪ್ತಿ ಆಗುತ್ತದೆ ಪಾಪದ ನಿವೃತ್ತಿಯಾಗುತ್ತದೆ ಎನ್ನುವುದೆಲ್ಲ ಸರಿ ಇವೆಲ್ಲವುಗಳ ಜೊತೆಗೆ ಆಧ್ಯಾತ್ಮಿಕವಾಗಿ ಚಿಂತನೆ ಮಾಡಿದಲ್ಲಿ
ನಮ್ಮ ದೇಹವೇ ಶ್ರೀಶೈಲ ನಮ್ಮ ಮಸ್ತಕದಲ್ಲಿರುವ ಆತ್ಮಜ್ಞಾನವೇ ಶಿಖರ ಆತ್ಮಜ್ಞಾನದ ಸಾಕ್ಷಾತ್ಕಾರವನ್ನು ಮಾಡಿಕೊಳ್ಳುವುದೇ ಆ ಶಿಖರದ ದರ್ಶನ ಹೀಗೆ ಆತ್ಮ ಸಾಕ್ಷರವನ್ನು ಮಾಡಿಕೊಳ್ಳುವ ವ್ಯಕ್ತಿಗೆ ಪುನರ್ಜನ್ಮ ಇಲ್ಲ ಅನ್ನುವುದನ್ನು ಕ್ಷೇತ್ರದ ಮಹಿಮೆಯೊಂದಿಗೆ ಜೋಡಿಸಿರುವಂತಹ ಕೀರ್ತಿ ಶ್ರೀಶೈಲ ಕ್ಷೇತ್ರಕ್ಕೆ ಸಲ್ಲಬೇಕಾಗಿದೆ.

ಶ್ರೀಶೈಲ ಪೀಠದ ಕಾರ್ಯಕ್ರಮಕ್ಕೆ ಶ್ರೀ ಪರಮೇಶ್ವರ ಶಾಸ್ತ್ರಿಗಳು ಒಂದು ದಿನದ ಪೂರ್ಣಸೇವೆಗಾಗಿ 51,000 ರೂಪಾಯಿ ಗಳನ್ನು ವಾಗ್ದಾನ ಮಾಡಿ ಸಹಕಾರವನ್ನು ನೀಡುತ್ತಿದ್ದಾರೆ, ಸರೋಜಿನಿ ಹಿರೇಮಠ ಅವರು ಕೂಡ ಒಂದು ದಿನದ ಪೂರ್ಣ ಸೇವೆಗಾಗಿ 51,000 ರೂಪಾಯಿ ಗಳನ್ನು ವಾಗ್ದಾನ ಮಾಡಿ ಸಹಕಾರವನ್ನು ನೀಡುತ್ತಿದ್ದಾರೆ ಎಂದರು.

ಎಲ್ಲಾ ಸೇವೆಗಳಿಂದ ಬಂದಿರುವಂತಹ ಹಣವನ್ನು ಕಬ್ಬೆಮಂಟಪ, ಯಾತ್ರಾ ನಿವಾಸ, ಹಾಸ್ಪಿಟಲ್ ಗಳ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು. ಅದರಲ್ಲೂ ವಿಶೇಷವಾಗಿ ತುಲಾಭಾರ ಸೇವೆಯಿಂದ ಬಂದ ಎಲ್ಲಾ ಹಣವನ್ನು ಕಾರ್ಯಕ್ರಮಕ್ಕೂ ಕೂಡ ಬಳಸದೆ ಹಾಸ್ಪಿಟಲ್ ನಿರ್ಮಾಣಕ್ಕಾಗಿ ಹಣವನ್ನು ಬಳಸಿಕೊಳ್ಳಲಾಗುವುದು ಎಂದ ಅವರು ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾ ಭಕ್ತರು ಆಗಮಿಸುವಂತೆ ಆಮಂತ್ರಣ ನೀಡಿದರು.

ಈ ಸಂದರ್ಭದಲ್ಲಿ ಕೊಣಂದೂರು ಮಠದ ಶ್ರೀಗಳು, ಪರಮೇಶ್ವರಯ್ಯ ಕಾನಳ್ಳಿಮಠ ಇದ್ದರು.

WhatsApp
Facebook
Telegram
error: Content is protected !!
Scroll to Top