ಉತ್ತರ ಕನ್ನಡ ಸಿದ್ದಾಪುರ ತಾಲೂಕ ಯುವಕರಿಂದ ಸಮಾಜಮುಖಿ ಕಾರ್ಯ

ಸಾರ್ವಜನಿಕ ರಸ್ತೆ ರಿಪೇರಿ ಮಾಡಿ ಸಮಾಜಕ್ಕೆ ಮಾದರಿಯಾದ ಯುವಕರು

ಸಿದ್ದಾಪುರ:- ಓಡಾಟಕ್ಕೆ ಯೋಗ್ಯವಾಗಿರದ ರಸ್ತೆಯನ್ನು ಯುವಕರೆ ರಿಪೇರಿ ಮಾಡಿ ಸಂಚಾರಕ್ಕೆ ಸುಗಮ ಮಾಡಿ ಕೊಟ್ಟಿದ್ದಾರೆ ‌


ತಾಲೂಕಿನ ನರಮುಂಡಿಗೆ ಮಳೆಯಿಂದಾಗಿ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ಸ್ಥಳೀಯ ಯುವಕರೇ ಮಳೆಯಲ್ಲೆ ಸರಿಪಡಿಸಿಕೊಂಡಿದ್ದಾರೆ.
ಕೊಡಗಿಬೈಲ್ ಕ್ರಾಸ್ ನಿಂದ ನರಮುಂಡಿಗೆ ಸಂಪರ್ಕ ರಸ್ತೆ ಹದಗೆಟ್ಟಿತ್ತು. ಕಳೆದ ಸಾಲಿನಲ್ಲಿ ಒಂದೂವರೆ ಕಿಲೋಮೀಟರ್ ಕಡಿ ಹಾಕಲಾಗಿದೆ. ಈಗ ರಸ್ತೆ ಯ ಮೇಲೆ ನೀರು ಹರಿಯುವುದರಿಂದ ರಸ್ತೆ ಚರಂಡಿಯಂತೆ ಆಗಿದ್ದು ಓಡಾಡಕ್ಕೆ ಅಯೋಗ್ಯವಾಗಿದೆ .ವಾಹನ ಸವಾರರು ಅದರಲ್ಲೂ ದ್ವಿಚಕ್ರ ವಾಹನ ಸವಾರರು ಸರ್ಕಸ್ ಮಾಡುತ್ತಾ ಚಲಿಸಬೇಕಾಗುತ್ತದೆ ರಾತ್ರಿ ವೇಳೆಯಲ್ಲಿ ಈ ಮಾರ್ಗದಲ್ಲಿ ಓಡಾಡುವುದು ಕಷ್ಟ ಕರವಾಗಿತ್ತು‌
ಇದನ್ನರಿತ ನರಮುಂಡಿಗೆಯ ಕೆಲವು ಯುವಕರು ತಾವೇ ರಸ್ತೆ ರಿಪೇರಿ ಮಾಡಿದ್ದಾರೆ. ಹೊಂಡ ಮುಚ್ಚಿ,ರಸ್ತೆಯ ಮೇಲೆ ಹರಿಯುವ ನೀರನ್ನು ಚರಂಡಿಗೆ ಬೀಳುವಂತೆ ಅಡ್ಡದಂಡೆ ಮಾಡಿದ್ದಾರೆ. ಮಣ್ಣು ಕೊಚ್ಚಿ ಹೋದಲ್ಲಿ ಮಣ್ಣು ಹಾಕಿ ಸರಿ ಪಡಿಸಿದ್ದಾರೆ.
ಈ ಗ್ರಾಮಕ್ಕೆ ಸರ್ವಋತು ರಸ್ತೆ ಅವಶ್ಯಕತೆಯಿದ್ದು ಹಲವಾರು ವರ್ಷಗಳಿಂದ ಸಂಬಂಧಪಟ್ಟ ಇಲಾಖೆಗೆ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರು ರಸ್ತೆ ಆಗದಿರುವುದು ಇಲ್ಲಿಯ ಸ್ಥಳೀಯರಲ್ಲಿ ಅಸಮಾಧಾನ ಉಂಟು ಮಾಡಿದೆ.
ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ನಮಗೆ ಒಂದು ಮೂಲಭೂತ ಸೌಕರ್ಯವಾದ ರಸ್ತೆ ಇಲ್ಲ ಎನ್ನುವುದು ಇಲ್ಲ ಸ್ಥಳೀಯರ ಅಳಲು, ಕೂಡಲೇ ಸಂಬಂಧಪಟ್ಟ ಇಲಾಖೆಯವರು ಹಾಗೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ರಸ್ತೆಯನ್ನು ನಿರ್ಮಿಸಿಕೊಡಬೇಕೆಂದು ಇಲ್ಲಿಯ ಸ್ಥಳಿಯರ ಅಗ್ರಹಿಸಿದ್ದಾರೆ.
ರಸ್ತೆ ರಿಪೇರಿ ಸಮಯದಲ್ಲಿ ಈಶ್ವರ ಮಂಜುನಾಥ ನಾಯ್ಕ ಜಯರಾಮ್ ಜಟ್ಯಾ ನಾಯ್ಕ,
ರಜನಿಕಾಂತ್ ಪರಮೇಶ್ವರ ನಾಯ್ಕ, ವಿಜಯಕುಮಾರ್ ಮಾರುತಿ ನಾಯ್ಕ, ಲೋಕೇಶ್ ನಾಯ್ಕ, ಗಜು ಅಣ್ಣಪ್ಪ ನಾಯ್ಕ,ಪ್ರಜ್ವಲ್ ನಾರಾಯಣ ನಾಯ್ಕ ಮುಂತಾದವರು ಪಾಲ್ಗೊಂಡಿದ್ದರು.

WhatsApp
Facebook
Telegram
error: Content is protected !!
Scroll to Top