ಸಿದ್ದಾಪುರದಲ್ಲಿ ನಾರಾಯಣ ಗುರು ಜಯಂತಿ ಆಚರಣೆ

ಸಿದ್ದಾಪುರ :- ಸಮಾಜದಲ್ಲಿನ ಜಾತಿಯತೆಯಂತಹ ಪಿಡುಗಿನ ವಿರುದ್ದ ಹೋರಾಡಿ, ಜಗತ್ತಿಗೆ ಸಮಾನತೆಯನ್ನು ಸಾರಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು. ಅವರ ಹೋರಾಟ, ಸೇವೆಯನ್ನು ಸ್ಮರಿಸುವ ಜತೆಗೆ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹಿರಿಯ ನ್ಯಾಯವಾದಿ ಎನ್ ಡಿ ನಾಯ್ಕ ಹೇಳಿದರು.


ಅವರು ತಾಲೂಕು ಆಡಳಿತ, ವಿವಿಧ ಇಲಾಖೆಗಳು ಹಾಗೂ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ತಾಲೂಕು ಆಡಳಿತ ಸೌಧದಲ್ಲಿ ನಡೆದ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ರಾಂತಿಯ ಹರಿಕಾರ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯೆಯಿಂದ ಸ್ವತಂತ್ರ ರಾಗಿ, ಸಂಘಟನೆಯಿಂದ ಬಲಯುತರಾಗಿ. ಸಮಾಜದಲ್ಲಿನ ಮೇಲು ಕೀಳು ಎಂಬ ಭಾವನೆಯನ್ನು ಹೊಗಲಾಡಿಸಲು ಹೋರಾಡಿದವರು ಗುರುಗಳು. ಸಮಾಜದಲ್ಲಿ ತುಳಿತಕೊಳಗಾದ ಸಮಯದಾಯಗಳನ್ನು ಮೇಲಕ್ಕೆತ್ತಿದ ನಾರಾಯಣ ಗುರುಗಳ ಕೊಡುಗೆ ಅಪಾರವಾಗಿದೆ. ಅವರ ಹೋರಾಟದ ಫಲವಾಗಿ ಇಂದು ಹಲವಾರು ಕಾನೂನುಗಳು ರೂಪಿತವಾಗಿವೆ. ಗುರುಗಳ ಹೆಸರು ಶಾಶ್ವತ ವಾಗಿರಬೇಕಾದರೆ ಅವರ ಆದರ್ಶ ಗಳನ್ನು ಪಾಲಿಸಬೇಕು ಎಂದರು.
ನಾಮಧಾರಿ ಸಮಾಜ ಅಭಿವೃದ್ಧಿ ಸಂಘದ ತಾಲೂಕ ಅಧ್ಯಕ್ಷ ಕೆ ಜಿ ನಾಯ್ಕ ಮಾತನಾಡಿ
ನಾರಾಯಣ ಗುರುಗಳು ಹಾಕಿಕೊಟ್ಟ ಮಾನವೀಯತೆಯ ಮೌಲ್ಯಗಳನ್ನು ಮನೆಮನೆಗೆ ತಲುಪಿಸಿವ ಕಾರ್ಯ ಆಗಬೇಕು.
ಎಂದರು.
ಪತ್ರಕರ್ತ ಕನ್ನೇಶ ಕೋಲಸಿರ್ಸಿ ಉಪನ್ಯಾಸ ನೀಡಿ ನಾರಾಯಣ ಗುರುಗಳು ಧಾರ್ಮಿಕ ಆಚರಣೆಯ ತಾರತಮ್ಯದ ವಿರುದ್ಧ ಹೋರಾಟ ಮಾಡಿದವರು. ಜನಸಾಮಾನ್ಯರ ಪರವಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮಾನತೆಗಾಗಿ ಹೋರಾಡಿದ್ದಾರೆ. ನಮ್ಮ ಸ್ವಾಭಿಮಾನ, ಹಕ್ಕಿಗಾಗಿ ಅವರ ಆದರ್ಶಗಳು ನಮ್ಮಲ್ಲಿಬೇಕು ಎಂದರು.
ತಹಶೀಲ್ದಾರ ಸಂತೋಷ ಭಂಡಾರಿ ಪ್ರಾಸ್ತಾವಿಕ ಮಾತನಾಡಿ, ಅರಸೊತ್ತಿಗೆ, ಬಾಲ್ಯವಿವಾಹ, ಕಂದಾಚಾರ, ಮೇಲ್ವರ್ಗದವರ ದಬ್ಬಾಳಿಕೆ ವಿಜೃಂಭಿಸುತ್ತಿರುವ ಕಾಲಘಟ್ಟದಲ್ಲಿ ಶಿಕ್ಷಣದ ಮೂಲಕ ಕ್ರಾಂತಿಯನ್ನುಂಟು ಮಾಡಿದ ಮಹಾನ್ ಮಾನವತಾವಾದಿಯಾಗಿದ್ದರು. ಅವರು ಹಾಕಿ ಕೊಟ್ಟ ಆದರ್ಶಗಳನ್ನು ಪಾಲಿಸೋಣ ಎಂದರು.
ಪಟ್ಟಣ ಪಂಚಾಯತ ಉಪಾಧ್ಯಕ್ಷ ರವಿಕುಮಾರ ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮ ದಲ್ಲಿ ತಾಲೂಕಾ ನಾಮಧಾರಿ ಸಮಾಜ ಅಭಿವೃದ್ಧಿ ಸಂಘದ ಗೌರವಾಧ್ಯಕ್ಷ ಆನಂದ ನಾಯ್ಕ, ಉಪಾಧ್ಯಕ್ಷ ವಿ.ಎನ್.ನಾಯ್ಕ, ಕಾರ್ಯದರ್ಶಿ ಎಸ್.ಎಂ.ನಾಯ್ಕ, ತಾಲೂಕಾ ಆರೋಗ್ಯಾಧಿಕಾರಿ ಲಕ್ಷ್ಮೀಕಾಂತ ನಾಯ್ಕ, ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಕುಮಾರ ನಾಯ್ಕ, ಬಿ.ಎಸ್.ಎನ್.ಡಿ.ಪಿ ಸಂಘಟನೆಯ ಅಧ್ಯಕ್ಷ ವಿನಾಯಕ ನಾಯ್ಕ, ಪ್ರಮುಖರಾದ ವಸಂತ ನಾಯ್ಕ ಮನಮನೆ, ಬಿ.ಆರ್.ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
ಶಿರಸ್ತೆದಾರ ಎನ್.ಐ.ಗೌಡ ಸ್ವಾಗತಿಸಿದರು. ಕಂದಾಯ ಇಲಾಖೆಯ ಗಣೇಶ ನಿರೂಪಿಸಿದರು.
…….
[{ಬಾಕ್ಸ್- ಸಾಧಕರಿಗೆ ಸನ್ಮಾನ
ಯಕ್ಷಗಾನ ಅಕಾಡೆಮಿಯಿಂದ ಯಕ್ಷಸಿರಿ ಪ್ರಶಸ್ತಿ ಪಡೆದ ಕೃಷ್ಣಾಜಿ ಬೇಡ್ಕಣಿ, ಹಿರಿಯ ವಕೀಲ ಎನ್.ಡಿ.ನಾಯ್ಕ, ಸಾಹಿತಿ ವಿ.ಎಂ.ನಾಯ್ಕ ಅವರಗುಪ್ಪಾ, ಪುನೀತ ರಾಜಕುಮಾರ ಅನಾಥಾಶ್ರಮದ ಮಮತಾ ನಾಯ್ಕ, ಹಿರಿಯರಾದ ಬಿ.ಆರ್.ನಾಯ್ಕ, ಯಕ್ಷಗಾನ ಕಲಾವಿದ ನಂದನ ನಾಯ್ಕ ಹಾರ್ಸಿಕಟ್ಟಾ, ಇವರನ್ನು ಇದೇ ವೇಳೆ ಸನ್ಮಾನಿಸಲಾಯಿತು.}]

WhatsApp
Facebook
Telegram
error: Content is protected !!
Scroll to Top