ಉತ್ತರ ಕನ್ನಡ ಮೊಗೇರ್ ಸಮಾಜದ ಜಾತಿ ಪ್ರಮಾಣ ಪತ್ರ ಸಂಬಂದ ಸರಕಾರ ರಚಿಸಿದ ವಿಶೇಷ ತಂಡ  ಭಟ್ಕಳಕ್ಕೆ ಆಗಮನ

ಎರಡು ತಿಂಗಳೊಳಗಾಗಿ ಸರಕಾರಕ್ಕೆ ವರದಿ ಸಲ್ಲಿಸುತ್ತೆವೆ. ಮಾಧ್ಯಮಕ್ಕೆ ವಿಶೇಷ ತಂಡದ ಪ್ರತಿಕ್ರಿಯೆ.

ಭಟ್ಕಳ: ಉತ್ತರ ಕನ್ನಡ ಮೊಗೇರ್ ಸಮಾಜದ ಜಾತಿ ಪ್ರಮಾಣ ಪತ್ರ ನೀಡುವಿಕೆಯಲ್ಲಿ ಉಂಟಾಗಿರುವ ಗೊಂದಲ ಹಿನ್ನೆಲೆಯಲ್ಲಿ  ಸರಕಾರದ ರಚಿಸಿದ  ವಿಶೇಷ ತಂಡ ಭಟ್ಕಳಕ್ಕೆ ಆಗಮಿಸಿ ಮೊಗೇರ್ ಸಮಾಜದವರೊಂದಿಗೆ ಸಭೆ ನಡೆಸಿ ನಂತರ ಮಾಧ್ಯಕ್ಕೆ  ಈ ಬಗ್ಗೆ ಪ್ರತಿಕ್ರಿಯಿಸಿ ತಮ್ಮ ತಂಡ ಸರಕಾರಕ್ಕೆ ಎರಡು ತಿಂಗಳಲ್ಲಿ  ವರದಿಯನ್ನು ಒಪ್ಪಿಸುತ್ತದೆ ನಂತರದ ದಿನದಲ್ಲಿ ಸರಕಾರ ಈ ಬಗ್ಗೆ ತಿರ್ಮಾನವನ್ನು ಕೈಗೊಳ್ಳುತ್ತದೆ ಎಂದು ಹೇಳಿತು

ಉತ್ತರ ಕನ್ನಡ ಜಿಲ್ಲೆಯ ಮೊಗೇರ್ ಸಮಾಜವು ಹಲವಾರು ತಿಂಗಳಿಂದ ಜಾತಿ ಪ್ರಮಾಣ ಪತ್ರಕ್ಕಾಗಿ ಅನಿರ್ದಿಷ್ಟಾವದಿ ಪ್ರತಿಭಟನೆ ಹಮ್ಮಿಕೊಂಡಿತ್ತು ಈ ಹಿನ್ನೆಲೆಯಲ್ಲಿ ಸರಕಾರ ತಾನು ವಿಶೇಷ ತಂಡ ರಚನೆ ಮಾಡಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೆವೆ ಎಂದು ಮೂರು ತಿಂಗಳ ಸಮಯಾವಕಾಶವನ್ನು ಕೇಳಿತ್ತು . ಅದರಂತೆ ಮೂರು ತಿಂಗಳ ನಂತರ ಸರಕಾರ ರಚಿಸಿದ ವಿಷೇಶ ತಂಡ ಭಟ್ಕಳಕ್ಕೆ ಆಗಮಿಸಿ ತಾಲೂಕಾಡಳಿತ ಹಾಗು ಮೊಗೇರ್ ಸಮಾಜದ ಮುಖಂಡರನ್ನೊಳಗೊಂಡಂತೆ ಸಭೆಯನ್ನು ನಡೆಸಿ ಮುಖಂಡರಿಗೆ 90 ದಿನಗಳ ಒಳಗಾಗಿ ತಿರ್ಮಾನವನ್ನು ತೆಗೆದುಕೊಳ್ಳಲಾಗುವುದು   ಎಂದು  ಹೇಳಿದರು. ಈ ಬಗ್ಗೆ ಮೊಗೇರ್ ಸಮಾಜದ ಅಧ್ಯಕ್ಷರು ಮಾಧ್ಯಮದೊಂದಿಗೆ ಮಾತನಾಡಿ ಇಂದು ಸರಕಾರದ ವಿಷೇಶ ತಂಡ ಭಟ್ಕಳಕ್ಕೆ ಆಗಮಿಸಿದೆ ಈ ಬಗ್ಗೆ ೯೦ ದಿನಗಳಲ್ಲಿ ತಿರ್ಮಾನವನ್ನು ಕೈಗೊಳ್ಞಲಾಗುವುದು ಎಂದು ತಿಳಿಸಿದ್ದಾರೆ ನಮಗೆ ಜಾತಿ ಪ್ರಮಾಣ ಪತ್ರ  ದೊರೆಯುತ್ತದೆ ಎಂಬ ಬರವಸೆ ನಮಗಿದೆ ಎಂದು ಹೇಳಿದರು.

ಸಭೆಯ ನಂತರ ಸರಕಾರದ ವಿಶೇಷ  ತಂಡ  ಮಾಧ್ಯಮದವರೊಂದಿಗೆ ಮಾತನಾಡಿ ನಾವು ಈಗಾಗಲೆ ಭಟ್ಕಳದ ಮೊಗೇರ್ ಸಮಾಜದೊಂದಿಗೆ ಸಭೆ ನಡೆಸಿದ್ದೆವೆ  ನಾವು ಎರಡು ತಿಂಗಳಲ್ಲಿ ವರದಿಯನ್ನು ಸರಕಾರಕ್ಕೆ ಒಪ್ಪಿಸುತ್ತೆವೆ ನಮ್ಮ ವರದಿಯ ನಂತರ ಸರಕಾರ ಮೊಗೇರ್ ಸಮಾಜಕ್ಕೆ ಜಾತಿ ಪ್ರಮಾಣ ಪತ್ರ ನಿಡುವಿಕೆಯ ಬಗ್ಗೆ ತನ್ನ ನಿರ್ದಾರವನ್ನು ಎನು ಎಂಬುವುದನ್ನು ಪ್ರಕಟಿಸುತ್ತದೆ ಎಂದರು ಈ ಬಗ್ಗೆ ಮಾಧ್ಯಮದವರು  ಈಗಾಗಲೆ ವಿಷೇಶ ತಂಡ ರಚನೆ ಮಾಡಲು ಮೂರು ತಿಂಗಳು ತೆಗೆದುಕೊಂಡಾಗಿದೆ ಇನ್ನು ನಿಮ್ಮ ವರದಿ ಸರಕಾರಕ್ಕೆ ತಲುಪಲು ಎರಡು ತಿಂಗಳು ಆಗುತ್ತದೆ  ಸರಕಾರ ನಿರ್ದಾರ ಪ್ರಕಟಿಸಲು ಇನ್ನೆಷ್ಟು ದಿನ ಎಂಬ  ಪ್ರಶ್ನೆ ಕೇಳಿದಾಗ  ಆದಷ್ಟು ಬೇಗೆ ಎಂಬ ಉತ್ತರವನ್ನು ಕೊಟ್ಟಿರುತ್ತಾರೆ ಒಟ್ಟಾರೆ ಮೊಗೇರ್ ಸಮಾಜದ ಕಾಯುವಿಕೆ ಇನ್ನೆಷ್ಟು ದಿನ ಎನ್ನುವುದು ಎಲ್ಲರ ಮುಂದಿರುವ ಯಕ್ಷ ಪ್ರಶ್ನೆಯಾಗಿದೆ

ಇಲ್ಲಿ ಮುಖ್ಯವಾಗಿ ಗಮನಿಸ ಬೇಕಾದ ಅಂಶ ಎಂದರೆ ಈ ವಿಷೇಶ ತಂಡ ಮೊಗೇರ್ ಸಮಾಜದೊಂದಿಗೆ ಸಭೆ ನಡೆಸಿ 90 ದಿನದಲ್ಲಿ ನಿರ್ದಾರ ಪ್ರಕಟಿಸಲಾಗುವುದು ಎಂದು ಹೇಳಿದೆಯಂತೆ ಆದರೆ ಇದೆ ತಂಡ ಮಾಧ್ಯಮದೊಂದಿಗೆ ಮಾತನಾಡಿ ಎರಡು ತಿಂಗಳಲ್ಲಿ ನಾವು ಸರಕಾರಕ್ಕೆ  ವರದಿ ಒಪ್ಪಿಸುತ್ತೆವೆ ಮುಂದಿನ ತಿರ್ಮಾನ ಸರಕಾರಕ್ಕೆ ಬಿಟ್ಟಿದ್ದು ಎಂದು ಹೇಳುತ್ತದೆ ಇಲ್ಲಿ ಇಂತಹ ಗೊಂದಲಗಳು ಯಾಕೆ ಎದ್ದಿದೆ ಎಂಬುವುದು ತುಂಬ ಜಟಿಲತೆಯನ್ನು ತಂದಿಟ್ಟಿದೆ ಒಟ್ಟಾರೆ ಮೊಗೇರ್ ಸಮಾಜಕ್ಕೆ ಅಂತಿಮ ತಿರ್ಮಾನದ ವರೆಗೆ ಕಾಯುವುದು ಅನಿವಾರ್ಯ ಸರಕಾರ ಈ ಸಮಾಜವನ್ನು ಎಷ್ಟು ದಿನಗಳವರೆಗೆ ಕಾಯಿಸುತ್ತದೆ ಎನ್ನುವುದು ಮುಂದಿನ ದಿನಗಳಲ್ಲೆ ಕಂಡುಕೊಳ್ಳ ಬೇಕಾಗಿದೆ

WhatsApp
Facebook
Telegram
error: Content is protected !!
Scroll to Top