ಅತಿವೃಷ್ಟಿಯ ಕಾರಣ ತಾಲೂಕಿನಲ್ಲಿ ಆಗಿರುವ ನಷ್ಟ ಪರಿಶೀಲನೆಗೆ  ಆಗಮಿಸಿದ ಕೇಂದ್ರದ ತಂಡ

ಕರ್ನಾಟಕ ರಾಜ್ಯದಾಧ್ಯಂತ ಅತಿವೃಷ್ಟಿ ನಷ್ಟದ ಬಗ್ಗೆ ಪರಿಶೀಲಿಸುತ್ತಿದ್ದೆವೆ: ಕೆಂದ್ರ ತಂಡ

ಭಟ್ಕಳ :  ಅತಿವೃಷ್ಟಿಯ ಕಾರಣ ಉಂಟಾದ ನಷ್ಟದ ಬಗ್ಗೆ ಪರಿಶಿಲನೆ ನಡೆಸಲು ಕೇಂದ್ರದ ತಂಡ ಭಟ್ಕಳ ತಾಲೂಕಿಗೆ ಆಗಮಿಸಿ ಅತಿವೃಷ್ಟಿ ಇಂದ ಮುಟ್ಟಳ್ಳಿ ಗುಡ್ಡ ಕುಸಿತ ಆಗಿರುವ ಪ್ರದೇಶಕ್ಕೆ  ಹಾಗು ಚೌತನಿ ಉತ್ತರ ಕೊಪ್ಪ ಇನ್ನಿತರ ಪ್ರದೇಶಕ್ಕೆ   ಬೇಟಿ ನೀಡಿ ಪರಿಶೀಲನೆ ನಡೆಸಿದರು

ಈ ಭಟ್ಕಳ ತಾಲೂಕಿನಲ್ಲಿ  ಸುರಿದ ಬಾರಿ ಅತಿವೃಷ್ಟಿಯ ಕಾರಣ  ತಾಲೂಕಿನಾಧ್ಯಂತ ಜನ ಜೀವನ ಅಸ್ತವ್ಯಸ್ತವಾಗಿ ಹೊಗಿತ್ತು ಅತಿವೃಷ್ಟಿಯ ಕಾರಣ ನಾಲ್ಕು ಅಮಾಯಕ ಜೀವಗಳು ಬಲಿಯಾಗಿ ಹೊಗಿದ್ದವು‌ .  ತಾಲೂಕಿನ ಸಾರ್ವಜನಿಕರು ಈ ಅತಿವೃಷ್ಟಿಯ ಕಾರಣ  ಇತಿಹಾಸದಲ್ಲೆ ಕಂಡು ಕೇಳರಿಯದ  ಅಪಾರ ಪ್ರಮಾದ ನಷ್ಟವನ್ನು ಅನುಭವಿಸಿದ್ದರು.  ಈ ಹಿನ್ನೆಲೆಯಲ್ಲಿ ಇಂದು ಭಟ್ಕಳಕ್ಕೆ ಕೇಂದ್ರದ ಪರಿಶೀಲನಾ ತಂಡ ಬೇಟಿ  ನೀಡಿ ತಾಲೂಕಿನಾಧ್ಯಂದ ನಡೆದ ನಷ್ಟದ ಬಗ್ಗೆ ಪರೀಶಿಲನೆ  ನಡೆಸಿತು.

ಈ ಬಗ್ಗೆ ಪರಿಶೀಲನಾ ತಂಡ ಮಾತನಾಡಿ  ನಾವು ಕರ್ನಾಟಕದಾಧ್ಯಂದ ಅತಿವೃಷ್ಟಿಯ ಕಾರಣ ಉಂಟಾದ ನಷ್ಟವನ್ನು ಪರಿಶೀಲಿಸಲು ಆಗಮಿಸಿದ್ದು ನಮ್ಮ ವರದಿಯ ನಂತರ ಪರಿಹಾರ ಕಾರ್ಯಗಳು ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಬದಲ್ಲಿ ಕೆಂದ್ರದ ತಂಡ ಜಿಲ್ಲಾದಿಕಾರ ಮುಲೈ ಮುಗಿಲನ್ ಸಹಾಯಕ ಆಯುಕ್ತರಾದ ಮಮತಾ ದೇವಿ ತಹಶಿಲ್ದಾರ್ ಸುಮಂತ ಬಿ ಇ ಮತ್ತಿತರರು ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top