ಉತ್ತರ ಕನ್ನಡ ಸಿದ್ದಾಪುರದಲ್ಲಿ ಕಾಯಕಯೋಗಿ ಮೂರ್ತಿ ತಯಾರಕ ಗೋಡೆ ಸತ್ಯ

40 ವರ್ಷಗಳಿ ಗಣಪತಿ ಮೂರ್ತಿ ತಯಾರಿಸುತ್ತಿದೆ ಮೂರ್ತಿ ಸತ್ಯ ಕುಟುಂಬ

ಸಿದ್ದಾಪುರ:- ಕಳೆದೆರಡು ವರ್ಷಗಳಿಂದ ಕರೋನಾ ಮಹಾಮಾರಿಯ ಪರಿಣಾಮವಾಗಿ ಚೌತಿ ಹಬ್ಬವನ್ನು ಸರಳವಾಗಿ ಆಚರಿಸುತ್ತಾ ಬಂದಿದ್ದ ಜನತೆ ಈ ವರ್ಷ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿದ್ದಾರೆ ಎಂದು ತಾಲೂಕಿನ ಪ್ರಸಿದ್ಧ ಗಣಪತಿ ಮೂರ್ತಿ ತಯಾರಕರಾದ ಗೋಡೆ ಸತ್ಯ ರವರು ಹೇಳಿದರು.
ಅವರು ಇಂದು ಮಾಧ್ಯಮದೊಂದಿಗೆ ಮಾತನಾಡಿ ಇದಕ್ಕೆ ಹೆಚ್ಚೆಚ್ಚು ಮೂರ್ತಿಗಳನ್ನು ಬೇಡಿಕೆ ಸಲ್ಲಿಸಿರುವುದು ಮತ್ತು ಸಂತೋಷದಿಂದ ಮೂರ್ತಿಗಳನ್ನು ಒಯ್ಯುತ್ತಿರುವುದೆ ಕಾರಣವಾಗಿದೆ.
ನಮ್ಮ ಅಮ್ಮ ಗಣಪತಿ ಮೂರ್ತಿಯನ್ನು ತಯಾರಿಸುತ್ತಿದ್ದಳು ಇದರಿಂದ ನನಗೆ ಗಣಪತಿಯ ಮೂರ್ತಿಯನ್ನು ತಯಾರಿಸಬೇಕೆಂಬ ಅಭಿಲಾಷೆ ಉಂಟಾಯಿತು ಅಂದಿನಿಂದ ಇಲ್ಲಿಯವರೆಗೂ ಸುಮಾರು 40 ವರ್ಷಗಳಿಂದ ಮೂರ್ತಿಗಳನ್ನು ತಯಾರು ಮಾಡುತ್ತಿದ್ದೇನೆ.
ಸುಮಾರು 500ಕ್ಕೂ ಹೆಚ್ಚು ಗಣಪತಿ ಮೂರ್ತಿಗಳನ್ನು ತಯಾರಿಸಿದ್ದೇನೆ. ಸಿರ್ಸಿ ಸೊರಬ ಸಾಗರ ಹಾಗೂ ತಾಲೂಕಿನಾದ್ಯಂತ ಗಣಪತಿ ಮೂರ್ತಿಯನ್ನು ಕೊಂಡೊಯ್ಯುತ್ತಾರೆ ಕೆಲವರು ಹೋಲ್ ಸೇಲ್ ದರದಲ್ಲಿ ಮಾರಾಟ ಮಾಡಲು ನಮ್ಮಲ್ಲಿ ಗಣಪತಿಯನ್ನು ಒಯ್ಯುತ್ತಾರೆ.
ಮೂರ್ತಿಗಳನ್ನು ತಯಾರಿಸುವುದು ಕೇವಲ ಒಬ್ಬನಿಂದ ಮಾತ್ರ ಸಾಧ್ಯವಿಲ್ಲ. ಹೆಚ್ಚಿನ ಪರಿಶ್ರಮ ಜಾಗರೂಕತೆ ತಾಳ್ಮೆ ಅವಶ್ಯವಾಗಿದೆ.
ಇದಕ್ಕೆ ಗಣೇಶ್ ಮರಲಗಿ, ರಮೇಶ್ ಹೆಗಡೆ ಕೋಳಗಿ, ಅಶೋಕ್ ಹೆಗಡೆ ಕೋಳಗಿ ಹೀಗೆ ಆರೆಂಟು ಜನರ ಸಹಕಾರದಿಂದ ಸುಂದರವಾದ ಮೂರ್ತಿಯನ್ನು ತಯಾರಿಸುತ್ತೇವೆ.
ಒಂದು ಅಡಿಯಿಂದ ಐದು ಅಡಿಗಳ ಮೂರ್ತಿಯನ್ನು ತಯಾರು ಮಾಡುತ್ತಿದ್ದೇವೆ ಅತ್ಯಂತ ಖುಷಿಯಿಂದ ಜನರು ಗಣಪತಿ ಮೂರ್ತಿಯನ್ನು ಕೊಂಡೊಯ್ಯುತ್ತಿದ್ದಾರೆ.
ಮಾಡುತ್ತೇವೆ ಪರಿಸರ ಸ್ನೇಹಿ ಮೂತ್ರಿಗಳನ್ನು ಮಾತ್ರ ತಯಾರು ಮಾಡುತ್ತವೆ. ವರ್ಷದಿಂದ ವರ್ಷಕ್ಕೆ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಆದ್ದರಿಂದ ಎಲ್ಲಾ ಬೇಡಿಕೆಗಳನ್ನು ಪೂರೈಸಲು ಕೈಯಿಂದ ಮೂರ್ತಿಗಳನ್ನು ಮಾಡಿದರೆ ಸಾಕಾಗುವುದಿಲ್ಲ ಆ ಕಾರಣಕ್ಕಾಗಿ ಮೋಲ್ಡ್ ಗಳ ಮರೆ ಹೋಗಿದ್ದೇವೆ ಎಂದರು.

WhatsApp
Facebook
Telegram
error: Content is protected !!
Scroll to Top