ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವಲ್ಲಿ ಜನ ಪ್ರತಿನಿಧಿಗಳಲ್ಲಿ ತಾತ್ಸಾರ : ವಿ ಎನ್ ನಾಯ್ಕ

ಸಿದ್ದಾಪುರ:- ಇಂದು ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವಲ್ಲಿ ಜನ ಪ್ರತಿನಿಧಿಗಳಲ್ಲಿ ತಾತ್ಸಾರ ಮನೋಭಾವ ಇದೆ. ಆದ್ದರಿಂದ ಸಮಾಜ ಜಾಗ್ರತವಾಗಬೇಕು ಎಂದು ಜನತಾ ವಿದ್ಯಾಲಯದ ಎಸ್ ಡಿ ಎಂ ಸಿ ಅಧ್ಯಕ್ಷ ವಿ ಎನ್ ನಾಯ್ಕ ಹೇಳಿದರು.


ಅವರು ತಾಲೂಕಿನ ಬೇಡ್ಕಣಿಯ ಜನತಾ ವಿದ್ಯಾಲಯದಲ್ಲಿ ನಡೆದ
ಹಾಳದಕಟ್ಟಾ ವಲಯಮಟ್ಟದ ಪ್ರೌಢಶಾಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬ ವ್ಯಕ್ತಿಯಲ್ಲಿ ತನ್ನದೇ ಆದ ಪ್ರತಿಭೆ ಇರುತ್ತದೆ. ಅದನ್ನು ಹೊರಹಾಕಲು ಪ್ರತಿಭಾವ ಕಾರಂಜಿ ಉತ್ತಮ ವೇದಿಕೆ ಯಾಗಿದೆ.
ಇದಕ್ಕೂ ಮೊದಲು ಪ್ರತಿಭೆ ಇದ್ದರು ಅವರ ಪ್ರತಿಭೆ ಹೊರ ಹೊಮ್ಮಲು ಅವಕಾಶ ಸಿಗುತ್ತಿರಲಿಲ್ಲ. ಈಗ ಸರಕಾರ ಪ್ರತಿಭೆ ಕಾರಂಜಿ ಜಾರಿಗೆ ತಂದು ಪ್ರತಿಭೆಗಳಿಗೆ ಅವಕಾಶ ಸಿಕ್ಕಿದೆ.
ಕಾರ್ಯಕ್ರಮ ಬಂದಾಗ ಮಾತ್ರ ನಾವು ಇಂತಹ ಕಾರ್ಯಕ್ರಮ ಗಳಿಗೆ ಉತ್ತೇಜನ ನೀಡದೆ ಯಾವಾಗಲು ಪ್ರೋತ್ಸಾಹ ಉತ್ತೇಜನ ಸಿಗಬೇಕು. ಎಲ್ಲರಿಂದ ಪ್ರೋತ್ಸಹದ ಅಗತ್ಯವಿದೆ.
ಕೆಲವು ಸಂಘಗ ಸಂಸ್ಥೆಗಳು ಕೇವಲ ಸರಕಾರದ ಸೌಲಭ್ಯ ತೆಗೆದುಕೊಂಡು ತಮ್ಮ ಸ್ವಾರ್ಥ ಕ್ಕೆ ಮಾತ್ರ ಸೀಮಿತವಾಗಿರುತ್ತವೆ. ಇವುಗಳಿಂದ ಸಮಾಜ ಸೇವೆಯ ಜೊತೆಗೆ ಇತರೆ ಚಟುವಟಿಕೆ ತೊಡಗಿಸಿಕೊಳ್ಳಬೇಕು ಎಂದರು.
ನಿವೃತ್ತ ಸೈನಿಕ ಗೋವಿಂದ ಹರ್ಗಿ ಮಾತನಾಡಿ ಎಸ್ ಡಿ ಎಂ ಸಿ ಮತ್ತು ಪಾಲಕರ ಆಸಕ್ತಿ ಕಡಿಮೆಯಾಗಿರುವುದು ಖೇಧಕರ ಸಂಗತಿ.
ಶಿಕ್ಷಕರು ಪ್ರೋತ್ಸಾಹದ ಜೊತೆಗೆ ಪಾಲಕರ ಪ್ರೋತ್ಸಾಹ ಅತ್ಯಗತ್ಯ ವಾಗಿದೆ ಎಂದರು.
ಜಯಂತ ಹೆಗಡೆ ಕಲ್ಲಾರೆ ಮನೆ ಮಾತನಾಡಿ
ಸ್ಪರ್ಧೆಗಳಿಗೆ ಸರಿಯಾಗಿ ತಯಾರಿ ಮಾಡಿಕೊಂಡು ಬರಬೇಕು.
ಶಕ್ತಿ ಮತ್ತು ಸಾಮರ್ಥ್ಯ ನಮಗೆ ಅಹಂಕಾರ ತರದೆ. ನಮಗೆ ಅಲಂಕಾರ ತರಬೇಕು.
ಪ್ರತಿಭೆಯನ್ನು ಸೂಪ್ತವಾಗಿರಿಸದೆ ಹೊರಹಾಕಬೇಕು ಎಂದರು.
ಜನತಾ ವಿದ್ಯಾಲಯದ ಮುಖ್ಯೋಧ್ಯಾಪರರಾದ ಪ್ರತಿಮಾ ಪಾಲೇಕರ್ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.
ಶಿಕ್ಷಕ ಜಿ ಟಿ ಭಟ್ ಸ್ವಾಗತಿಸಿದರು.
ಶಿಕ್ಷಕ ಪಿ ಎಂ ನಾಯ್ಕ ನಿರೂಪಿಸಿದರು.
ಶಿಕ್ಷಕ ವಿ ಟಿ ಗೌಡ ವಂದಿಸಿದರು.

ಪ್ರತಿಭಾ ಕಾರಂಜಿಯಲ್ಲಿ ಜನತಾ ವಿದ್ಯಾಲಯ ಬೇಡ್ಕಣಿ, ಸರಕಾರಿ ಪ್ರೌಢಶಾಲೆ ಶಿರಳಗಿ, ಹಾಳದಕಟ್ಟಾ, ಪ್ರಶಾಂತಿ ಪ್ರೌಢಶಾಲೆ, ಮುರುಘರಾಜೇಂದ ಅಂಧ ಮಕ್ಕಳ ಶಾಲೆ, ಬಂಕೇಶ್ವರ ಪ್ರೌಢಶಾಲೆ, ಪಿ ಯು ಕಾಲೇಜ ಹಾಳದಕಟ್ಟಾ ವಿಧ್ಯಾರ್ಥಿಗಳು ಭಾಗವಹಿಸಿದ್ದರು.

WhatsApp
Facebook
Telegram
error: Content is protected !!
Scroll to Top