ಬಾಲ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾದ ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ್ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತ್ ವತಿಯಿಂದ ಸನ್ಮಾನ

ಸಿದ್ದಾಪುರ:- ಕೇಂದ್ರ ಸಾಹಿತ್ಯ ಅಕಾಡೆಮಿ ಯಿಂದ ನೀಡುವ ಬಾಲ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾದ ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ್ ರವರನ್ನು ಅವರ ಸ್ವ ಗ್ರಹದಲ್ಲಿ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತ್ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಪಿ ಆರ್ ನಾಯ್ಕ ಮಾತನಾಡಿ ನಮ್ಮನ್ನು ನಾವು ಸನ್ಮಾನಿಸಿಕೊಂಡಿದ್ದೇವೆ. ಸರಳ, ಸಜ್ಜನಿಕೆಯ ವ್ಯಕ್ತಿ ಯೊರ್ವರಿಗೆ ಈ ಪ್ರಶಸ್ತಿ ಬಂದಿರುವುದು ತುಂಬಾ ಸಂತೋಷವಾಗಿದೆ. ಇದು ನಮ್ಮ
ಜಿಲ್ಲೆಗೆ ದೊಡ್ಡ ಗೌರವ. ಬೀಗಾರ್ ರವರು ಮಕ್ಕಳ ಸಾಹಿತ್ಯ ದಲ್ಲಿ ಜಿಲ್ಲೆಯಲ್ಲಿಯೇ ಮೊದಲನೆ ಸಾಲಿನಲ್ಲಿ ನಿಲ್ಲುತ್ತಾರೆ.
ನಾನು ಮಕ್ಕಳ ಕಥೆ ಬರೆಯಲು ತಮ್ಮಣ್ಣ ಬೀಗಾರ ರವರೆ ಪ್ರೇರಣೆ. ಅವರು
ಮಗುವಾಗಿ ಕಥೆ ಗಳನ್ನು ಕಟ್ಟಿದ್ದಾರೆ.
ಬಿಗಾರಂತಹ ಮಕ್ಕಳ ಸಾಹಿತಿ ಜಿಲ್ಲೆಯಲ್ಲಿ ಮತ್ತೊಬ್ಬರಿಲ್ಲ. ಅವರಿಂದ ನಿರಂತರವಾಗಿ ಬರವಣಿಗೆ ಬರಲಿ. ಪ್ರತಿಯೊಬ್ಬ ಶಿಕ್ಷಕರು ಬೀಗಾರ ರವರ ಕೃತಿಗಳನ್ನು ಓದುವಂತಾಗಬೇಕು ಎಂದು ಬೀಗಾರ್ ರವರಿಗೆ ಶುಭಾಶಯ ಕೋರಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ ಮಾತನಾಡಿ ಮಕ್ಕಳ ಕವನ ಕಥೆಗಳನ್ನು ಬರೆಯುವುದು ಸುಲಭವಲ್ಲ. ಬರೆಯಲು ಮಗುವಾಗಿ ಕುಳಿತುಕೊಳ್ಳಬೇಕು. ಅದು ಬೀಗಾರರವರಲ್ಲಿದೆ‌. ಅವರು ನಮ್ಮ ತಾಲೂಕಿನ ರಾಜ್ಯ ದ ಶಿಕ್ಷಣ ಕ್ಷೇತ್ರಕ್ಕೆ ಆಸ್ತಿ ಎಂದರ

ಜಿ. ಜಿ.ಹೆಗಡೆ ಬಾಳಗೋಡ ಮಾತನಾಡಿ ಬರವಣಿಗೆಯಲ್ಲಿ ಏಕಾಗ್ರತೆ ಬೇಕು.
ಬೆರೆಯವರ ಕವನ ಗಳನ್ನು ಕೇಳಬೇಕು. ಅಂದಾಗ ಮಾತ್ರ ನಮ್ಮಲ್ಲಿರುವ ದೌರ್ಬಲ್ಯ ಗೊತ್ತಾಗುತ್ತದೆ. ಬೀಗಾರ್ ರವರು ಕವಿಗೋಷ್ಠಿಯಲ್ಲಿ ಎಲ್ಲರ ಕವನಗಳನ್ನು ಕೇಳುತ್ತಿದ್ದರು. ಆ ಕಾರಣಕ್ಕಾಗಿ ಗಟ್ಟಿತನದ ಕವನಗಳನ್ನು ಬರೆಯುತ್ತಿದ್ದಾರೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ತಮ್ಮಣ್ಣ ಬೀಗಾರ್ ಎಲ್ಲರಲ್ಲಿಯೂ ಅಗಾಧವಾದ ಪ್ರತಿಭೆ ಇದೆ. ಆದರೆ ನಾವು ಸಮಾಜಕ್ಕೆ ಏನು ಕೊಡುಗೆ ಕೊಡುತ್ತೇವೆ ಎನ್ನುವುದು ಮುಖ್ಯ. ಏನನ್ನು ನಾವು ಆಪ್ತತೆಯಿಂದ ಒಪ್ಪಿಕೊಳ್ಳುತ್ತೇವೆಯೋ ಅವು ನಮ್ಮನ್ನು ಆವರಿಸಿಕೊಳ್ಳುತ್ತವೆ. ನಾವು ಪ್ರೀತಿಯಿಂದ ಎಲ್ಲ ಕೆಲಸಗಳನ್ನು ವಮಾಡಬೇಕು‌
ಒಂದು ಪುಸ್ತಕ ವನ್ನು ಬರೆದರೆ ನಾನು ಮೊದಲು ಮಕ್ಕಳಿಗೆ ಹೇಳುತ್ತಿದ್ದೆ, ಅವರು ಖುಷಿ ಪಟ್ಟರೆ ಪುಸ್ತಕ ಪ್ರಿಂಟ್ ಹಾಕುತ್ತಿದ್ದೆ ಎಂದ ತಮ್ಮ ಅನುಭವ ಹಂಚಿಕೊಂಡ ಅವರು ಎಲ್ಲರುಗೂ ಧನ್ಯವಾದ ಅರ್ಪಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಗೋಪಾಲ ನಾಯ್ಕ ಭಾಶಿ
ಸಿ ಎಸ್ ಗೌಡರ್, ಜಿ ಆಯ್ ನಾಯ್ಕ, ಶಿವಾನಂದ ಹೊನ್ನೆಗುಂಡಿ, ಪಿಬಿ ಹೊಸೂರ್, ನಾಗರಾಜ ಮಾಳ್ಕೋಡ್, ಮಾತನಾಡಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಉಷಾ ನಾಯ್ಕ ಕವನ ವಾಚಿಸಿದರು.
ಅಣ್ಣಪ್ಪ ಶಿರಳಗಿ ನಿರೂಪಿಸಿದರು. ಪ್ರಶಾಂತ ಹೆಗಡೆ ವಂದಿಸಿದರು.

WhatsApp
Facebook
Telegram
error: Content is protected !!
Scroll to Top