ಹಲಗೇರಿ ವಲಯ ಮಟ್ಟದ ಪ್ರಾಥಮಿಕ ಶಾಲೆ ಮಕ್ಕಳ ಕ್ರೀಡಾ ಕೂಟ ಉದ್ಘಾಟನೆ

ಸಿದ್ದಾಪುರ:- ಕೊರೋನಾದಿಂದ ಶಾಲಾ ಚಟುವಟಿಕೆಗಳು ನಿಂತಿದ್ದವು. ಈ ವರ್ಷ ದಿಂದ ಚಟುವಟಿಕೆಗಳು ಪ್ರಾರಂಭವಾಗಿರುವುದರಿಂದ ಮಕ್ಕಳು ದೈಹಿಕವಾಗಿ, ಮಾನಸಿಕ ವೃದ್ದಿಯಾಗಲು ಸಹಕಾರಿಯಾಗುತ್ತದೆ ಎಂದು ಗ್ರಾಮ ಪಂಚಾಯತಿ ಸದಸ್ಯ ಕೃಷ್ಣಮೂರ್ತಿ ಮಡಿವಾಳ ಹೇಳಿದರು.
ಅವರು ತಾಲೂಕಿನ ಕಡಕೇರಿ ಗಾಂಧಿ ಮೈದಾನದಲ್ಲಿ ನಡೆದ ಹಲಗೇರಿ ಮತ್ತು ಬೇಡ್ಕಣಿ ಸಮೂಹ ಸಂಪನ್ಮೂಲ ಕೇಂದ್ರ ಗಳ ಹಲಗೇರಿ ವಲಯ ಮಟ್ಟದ ಪ್ರಾಥಮಿಕ ಶಾಲೆ ಮಕ್ಕಳ ಕ್ರೀಡಾ ಕೂಟ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.


ನಾವು ಸರ್ಕಾರ ಹಾಗೂ ಇಲಾಖೆಯ ನಿಯಮವನ್ನು ನಾವು ಪಾಲಿಸಬೇಕು. ಕ್ರೀಡಾ ಸ್ಫರ್ದೆಯಲ್ಲಿ ಪ್ರತಿಭೆ ಇದ್ದವರು ಗೆಲ್ಲುತ್ತಾರೆ ಯಾರಿಗೂ ಅನ್ಯಾಯವಾಗದ ಹಾಗೆ ನಿರ್ಣಾಯಕ ರು ತಮ್ಮ ಕಾರ್ಯ ನಿರ್ವಹಿಸಬೇಕು.
ಶಿಕ್ಷಣ ಜೊತೆಗೆ ಶಿಕ್ಷಕರು ಮಕ್ಕಳಿಗೆ ಉತ್ತಮ ಸಂಸ್ಕಾರ ವನ್ನು ನೀಡಬೇಕು.
ಎಂದರು.
ಅಧ್ಯಕ್ಷ ತೆ ವಹಿಸಿದ್ದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯ ಎಸ್ ಡಿ ಎಂ ಸಿ ಅಧ್ಯಕ್ಷ ಸುರೇಶ ಮಡಿವಾಳ ಮಾತನಾಡಿ ಮಕ್ಕಳು ತಮ್ಮ ಸಾಮರ್ಥ್ಯ ವನ್ನು ತೋರ್ಪಡಿಸಲು ಪ್ರಾಥಮಿಕ ಶಾಲೆಯಿಂದಲೆ ಉತ್ತಮ ಅವಕಾಶಗಳಿವೆ. ಒಂದು ಕ್ರೀಡಾ ಯಶಸ್ವಿಯಾಗಬೇಕಾದರೆ
ಸಾರ್ವಜನಿಕರ ಸಹಾಯ, ಪ್ರೋತ್ಸಾಹ ಅತ್ಯಗತ್ಯವಾಗಿದೆ ಎಂದರು.
ಬೇಡ್ಕಣಿ ಗ್ರಾಮ ಪಂಚಾಯತ ಅಧ್ಯಕ್ಷೆ ವಾಸಂತಿ ಕಾನಳ್ಳಿ ಕಾರ್ಯಕ್ರಮ ಉದ್ಘಾಟಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸದಾನಂದ ಸ್ವಾಮಿ ಕ್ರೀಡಾ ಕೂಟಕ್ಕೆ ಭೇಟಿ ನೀಡಿ ಮಕ್ಕಳಿಗೆ ಶುಭ ಕೋರಿದರು.

ಹಲಗೇರಿ ಗ್ರಾಮ ಪಂಚಾಯತಿ ಸದಸ್ಯ ಚಂದ್ರ ನಾಯ್ಕ ಮಾತನಾಡಿದರು.
ದೈಹಿಕ ಪರಿವಿಕ್ಷರಾದ ರಾಜುನಾಯ್ಕ, ಬೇಡ್ಕಣಿ ಸಿ ಆರ್ ಪಿ ಚಂದ್ರು, ಹಲಗೇರಿ ಸಿ ಆರ್ ಪಿ ಭಾಸ್ಕರ ಕಡಕೇರಿ, ಬೇಡ್ಕಣಿ, ಹಲಗೇರಿ ಎಚ್ ಪಿ ಎಸ್ ಗಳ ಮುಖ್ಯೋದ್ಯಾಪಕರಾದ ಮಾಯಾ ಭಟ್, ಶಿರನಾಳ, ಎಚ್ ಎಂ ಚಂದ್ರಮ್ಮ ಉಪಸ್ಥಿತರಿದ್ದರು.
ಕಡಕೇರಿಯ ವಿಧ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕಿಯರಾದ ಸುಮತಿ ನಾಯ್ಕ, ಶೃತಿ ನಿರೂಪಿಸಿದರು.

WhatsApp
Facebook
Telegram
error: Content is protected !!
Scroll to Top