ಸಮಗ್ರ ಆರೋಗ್ಯ ನಿರ್ವಹಣೆ ಆದಾಗ ಮಾತ್ರ ಆರೋಗ್ಯ ವಲಯದಲ್ಲಿ ಅಭಿವೃದ್ಧಿ ಸಾಧ್ಯ: ಶಶಿಭೂಷಣ ಹೆಗಡೆ

ಸಿದ್ದಾಪುರ:- ಇತರ ಎಲ್ಲ ಕ್ಷೇತ್ರಗಳಲ್ಲಿ ಈಗಾಗಲೇ ಲಭ್ಯವಿರುವಂತೆ ಆರೋಗ್ಯ ಕ್ಷೇತ್ರದಲ್ಲಿಯೂ ಕೂಡ ಸಮಗ್ರ ಆರೋಗ್ಯ ನಿರ್ವಹಣೆ ಎನ್ನುವ ಪರಿಕಲ್ಪನೆ ಮೂಡಬೇಕು ಸಮಗ್ರ ಆರೋಗ್ಯ ನಿರ್ವಹಣೆ ಆದಾಗ ಮಾತ್ರ ಆರೋಗ್ಯ ವಲಯದಲ್ಲಿ ಅಭಿವೃದ್ಧಿ ಸಾಧ್ಯಎಂದು ಸಮಾಜ ಸೇವಕರಾದ ಶಶಿಭೂಷಣ ಹೆಗಡೆ ಹೇಳಿದರು.


ಅವರು ಪಟ್ಟಣದ ಶ್ರೀ ಸಿದ್ದಿವಿನಾಯಕ ಆಂಗ್ಲ ಮಾಧ್ಯಮ ಶಾಲೆ ‌ಆವರಣದಲ್ಲಿ ಮನುವಿಕಾಸ ಸ್ವಯಂ ಸೇವಾ ಸಂಸ್ಥೆ, ಪ್ರಗತಿ ಮಿತ್ರ ಟ್ರಸ್ಟ್ , ಐಎಂಎ ಶಿರಸಿ ಮತ್ತು ಸಿದ್ದಾಪುರ, ಐಎಂಎ ಶಿರಸಿ, ಸೇವಾ ಪ್ರತಿಷ್ಠಾನ, ಲಯನ್ಸ್ ಕ್ಲಬ್ ಶಿರಸಿ ಮತ್ತು ಸಿದ್ದಾಪುರ ಎಸ್ ಡಿ ಎಂ ನಾರಯಣ ಹೃದಯಾಲಯ ಧಾರವಾಡ, ಶ್ರೀ ಸಿದ್ದಿವಿನಾಯಕ ಶಾಲೆ ಸಿದ್ದಾಪುರ , ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಮಾನಿಗಳ ಬಳಗ ಸಿದ್ದಾಪುರ ಇವರ ಸಂಯುಕ್ತ ಸಹಕಾರದಲ್ಲಿ ಆಯೋಜಿಸಲಾಗಿದ್ದ ಉಚಿತ
ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಇಂತಹ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಆಯೋಜಿಸುವುದರ ಮೂಲಕ ಮನುವಿಕಾಸ ಸಂಸ್ಥೆಯು ಮಧ್ಯಮ ವರ್ಗದ ಜನರಿಗೆ ವ್ಯಯಿಸುವ ಖರ್ಚನ್ನು ಕಡಿಮೆ ಮಾಡಿ ಮತ್ತು ಹೆಚ್ಚಿನ ಸೌಲಭ್ಯ ವನ್ನು ಒದಗಿಸುತ್ತಿದೆ ಎಂದರು.
ಡಾ ಎಲ್ ಧರ್ಮ ಶಾಲಾವೈದ್ಯ, ಡಾ ವಿಜಯಕುಮಾರ್, ಡಾ.ರಾಮಾ ಹೆಗಡೆ, ಡಾ.ಗೌತಮ್ ಶೇಟ್, ಡಾ. ಆಶಾ ಆನಂದ, ಡಾ.ಸುಫಲಾ, ಡಾ.ಎಸ್.ಎಮ್ ಹೆಗಡೆ,ಡಾ.ರಾಜು, ಡಾ.ನಾಗೇಶ್,ಡಾ.ವಿವೆಕಾನಂದ ಗಜಪತಿ, ಡಾ. ಶೃತಿ, ಡಾ.ಸ್ವಾತಿ ವಿನಾಯಕ, ಡಾ. ಜಿ.ಎಮ್‌ ಹೆಗಡೆ, ಡಾ.ರಾಘವೇಂದ್ರ ಭಟ್, ಡಾ.ಎನ್ ಅರ್ ಹೆಗಡೆ, ಡಾ.ಪೃಥ್ವಿ ಚಂದ್ರ, ಡಾ.ಝಹೀರ ಅಹಮದ್,ಡಾ. ರವಿ ಕಿರಣ ಪಟವಟವರ್ದನ್, ಡಾ. ಮಹಾಂತೇಶ್ , ಡಾ.‌ ಅನಿಲ್ ಎಸ್, ಡಾ.ಪ್ರಕಾಶ ಪುರಾಣಿಕ, ಡಾ. ಮಹೇಶ್ ಹೆಗಡೆ ವೊದಲಾದ ತಜ್ಞ ವೈದ್ಯರುಗಳು ಶಿಬಿರದಲ್ಲಿ ತಪಾಸಣೆ ನಡೆಸಿದರು.
ಶಿರಸಿ ಲಯನ್ಸ್ ಕ್ಲಬ್ ಉಪಾಧ್ಯಕ್ಷ ಅಶ್ವಥ್, ಸಮಾಜ ಸೇವಕರಾದ ಉಪೇಂದ್ರ ಪೈ , ಲಯನ್ಸ್ ಅಧ್ಯಕ್ಷರಾದ ಆರ್ .ಎಂ .ಪಾಟೀಲ್
ಉಪಸ್ಥಿತರಿದ್ದರು.
ಮನುವಿಕಾಸ ಸಂಸ್ಥೆಯ ನಿರ್ದೇಶಕ ಗಣಪತಿ ಭಟ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸುಮಾರು 500ಕ್ಕೂ ಹೆಚ್ಚು ಜನರು ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ತಜ್ಞ ವೈದ್ಯರಿಂದ ಸಲಹೆ ಪಡೆದುಕೊಂಡರು.

WhatsApp
Facebook
Telegram
error: Content is protected !!
Scroll to Top