ಟಿ ಎಂ ಎಸ್ ಹಣಕಾಸು ಸಂಸ್ಥೆ ೫.೮೮ ಕೋಟಿ ಲಾಭ

ಸಿದ್ದಾಪುರ:- ತಾಲೂಕಿನ ಹೆಮ್ಮಯ ಸಂಸ್ಥೆಯಾದ ತಾಲೂಕು ವ್ಯವಸಾಯ ಹುಟ್ಟುವಳಿ ಸಹಕಾರಿ ಮಾರಾಟ ಸಂಘವು 5.88 ಕೋಟಿ ನಿಕ್ಕಿಲಾಭ ಗಳಿಸಿದೆ ಎಂದು ಟಿ ಎಮ್ ಎಸ್ ಅಧ್ಯಕ್ಷ ಆರ್ ಎಮ್ ಹೆಗಡೆ ಬಾಳೇಸರ ಹೇಳಿದರು.

ಅವರು ಪಟ್ಟಣದ ಸಂಘದ ಕಚೇರಿಯಲ್ಲಿ ಸುದ್ದಿ ಗೋಷ್ಠಿ ನಡೆಸಿ ಸಂಘವು 2021-22 ನೇ ಸಾಲಿನಲ್ಲಿ 7,79,12, 558.10 ನಿವ್ವಳ ಲಾಭ ಗಳಿಸಿದ್ದು, ನಿಧಿಗಳನ್ನು ತೆಗೆದಿರಿಸಿದ ನಂತರದಲ್ಲಿ 5, 88, 22, 068.38 ಲಾಭ ಗಳಿಸಿದೆ.
75 ವರ್ಷಗಳ ಪಯಣದಲ್ಲಿ ಏಳು ಬೀಳುಗಳನ್ನು ಕಂಡ ಸಂಘವು ಇಂದು ಸದೃಢ ವಾಗಿದೆ. ಇದಕ್ಕೆ ಸಂಘದ ನಿಷ್ಠಾವಂತ ಸದಸ್ಯರ ಸಹಕಾರ, ಆಡಳಿತ ಮಂಡಳಿಯ ಸದಸ್ಯರ ಮಾರ್ಗದರ್ಶನ, ಸೇವಾ ಮನೋಭಾವ, ಕರ್ತವ್ಯನಿಷ್ಠ ಸಿಬ್ಬಂದಿಗಳ ಕಾಯಕದಿಂದ ಸಂಘವು ಉತ್ತಮ ಲಾಭಗಳಿಸಿ ಅಭಿವೃದ್ಧಿಪಥದಲ್ಲಿ ಮುನ್ನಡೆಯುತ್ತಿದೆ ಎಂದರು.
ಪ್ರಸ್ತುತ ಸಂಘದಲ್ಲಿ 3544 ಷೇರುದಾರ ಸದಸ್ಯರಿದ್ದು 3.24 ಕೋಟಿ ಶೇರು ಬಂಡವಾಳ ಹೊಂದಿರುತ್ತದೆ. ಸುಮಾರು 3900 ನಾಮಮಾತ್ರ ಸದಸ್ಯರಿದ್ದು 2021- 22 ನೇ ಸಾಲಿನಲ್ಲಿ 197 ಕೋಟಿ ವಹಿವಾಟು ನಡೆಸಲಾಗಿದೆ.
ಸಂಘದ ರೈಸ್ ಮಿಲ್ ಲಾಭದಾಯಕವಾಗಿ ಕಾರ್ಯ ನಿರ್ವಹಿಸಲು ಕ್ರಮ ಕೈಗುಳ್ಳಲಾಗುವುದು. ಕಟ್ಟಡ ನಿರ್ಮಾಣ ಸಾಮಗ್ರಿಗಳ ವಿಭಾಗವನ್ನು ನಿರ್ಮಿಸಲಾಗಿದ್ದು ಶೀಘ್ರದಲ್ಲೇ ಆರಂಭಗೊಳ್ಳಲಿದೆ.
ಸದಸ್ಯರ ಎಲ್ಲಾ ಅವಶ್ಯಕತೆ ಗಳನ್ನು ಗಮನದಲ್ಲಿಟ್ಟುಕೊಂಡು ದಿನಿಸಿ ವಿಭಾಗವನ್ನು ಶೀಘ್ರದಲ್ಲಿಯೇ ಕಾರ್ಯಾರಂಭ ಮಾಡಲಾಗುವುದು. ಸಂಘದಿಂದ ಪೆಟ್ರೋಲ್ ಬಂಕ್ ಆರಂಭಿಸುವ ಉದ್ದೇಶದಿಂದ 36 ಗುಂಟೆ ನಿವೇಶನವನ್ನು ಖರೀದಿಸಲಾಗಿದೆ.
ಕರೆನ್ಸಿ, ರಿಚಾರ್ಜ್, ಟಿಕೆಟ್ ಬುಕಿಂಗ್ ಹಾಗೂ ಇನ್ನಿತರ ಸೇವೆಗಳನ್ನು ಸೆಪ್ಟೆಂಬರ್ ಒಂದರಿಂದಲೇ ಪ್ರಾರಂಭಿಸಲಾಗುವುದು.
ಈ ಆರ್ಥಿಕ ವರ್ಷದಲ್ಲಿ ಸದಸ್ಯರ ಕ್ಷೇಮನಿಧಿ ಯೋಜನೆ ಅಡಿಯಲ್ಲಿ ಸದಸ್ಯರ ಆರೋಗ್ಯ ವೆಚ್ಚವನ್ನು ಭರಣ ಮಾಡಿಕೊಟ್ಟಿದೆ.
ಸರ್ಕಾರದ ಡಿಜಿಟಲ್ ಇಂಡಿಯಾ ಪರಿಕಲ್ಪನೆಯೊಂದಿಗೆ ಟಿಎಂಎಸ್ ವ್ಯಾಲೆಟ್ ಅನ್ನು ಪರಿಚಯಿಸಲಾಗುತ್ತದೆ.
ಸಂಘದ ಹಿರಿಯ ಸದಸ್ಯರ ನ್ನು,
ಎಸ್ ಎಸ್ ಎಲ್ ಸಿ ಯಲ್ಲಿ ರ್ಯಾಂಕ್ ಬಂದ ವಿದ್ಯಾರ್ಥಿ ಗಳಿಗೆ, ಎಲೆಯಲ್ಲಿ ರಾಷ್ಟ್ರ ಗೀತೆ ಬರೆದ ತೃಪ್ತಿ ನಾಯ್ಕ, ಅಂತರಾಷ್ಟ್ರೀಯ ಮಟ್ಟಕ್ಕೆ ಚೆಸ್ ನಲ್ಲಿ ಆಯ್ಕೆ ಯಾದ ಭರತ್ ಹೆಗಡೆ ಯವರನ್ನು ಸರ್ವಸಾಧಾರಣ ಸಭೆಯಲ್ಲಿ ಸನ್ಮಾನಿಸಲಾಗುವುದು ಎಂದರು.
ಸಭೆಯ ಕಾರ್ಯಕಲಾಪ ಮುಗಿದ ಬಳಿಕ ಸುಪ್ರಸಿದ್ಧ ಯಕ್ಷಗಾನ ಕಲಾವಿದರಿಂದ ಚಕ್ರಚಂಡಿಕೆ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

WhatsApp
Facebook
Telegram
error: Content is protected !!
Scroll to Top