ಭಟ್ಕಳ ಹೆಬ್ಳೆ ಗ್ರಾಮ ಪಂಚಾಯತ್ ಭ್ರಷ್ಟಾಚಾರ ಪರಿಶಿಲನೆಗೆ ಆಗಮಿಸಿದ ಜಿಲ್ಲಾ ಪಂಚಾಯತ್ ಅಧಿಕಾರಿ

ಗ್ರಾಮ‌ ಪಂಚಾಯತ್ ಆರೊಪಿತರ ಪರ ಬ್ಯಾಟಿಂಗ್ ಮಾಡಿದ ಪರಿಶೀಲನಾ ಅಧಿಕಾರಿ ಆಕ್ರೋಶಿತಗೊಂಡ ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆ

ಭಟ್ಕಳ ತಾಲೂಕಿನ ಹೆಬ್ಳೆ ಗ್ರಾಮ ಪಂಚಾಯತ್ ಅಲ್ಲಿ ಭ್ರಷ್ಟಾಚಾರ ಪರಿಶಿಲನೆಗೆ ಜಿಲ್ಲಾ ಪಂಚಾಯತ್ ವತಿಯಿಂದ ಬಂದ ಪರಿಶಿಲನಾ ಅಧಿಕಾರಿ ಗ್ರಾಮ ಪಂಚಾಯತ್ ಭ್ರಷ್ಟಾಚಾರದ ಆರೋಪವನ್ನು ಹೊತ್ತ ಅಧಿಕಾರಿಗಳ ಪರ ಬ್ಯಾಟಿಂಗ್ ಬಿಸಿದ ಹಿನ್ನೆಲೆಯಲ್ಲಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಆಕ್ರೋಶಿಗೊಂಡು ಪಾರದರ್ಶಕ ತನಿಖೆಗೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗದಿದ್ದಲ್ಲಿ ಹೈಕೊರ್ಟ ಮೊರೆಹೊಗುವುದಾಗಿ ಎಚ್ಚರಿಕೆ ನಿಡಿದ ಘಟನೆ ನಡೆದಿದೆ

ಈ ಹಿಂದೆ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಭಟ್ಕಳ ಘಟಕದ ಪ್ರಧಾನ ಕಾರ್ಯದರ್ಶಿ ನಾಗೇಶ ನಾಯ್ಕ ಹೆಬ್ಳೆ ಅವರು ಗ್ರಾಮ ಪಂಚಾಯತ್ ಅಲ್ಲಿ ಹಲವಾರು ಅವ್ಯವಹಾರ ನಡೆದಿದೆ ಎಂದು ಸಾಕ್ಷಿ ಸಹಿತ ಆರೋಪವನ್ನು ಮಾಡಿ ರಾಷ್ಟ್ರ ಪತಿಗಳಿಂದ ಹಿಡಿದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾ ಅಧಿಕಾರಿಗಳವರೆಗೂ ದೂರನ್ನು ಸಲ್ಲಿಸಿದ್ದರು ಈ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ಆದೇಶದಂತೆ ತಾಲೂಕ ಪಂಚಾಯತ್ ತಂಡವೊಂದು ಹೆಬ್ಳೆ ಗ್ರಾಮ‌‌‌ ಪಂಚಾಯತ್ಗೆ ಆಗಮಿಸಿ ಪರಿಶಿಲಿನೆ ನಡೆಸಿ ಗ್ರಾಮ ಪಂಚಾಯತ್ ಅಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಜಿಲ್ಲಾ ಪಂಚಾಯತ್ಗೆ ವರದಿಯನ್ನು ಒಪ್ಪಿಸಿದ್ದರು ಆದರೆ ಈ ಜಿಲ್ಲಾ ಪಂಚಾಯತ್ ಪುನಃ ಪರಿಶೀಲನೆ ನಡೆಸಲು ಡಿ ಎಸ್ ೨ ದರ್ಜೆಯ ಅಧಿಕಾರಿಯನ್ನು ಕಳುಹಿಸಿ ಕೊಟ್ಟಿದ್ದು ಆದರೆ ಇಲ್ಲಿ ಪರಿಶಿಲನೆಗೆ ಆಗಮಿಸಿದ್ದ ಅಧಿಕಾರಿ ಪರಿಶಿಲನೆ ನಡೆಸುವುದನ್ನು ಬಿಟ್ಟ ಆರೋಪಿತ ಪರ ದೂರುದಾರರೊಂದಿಗೆ ವಾದವನ್ನು ಮಾಡಿದ್ದಾರೆ ಹಾಗು ನೀವುಗಳು ಒಂದೆ ಸಮಾಜದವರು ಕುಳಿತು ಬಗೆಹರಿಸಿಕೊಳ್ಳಿ ಎಂಬ ರಾಜಿ ಪಂಚಾಯತಿಯನ್ಬು ನಡೆಸಲು ಶುರುವಿಟ್ಟುಕೊಂಡಿದ್ದಾರೆ ಅಲ್ಲದೆ ಪರಿಶಿಲನೆ ನಡೆಸಲು ಬಂದ ಇದೆ ಅಧಿಕಾರಿ ಗ್ರಾಮ‌ ಪಂಚಾಯತ್ ಅಲ್ಲಿ ಅಭಿವೃದ್ದಿ ಅಧಿಕಾರಿಗಳು ಅಧ್ಯಕ್ಷರು ಉಪಾಧ್ಯಕ್ಷರನ್ನೊಳಗೊಂಡಂತೆ ಅನೌಪಚಾರಿಕ ಸಭೆಯನ್ನು ಕರೆದು ಅಧ್ಯಕ್ಷ ಉಪಾಧ್ಯಕ್ಷರು ಮತ್ತು ಕೆಲವು ಸದಸ್ಯರಲ್ಲಿ ಗ್ರಾಮ ಪಂಚಾಯತ್ ಅಲ್ಲಿ ಭ್ರಷ್ಟಾಚಾರ ನಡೆದಿದೆಯೆ ಎಂದು ಯಾರು ಆರೋಪಿತರೋ ಅವರಲ್ಲಿ ಅನಿಸಿಕೆ ಕೇಳುತ್ತಾರೆ ಆರೋಪಿತರಿಗೆ ನಿವುಗಳು ತಪ್ಪು ಮಾಡಿದ್ದಿರಾ ಬ್ರಷ್ಟಾಚಾರ ನಡೆಸಿದ್ದಿರಾ ಎಂದು ಕೇಳಿದರೆ ಯಾವ ಆರೋಪಿತರು ಒಪ್ಪಿಕೊಳ್ಳುತ್ತಾರೆ. ಪರಿಶಿಲನೆಗೆ ಬಂದ ಅಧಿಕಾರಿ ದಾಖಲನೆಗಳನ್ನು ಪರಿಶಿಲನೆ ನಡೆಸದೆ ಸುದ್ದಿವಾಹಿನಿಯಲ್ಲಿ ಡಿಬೇಟ್ ಮಾಡುವಂತೆ ವಾದ ವಿವಾದವನ್ನು ಮಾಡಿದಲ್ಲದೆ ನೀವು ಒಂದೆ ಸಮಾಜದವರು ಕುಳಿತು ಬಗೆಹರಿಸಿಕೊಳ್ಳ ಬಹುದಲ್ಲಾ ಎಂದು ಜಾತಿಯನ್ನು ಅಡ್ಡವಿಟ್ಟು ರಾಜಿ ಪಂಚಾಯತಿಗೆ ಮುಂದಾಗಿದ್ದಾರೆ. ಇದರಿಂದಲೆ ಈ ಅಧಿಕಾರಿ ಭ್ರಷ್ಟಾಚಾರದ ಪರಿಶಿಲನೆ ಎಷ್ಟರಮಟ್ಟಿಗೆ ನಡೆಸಬಹುದು ಇವರು ಮುಂದೆ ನೀಡುವ ಪರಿಶಿಲನಾ ವರದಿ ಎನಾಗಿರಬಹುದು ಎಂದು ಊಹಿಸಬಹುದಾಗಿದೆ ಒಂದು ವೇಳೆ ಹೆಬ್ಳೆ ಗ್ರಾಮ ಪಂಚಾಯತ್ ಅಲ್ಲಿ ನಡೆದ ಬ್ರಷ್ಟಾಚಾರದ ಬಗ್ಗೆ ಸರಿಯಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಮೂಲಕ ಹೈಕೊರ್ಟ ಮೊರೆ ಹೊಗಲಾಗುವುದು ಎಂದು ಈಗಾಗಲೆ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆ ಸ್ಪಷ್ಟ ಪಡಿಸಿದೆ

WhatsApp
Facebook
Telegram
error: Content is protected !!
Scroll to Top