ಸಿದ್ದಾಪುರ ತಾಲೂಕಿನಾಧ್ಯಂತ ವಿಧ್ಯುತ್ ಕಂಬಕ್ಕೆ ಚಾಚಿಕೊಂಡಿರುವ ಮರಗಳು

ಸಾರ್ವಜನಿಕರ ಪ್ರಾಣಕ್ಕೆ ಕಂಟಕ ಕಣ್ಣಿದ್ದು ಕುರುಡಾದ ಅಧಿಕಾರಿಗಳು

ಸಿದ್ದಾಪುರ:- ತಾಲೂಕಿನ ಕಾನಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಳ್ಳಟ್ಟೆ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಕರೆಂಟ್ ಕಂಬಕ್ಕೆ ಮರವೊಂದು ಚಾಚಿಕೊಂಡಿದ್ದು ಅನಾಹುತಕ್ಕೆ ಏಡೆಮಾಡಿಕೊಡುವ ಪರಿಸ್ಥಿತಿ ಇದೆ.
ಈಗಾಗಲೇ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ರೀತಿ ಕ್ರಮ ಕೈಗೊಂಡಿರುವುದಿಲ್ಲಾ.
ಆ ಮರವನ್ನು ತೆರವುಗೊಳಿಸುವ ಕೆಲಸ ಆಗಿರುವುದಿಲ್ಲಾ, ಮುಂದಿನ ದಿನಗಳಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ಕೆ.ಇ.ಬಿ ಯ ಅಧಿಕಾರಿಗಳು ಮತ್ತು ಆಡಳಿತ ಸಿಬ್ಬಂದಿ ವರ್ಗವೇ ನೆರಹೊಣೆಯನ್ನು ಹೊರಬೇಕು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ

ಸಿದ್ದಾಪುರ ತಾಲೂಕಿನಾದ್ಯಂತ ಸಾಕಷ್ಟು ಹಳ್ಳಿಗಳಲ್ಲಿ ಇಂತಹ ಸಮಸ್ಯೆಗಳಿವೆ.
ಮಳೆಗಾಲ ಶುರುವಾಗಿ ತಿಂಗಳುಗಳೇ ಕಳೆದಿದೆ ಆದರೆ ಯಾವುದೇ ರೀತಿ ವಿದ್ಯುತ್ ಕಂಬದ ಆಸುಪಾಸಿನ ಮರಗಳ ಕಟಾವು ಮಾಡಿಲ್ಲಾ. ಇದಕ್ಕೆ ಅಧಿಕಾರಿಗಳ ಬೇಜವಾಬ್ದಾರಿ ಕಾರಣ. ಜಂಗಲ್ ಕಟಿಂಗ್ ಮಾಡುವಾಗ ಸರಿಯಾಗಿ ಕಟಿಂಗ್ ಮಾಡುತ್ತಿಲ್ಲಾ. ಅಧಿಕಾರಿಗಳು ಬೇಜವಬ್ದಾರಿ ತೋರುತ್ತಿದ್ದಾರೆ. ಲೈನ್ ಗಳಿಗೆ ಜಂಗಲ್ ಹತ್ತಿರುವುದನ್ನು ಆದಷ್ಟು ಬೇಗ ಕಟಾವು ಮಾಡಬೇಕು. ಈ ಬಳ್ಳಟ್ಟೆ ಗ್ರಾಮದ ಸಮಸ್ಯೆ ಸುಮಾರು ಒಂದು ವಾರವೇ ಕಳೆದಿದೆ ಆದರೇ ಈ ಅನಾಹುತವನ್ನು ತಪ್ಪಿಸುವ ಕೆಲಸವನ್ನು ಮಾಡದೇ ಅನಾಹುತ ಸಂಭವಿಸುವವರೆಗೂ ಬೇಜವಬ್ದಾರಿ ತೋರಿಸಿ ಮೈಮರೆತಿರುವುದು ಸರಿಯಲ್ಲಾ. ಆದಷ್ಟು ಬೇಗ ಆ ಮರವನ್ನು ತೆರವುಗೊಳಿಸಬೇಕು. ಈ ಸಮಸ್ಯೆಯನ್ನು ಪರಿಹರಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ಕೈಗೊಳ್ಳುತ್ತೇವೆ ಮಾಡಬೇಕಾಗುತ್ತದೆ ಎಂದು ಸ್ಥಳೀಯ ರು ಎಚ್ಚರಿಸಿದ್ದಾರೆ.

WhatsApp
Facebook
Telegram
error: Content is protected !!
Scroll to Top