ಹೊನ್ನಾವರದಲ್ಲಿ ಜೀವ ರಕ್ಷಣಾ ಕೌಶಲ್ಯ ತರಬೇತಿ ಕಾರ್ಯಕ್ರಮಜೀವ ರಕ್ಷಣಾ ಕೌಶಲ್ಯ ತರಬೇತಿ ಕಾರ್ಯಕ್ರಮ

ಹೊನ್ನಾವರ: ಪ್ರಕೃತಿ ವಿಕೋಪದಂತಹ ಸನ್ನಿವೇಶದಲ್ಲಿ ತುರ್ತು ನೆರವಿಗೆ ಧಾವಿಸಲು ಗ್ರಾಮೀಣ ಮಟ್ಟದ ಶೌರ್ಯ ಪಡೆಯನ್ನು ಧರ್ಮಸ್ಥಳ ಯೋಜನೆ ಸಿದ್ದಮಾಡಿರುವುದು ಉತ್ತಮ ಕಾರ್ಯ ಎಂದು ಒಕ್ಕಲಿಗ ಸಂಘದ ತಾಲೂಕ ಅಧ್ಯಕ್ಷ ತಿಮ್ಮಪ್ಪ ಗೌಡ ಪ್ರಶಂಸೆ ವ್ಯಕ್ತಪಡಿಸಿದರು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹೊನ್ನಾವರ/ ಭಟ್ಕಳ ಜನಜಾಗೃತಿ ವೇದಿಕೆ, ಉಷಾ ವೈರ್ ಸೇಪ್ಟಿ ಪ್ರೈವೇಟ್ ಲಿಮೆಟೆಡ್ ವತಿಯಿಂದ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಸಂಯೋಜಕರು ಮತ್ತು ಸ್ವಯಂ ಸೇವಕರಿಗೆ ಜೀವ ರಕ್ಷಣಾ ಕೌಶಲ್ಯ ತರಬೇತಿ ಕಾರ್ಯಕ್ರಮ ಕೆಳಗಿನೂರಿನ ಒಕ್ಕಲಿಗ ಸಭಾಭವನದಲ್ಲಿ ಉದ್ಘಾಟಿಸಿ ಮಾತನಾಡಿದರು
ಹಿಂದಿನ ಪರಿಸ್ಥಿತಿಯಲ್ಲಿ ನಮ್ಮ ಭಾಗದಲ್ಲಿಯೂ ಪ್ರಾಕೃತಿಕ ವಿಕೋಪದ ಸಮಯದಲ್ಲಿ ಇಂತಹ ಸಂಘಟನೆಯ ಅಗತ್ಯವಿದೆ. ನಮ್ಮ ಜೀವನದ ರಕ್ಷಣೆಯ ಜೊತೆ ಇತರರ ರಕ್ಷಣೆಯ ಯೋಜನೆಯ ಕಾರ್ಯ ಮಾದರಿಯಾಗಿದೆ ಎಂದರು.

ಯೋಜನೆಯ ಜಿಲ್ಲಾ ನಿರ್ದೆಶಕರಾದ ಮಹೇಶ ಎಂ.ಡಿ. ಮಾತನಾಡಿ ಸೇವೆ ಮಾಡಲು ಬಡವ ಶ್ರೀಮಂತ, ಜಾತಿ ಧರ್ಮ ಎನ್ನುವ ಭೇದವಿಲ್ಲ. ಕೇವಲ ಒಳ್ಳೆಯ ಮನಸ್ಸು ಇರುವವರು ಬೇಕು ಅಂತವರು ನಮ್ಮ ಶೌರ್ಯ ಸ್ವಯಂ ಸೇವಕರಾಗಿದ್ದಾರೆ. ನಮ್ಮನ್ನು ನಾವೇ ಹಾಗೂ ಸುತ್ತಮುತ್ತಲಿನವರನ್ನು ರಕ್ಷಣೆಗೆ ಅಣಿಯಾಗಿಸುವ ಕಾರ್ಯ ಇಂದಿನ ತರಬೇತಿ ಸಜ್ಜುಗೊಳಿಸಲಿದೆ. ತುರ್ತು ಅನಾಹುತ ಸಂಭವಿಸಿದಾಗ ಕೈಗೊಳ್ಳಬೇಕಾದ ಕ್ರಮದ ಕುರಿತು ಮಾಹಿತಿ ನೀಡಿದರು.
ಗ್ರಾಮಾಭಿವೃದ್ದಿ ಯೋಜನೆಯಿಂದ ಮಂಜೂರಾದ ವಿವಿಧ ಸುರಕ್ಷತಾ ಸಲಕರಣೆಯನ್ನು ಇದೇ ವೇಳೆ ಹಸ್ತಾಂತರಿಸಲಾಯಿತು.
ಮಂಗಳೂರಿನ ಉಷಾ ವೈರ್ ಸೇಪ್ಟಿ ಪ್ರೈವೇಟ್ ಲಿಮಿಟೆಡ್ ಅಧ್ಯಕ್ಷರಾದ ಕೆ.ಜಗದೀಶ ಅಡಪ ಸ್ವಯಂಸೇವಕರಿಗೆ ತರಬೇತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ
ವೇದಿಕೆಯಲ್ಲಿ ಪ.ಪಂ.ಅಧ್ಯಕ್ಷರಾದ ಶಿವರಾಜ ಮೇಸ್ತ ಮಾತನಾಡಿ ಪ್ರತಿಯೊರ್ವರ ಜೀವ ಅಮೂಲ್ಯವಾದದ್ದು. ಇದನ್ನು ಮನಗಂಡು ಯೋಜನೆ ಈ ಘಟಕ ಆರಂಭಿಸಿದ್ದು, ಗ್ರಾಮೀಣ ಭಾಗದಲ್ಲಿ ಕ್ಷಣಾರ್ಧದಲ್ಲಿ ನೆರವಾಗುವ ಮೂಲಕ ಅನಾಹುತ ತಪ್ಪಿಸಬಹುದು. ಆಡು ಮುಟ್ಟದ ಸೊಪ್ಪಿಲ್ಲ. ಗ್ರಾಮಾಭಿವೃದ್ದಿ ಯೋಜನೆ ಮಾಡದ ಜನಪರ ಯೋಜನೆಗಳಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೆಳಗಿನೂರು ಗ್ರಾ.ಪಂ. ಅಧ್ಯಕ್ಷ ಗಂಗಾಧರ ಗೌಡ, ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ಜೈವಂತ ಪಟಗಾರ ಯೋಜನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.
ಯೋಜನಾಧಿಕಾರಿ ಗಣೇಶ ಸ್ವಾಗತಿಸಿ ವಾಸಂತಿ ಅಮೀನ್ ವಂದಿಸಿದರು. ಮೇಲ್ವಿಚಾರಕ ನಾಗರಾಜ ಉಪ್ಪೋಣಿ ಕಾರ್ಯಕ್ರಮ ನಿರ್ವಹಿಸಿದರು. ಯೋಜನೆಯ ಕಾರ್ಯಕರ್ತರು, ಶೌರ್ಯ ಸಂಘಟನೆಯ ಸ್ವಯಂಸೇವಕರು ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top