ಕರಾಟೆ ಪಂದ್ಯಾವಳಿಯಲ್ಲಿ ಸಿದ್ದಾಪುರಕ್ಕೆ ಚಿನ್ನ ಬೆಳ್ಳಿ ಕಂಚಿ‌‌ನ ಪದಕ

ಪಂದ್ಯ ಗೆದ್ದು ತವರಿಗೆ ಮರಳಿದ ಕುವರರಿಗೆ ಅದ್ದೂರಿಯ ಸ್ವಾಗತ

ಸಿದ್ದಾಪುರ: ಕೋಲ್ಕತ್ತಾದಲ್ಲಿ ನಡೆದ ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಬಂಗಾರದ ಪದಕ ಗೆದ್ದ ಸಿದ್ದಾಪುರ ತಾಲೂಕಿನ ಕೊಂಡ್ಲಿಯ ಆನಂದ ನಾಯ್ಕ, ಬೆಳ್ಳಿ ಪದಕ ಗೆದ್ದ ಅಜಿತ್ ಕೊಡಿಯಾ ಹಾಗೂ ಕಂಚಿನ ಪದಕ ಗೆದ್ದ ಜಯಂತ್ ನಾಯ್ಕ ಇವರಿಗೆ ಪಟ್ಟಣದ ಬಸ್ ನಿಲ್ದಾಣದಲ್ಲಿ ತಾಲೂಕಿನ ಜನತೆ ವತಿಯಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು.


ಕೋಲ್ಕತ್ತಾದಿಂದ ಶಿರಸಿ ಮೂಲಕ ಸಿದ್ದಾಪುರಕ್ಕೆ ಬುಧವಾರ ರಾತ್ರಿ ಆಗಮಿಸಿದ ಆನಂದ ನಾಯ್ಕ, ಅಜಿತ್ ಕೊಡಿಯಾ ಹಾಗೂ ಜಯಂತ್ ನಾಯ್ಕ ಇವರಿಗೆ ಹಾರ ಹಾಕಿ ಸ್ವಾಗತಿಸುವ ಮೂಲಕ ಅಭಿನಂದನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಆನಂದ ನಾಯ್ಕ, ಅಂತರಾಷ್ಟ್ರೀಯ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಗೆದ್ದಿರುವುದಕ್ಕೆ
ತುಂಬಾ ಖುಷಿಯಾಗುತ್ತಿದೆ. 10 ದೇಶಗಳಿಂದ 4800 ಕ್ರೀಡಾ ಪಟುಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಕಟಾ ವಿಭಾಗದಲ್ಲಿ ನನಗೆ ಬಂಗಾರ, ನಮ್ಮ ವಿದ್ಯಾರ್ಥಿ ಗಳಾದ ಅಜಿತ್ ಕೊಡಿಯಾಗೆ ಒಂದು ಬೆಳ್ಳಿ, ಒಂದು ಕಂಚು ಹಾಗೂ ಜಯಂತ ನಾಯ್ಕ ಗೆ ಕಂಚಿನ ಪದಕ ಬಂದಿದ್ದು ತುಂಬಾ ಖುಷಿ ಯಾಗಿದೆ‌ ತಾಲೂಕಿನ ಜನತೆಯ ರೀತಿ ಸಹಕಾರಕ್ಕೆ ಚಿರ ಋಣಿಯಾಗಿದ್ದೇನೆ ಎಂದರು ಈ ವೇಳೆ ಕೃಷ್ಣ ನಾಯ್ಕ ಕೊಂಡ್ಲಿ, ಪ್ರಮುಖರಾದ ಗುರುರಾಜ ಶಾನಭಾಗ, ಸುರೇಶ ನಾಯ್ಕ ಬಾಲಿಕೊಪ್ಪ, ತೋಟಪ್ಪ ನಾಯ್ಕ ಹೊಸೂರ, ಕೃಷ್ಣಮೂರ್ತಿ ನಾಯ್ಕ ನಿಡಗೋಡ, ಎ.ಜಿ.ನಾಯ್ಕ ಕಡಕೇರಿ, ರಾಜೇಂದ್ರ ಕಿಂದ್ರಿ, ವೆಂಕೋಬ ಮತ್ತಿತರರು ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top