Tuesday, August 9, 2022
Homeವಿಶೇಷ ವರದಿಭಟ್ಕಳದಲ್ಲಿ ನೇರೆ ಹಾವಳಿಯ ಸಂಬಂದ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ನೇತ್ರತ್ವದಲ್ಲಿ ಸಭೆ

ಭಟ್ಕಳದಲ್ಲಿ ನೇರೆ ಹಾವಳಿಯ ಸಂಬಂದ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ನೇತ್ರತ್ವದಲ್ಲಿ ಸಭೆ

ಯಾವುದೆ ಬಡವರಿಗೆ ಅನ್ಯಾಯವಾಗ ಬಾರದು ಕೋಟಾ ಶ್ರೀನಿವಾಸ ಪುಜಾರಿ

ಭಟ್ಕಳ ತಾಲೂಕಿನಲ್ಲಿ ಸುರಿದ ಬಾರಿ ಮಳೆಯ ಕಾರಣ ಉಂಟಾದ ನೆರೆಹಾವಳಿಯಿಂದ ನಷ್ಟ ಅನುಭವಿಸಿರುವ ಸಾರ್ವಜನಿಕರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ನೇತ್ರತ್ವದಲ್ಲಿ ಸರಕಾರಿ ಸೌದದಲ್ಲಿ ಜಿಲ್ಲಾಧಿಕಾರಿ ಹಾಗು ಪಶ್ಚಿಮಘಟ್ಟ ಸಂರಕ್ಷಣಾ ನಿಗಮದ ಅಧ್ಯಕ್ಷ ಗೋವಿಂದ ನಾಯ್ಕ ಶಾಸಕ ಸುನಿಲ್ ನಾಯ್ಕ ಹಾಗು ಇನ್ನಿತರ ಅಧಿಕಾರಿಗಳನ್ನೊಳಗೊಂಡಂತೆ ಸಭೆಯನ್ನು ಹಮ್ಮಿಕೊಳ್ಳಲಾಯಿತು

ತಾಲೂಕಿನಲ್ಲಿ ಉಂಟಾದ ಅತಿವೃಷ್ಟಿಯ ಕಾರಣ ಯಾವೊಬ್ಬ ಸಾರ್ವಜನಿಕರರಿಗೂ ಅನ್ಯಾಯವಾಗ ಬಾರದು ಪ್ರತಿ ಒಬ್ಬರಿಗೂ ನ್ಯಾಯ ದೊರಕಬೇಕು ಎಂದು ಉಸ್ತುವಾರಿ ಸಚಿವ ಕೊಟ ಶ್ರೀನಿವಾಸ ಪುಜಾರಿ ಹೇಳಿದರು

ಸಭೆಯಲ್ಲಿ ತಾಲೂಕಿನ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅತಿವೃಷ್ಟಿಯಿಂದ ಸಾರ್ವಜನಿಕರಿಗೆ ಉಂಟಾದ ನಷ್ಟದ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಯಿತು ಮುಖ್ಯವಾಗಿ ಮುಟ್ಟಳ್ಳಿ ಮುಂಡಳ್ಳಿ , ಮಾರುಕೇರಿ , ಜಾಲಿ ಹೆಬ್ಬಳೆ ಹೀಗೆ ವಿವಿದ ಗ್ರಾಮ ಪಂಚಾಯತಗಳಲ್ಲಿ ನಡೆದ ನಷ್ಟಗಳ ಬಗ್ಗೆ ಆಯಾ ಗ್ರಾಮ ಪಂಚಾಯತ್ ಮತ್ತು ಅಧ್ಯಕ್ಷರ ಮೂಲಕ ಮಾಹಿತಿ ಪಡೆದುಕೊಂಡರು

ಈ ಸಂದರ್ಬದಲ್ಲಿ ಉಸ್ತುವಾರಿ ಸಚಿವರು ಗ್ರಾಮ ಪಂಚಾಯತ್ ಎಲ್ಲಾ ಪಿಡಿಓಗಳು ನಾಳೆ ಒಳಗಾಗಿ ಸಾರ್ವಜನಿಕರಿಗಾದ ನಷ್ಟದ ಬಗ್ಗೆ ಮಾಹಿತಿ ಒದಗಿಸಬೇಕು ಹಾಗು ಸಾರ್ವಜನಿಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ಒದಗಿಸುವಂತಾಗ ಬೇಕು ಅತಿ ಕನಿಷ್ಟ ಎಂದರೂ ಹತ್ತು ಸಾವಿರ ರೂ ನಿರಾಶ್ರಿತರಿಗೆ ದೊರೆಯುವಂತಾಗ ಬೇಕು ಅಂದರೆ ಯಾವುದಾದರು ಮನೆಗೆ ನೀರು ನುಗ್ಗಿ ಅವರ ಟಿವಿ ಪ್ರೀಜ್ ಹಾಳಾಗಿ ಅವರೆ ರಿಪೇರಿ ಮಾಡಿಕೊಂಡಿದ್ದರೆ ಅಂತಹ ಮನೆಗಳಿಗೂ 10 ಸಾವಿರ ರೂ ಪರಿಹಾರ ಮಂಜುರು ಮಾಡಿ ಎಂದು ಹೇಳಿದರು

ಸಭೆಯಲ್ಲಿ ಸಾರ್ವಜನಿಕರು ಹಾಗು ಸಮಾಜದ ಮುಖಂಡರು ತಮ್ಮ ಸಮಸ್ಯೆಗಳನ್ನು ಉಂಟಾದ ನಷ್ಟಗಳ ಬಗ್ಗೆ ಯಾವ ಪ್ರಮಾಣದಲ್ಲಿ ಪರಿಹಾರ ಕಾರ್ಯ ನಡೆಯ ಬೇಕು ಎಂಬುದರ ಬಗ್ಗೆ ಸಲಹೆಗಳನ್ನು ನೀಡಿದರು

ಈ ಸಂದರ್ಬದಲ್ಲಿ ಜಿಲ್ಲಾಧಿಕಾರಿಗಳಾದ ಮುಲೈಮುಗಿಲ್ಲನ್ ಸಹಾಯಕ ಆಯುಕ್ತರಾದ ಮಮತಾ ದೇವಿ , ತಾಲೂಕ ತಹಶಿಲ್ದಾರರು, ಪುರಸಭಾ ಅಧ್ಯಕ್ಷ ಪರ್ವೇಜ್ ಕಾಶಿಮ್ ಮುಂತಾದವರು ಉಪಸ್ತಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!