ಸಿದ್ದಾಪುರ ತಾಲೂಕಿನಲ್ಲಿ ಶ್ರದ್ದಾ ಭಕ್ತಿಯಿಂದ ನಾಗರ ಪಂಚಮಿ

ನಾಗನ ಪೂಜೆಗೈದು ಪುನಿತರಾದ ಭಕ್ತ ವೃಂದ

ಸಿದ್ದಾಪುರ:- ತಾಲೂಕಿನಲ್ಲಿ ನಾಗರ ಪಂಚಮಿ ಹಬ್ಬವನ್ನು ಶೃದ್ಧಾ ಭಕ್ತಿಯಿಂದ
ಆಚರಿಸಲಾಯಿತು

. ಭಕ್ತರು ಬೆಳಿಗ್ಗೆನಿಂದಲೇ ನಾಗ ದೇವಸ್ಥಾನ, ನಾಗರಕಟ್ಟೆ, ನಾಗಬನ ಮುಂತಾದ ನಾಗ ಪ್ರತಿಷ್ಟಾಪಿಸಿದ ಕಡೆಗಳಲ್ಲಿ ಸ್ವಚ್ಚತೆ ಮಾಡಿ ತಳಿರು ತೋರಣಗಳಿಂದ ಸಿಂಗರಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಮಹಿಳೆಯರು ನಾಗನಿಗೆ, ನಾಗರಕಲ್ಲಿಗೆ, ಹುತ್ತಕ್ಕೆ ಹಾಲೆರೆದು ಕಡಲೆ, ಯಳ್ಳುಂಡೆ, ಲಾಡು ಮುಂತಾದುವುಗಳು ನೈವೇದ್ಯ ನೀಡಿ ಹಣ್ಣು ಕಾಯಿ ಮಾಡಿಸಿ ತಮ್ಮ ಇಷ್ಟಾರ್ಥ ಈಡೇರಿಸಿಕೊಡುವಂತೆ ಬೇಡಿಕೊಂಡರು. ಇಂದು ಹಾಲೆರೆದು ಬೇಡಿಕೊಂಡರೆ ಜೀವನದ ಸಕಲ ಸಮಸ್ಯೆ ಗಳು ನಿವಾರಣೆ ಯಾಗುತ್ತವೆ ಎಂಬುದು ಜನರ ನಂಬಿಕೆ. ಸುಬ್ರಹ್ಮಣ್ಯ ದೇವಸ್ಥಾನ, ಶ್ರೀ ಕ್ಷೇತ್ರಪಾಲ, ಶ್ರೀ ವಾಸುಕಿ ನಾಗದೇವತಾ, ಶ್ರೀ ಚೌಡೇಶ್ವರಿ ದೇವಾಲಯ .ನಾಗರಕಟ್ಟೆ , ನಾಗರಬನ ಹೀಗೆ ವಿವಿಧ ಕಡೆಗಳಲ್ಲಿ ನಾಗರ ಪಂಚಮಿ ಹಬ್ಬದ ಪ್ರಯುಕ್ರ ಯಜ್ಞ, ಹವನ, ಮಹಾಮಂಗಳಾರತಿ ಮುಂತಾದ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು. ಇಂದು ಹಲವು ಗ್ರಾಮಗಳಲ್ಲಿನ ಭಕ್ತರು ತಮ್ಮ ಎಲ್ಲಾ ಕೃಷಿ ಕೆಲಸಗಳನ್ನು ಬಿಟ್ಟು ಹಬ್ಬದಾಚರಣೆಯಲ್ಲಿ ತೊಡಗಿಕೊಂಡರೆ, ಇನ್ನು ಕೆಲವು ಗ್ರಾಮಗಳಲ್ಲಿ ಇಂದು ಸಹ ಕೃಷಿ ಕೆಲಸದಲ್ಲಿ ತೊಡಗಿಕೊಂಡಿದ್ದರು. ಇಂದು ನೆಲ ಅಗೆಯ ಬಾರದು ಎಂಬ ನಂಬಿಕೆ ಹಿಂದಿನ ಕಾಲದಿಂದಲೂ ಬಂದಿದ್ದರಿಂದ ಕೆಲವರು ಹಿರಿಯರ ಆಚರಣೆಯನ್ನು ಅನುಸರಿಸಿದರೆ ಇನ್ನು ಕೆಲವು ಗ್ರಾಮಗಳಲ್ಲಿ ಹಿರಿಯರ ಆಚರಣೆ ಅನುಸರಿಸದೆ ಕೆಲಸದಲ್ಲಿ ತೊಡಗಿದ್ದರು. ಒಟ್ಟಿನಲ್ಲಿ ನಾಗರ ಪಂಚಮಿ ಹಬ್ಬವನ್ನು ಶೃಧ್ಧಾಭಕ್ತಯಿಂದ ಆಚರಿಸಲಾಯಿತು.

WhatsApp
Facebook
Telegram
error: Content is protected !!
Scroll to Top