ಭಟ್ಕಳ ಮುಟ್ಟಳ್ಳಿ ಮನೆಯ ಮೇಲೆ ಗುಡ್ಡ ಕುಸಿತ

ಒಂದೆ ಕುಟುಂಬದ ನಾಲ್ವರ ದುರ್ಮರಣ

ಸ್ಥಳಕ್ಕಾಗಮಿಸಿದ ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲೈಮುಗಿಲ್ಲನ್

ಭಟ್ಕಳ: ತಾಲೂಕಿನಾಧ್ಯಂತ ಸೋಮವಾರ ಸಂಜೆಯಿಂದ ಸುರಿಯುತ್ತಿದ್ದ ಬಾರಿ ಮಳೆಯ ಕಾರಣ ಮುಟ್ಟಳ್ಳಿ ಗ್ರಾಮ ಮಂಚಾಯತ್ ವ್ಯಾಪ್ತಿಯಲ್ಲಿ ಮನೆಯೊಂದರ ಮೇಲೆ ಗುಡ್ಡ ಕುಸಿದು ಒಂದೆ ಕುಟುಂಬದ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದು ಮನೆಯ ಮೇಲೆ ಬಿದ್ದಿರುವ ಗುಡ್ಡದ ಮಣ್ಣನ್ನು ತೆರವು ಗೊಳಿಸಿ ಶವಗಳನ್ನು ಮರಣೊತ್ತರ ಪರಿಕ್ಷೇಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ

ಮೃತ ದುರ್ದೈವಿಗಳು ಲಕ್ಷ್ಮಿನಾರಾಯಣ ನಾಯ್ಕ ಅವರ ಪುತ್ರಿ ಲಕ್ಷ್ಮಿ ನಾಯ್ಕ. ಪುತ್ರ ಅನಂತ ನಾರಾಯಣ ನಾಯ್ಕ ಹಾಗೂ ಸಂಬಂಧಿ ಪ್ರವೀಣ ಬಾಲಕೃಷ್ಣ ನಾಯ್ಕ ಎಂದು ಗುರುತಿಸಲಾಗಿದ್ದು

ಭಾರಿ ಮಳೆ ಕಾರಣ ಗುಡ್ಡದ ಮೇಲಿನಿಂದ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿದು. ಮನೆ ಸಂಪೂರ್ಣ ನಾಶವಾಗಿದೆ

ಈ ಬಗ್ಗೆ ಪಶ್ಚೀಮ ಘಟ್ಟಗಳ ಸಂರಕ್ಷಣಾ ಪಡೆ ನಿಗಮದ ಅಧ್ಯಕ್ಷರಾದ ಗೊವಿಂದ ನಾಯ್ಕ ಮಾತನಾಡಿ ನಮ್ಮ ಭಟ್ಕಳದಲ್ಲಿ ಹಿಂದೆಂದೂ ಕೇಳರಿಯದ ಮಳೆಯಾಗಿ ತಾಲೂಕಿನಾಧ್ಯಂತ ಜನ ಜೀವನ ಅಸ್ತವ್ಯಸ್ತವಾಗಿದೆ ಮುಟ್ಟಳ್ಳಿಯಲ್ಲಿನ ಈ ದುರಂತ ಅತೀವ ದುಃಖ ತಂದಿದೆ ಬೆಳ್ಳಿಗೆ ಮೂರು ಘಂಟೆಯಿಂದ ನಾವು ಕಾರ್ಯಾಚರಣೆ ನಡೆಸಿ ಈ ಆ ಬಡ ಕುಟುಂಬದ ನಾಲ್ವರ ಶವವನ್ನು ಪತ್ತೆ ಹಚ್ಚಿದ್ದೆವೆ ಮೃತರ ಕುಟುಂಬ ಹೆಚ್ಚಿನ ಪರಿಹಾರ ಒದಗಿಸುವ ಕ್ರಮ ಕೈಗೊಳ್ಳಲಾಗು ಎಂಬ ಭರವಸೆಯನ್ನು ನೀಡಿದರು

ಕಾರ್ಯಾಚರಣೆಯಲ್ಲಿ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಸಹಾಯಕ ಆಯುಕ್ತರಾದ ಮಮತಾ ದೇವಿ ತಾಲೂಕ ತಹಶಿಲ್ದಾರ್ ಶಾಸಕ ಸುನಿಲ್ ನಾಯ್ಕ ಹಾಗು ಎನ್ ಆರ್ ಎಪ್ ತಂಡಗಳು ಅಗ್ನಿ ಶಾಮಕ ದಳದವರು ಪಾಲ್ಗೊಂಡಿದ್ದರು

WhatsApp
Facebook
Telegram
error: Content is protected !!
Scroll to Top