ಭಟ್ಕಳದಲ್ಲಿ ಸೊಮವಾರ ಸಂಜೆಯಿಂದಲೆ ಸುರಿಯುತ್ತಿರುವ ಬಾರಿ ಮಳೆ

ಮುಟ್ಟಳ್ಳಿಯಲ್ಲಿ ಮನೆಯ ಮೇಲೆ ಗುಡ್ಡ ಕುಸಿದು ನಾಲ್ವರು ನಾಪತ್ತೆ : ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಿದ ತಾಲೂಕಾಡಳಿತ

ಭಟ್ಕಳ ತಾಲೂಕಿನಾಧ್ಯಂತ ಸೊಮವಾರ ಸಂಜೆ ಯಿಂದಲೆ ನಿರಂತರವಾಗಿ ಬಾರಿ ಮಳೆ ಸುರಿಯುತ್ತಿದ್ದು ಭಟ್ಕಳದಾಧ್ಯಂತ ಜನ ಜೀವನ ಅಸ್ತವ್ಯಸ್ತವಾಗಿದ್ದು ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಿದೆ.

ಸೊಮವಾರ ಸಂಜೆಯಿಂದ ಮಳೆ ನಿರಂತರವಾಗಿ ಸುರಿಯುತ್ತಿದ್ದು ಹೆಬ್ಬಳೆ ಮುಟ್ಟಳ್ಳಿ ಮುಂಡಳ್ಳಿ ಜಾಲಿ ಹೀಗೆ ಅನೇಕ ಕಡೆಗಳಲ್ಲಿ ರಾತ್ರಿ ಮನೆಗಳಿ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿದ್ದು ರಾತ್ರಿ ಪೂರ್ತಿ ಕೆಲವು ಕಡೆಗಳಲ್ಲಿ ಸಾರ್ವಜನಿಕರು ನಿದ್ರೆಯನ್ನೆ ಹಾಕದ ಪರಿಸ್ಥಿತಿಯನ್ನು ಎದುರಿಸಿದ್ದರು ಕೆಲವು ಕಡೆಗಳಿ ಮನೆಗಳ ಮೇಲೆ ಮರ ಉರುಳಿ ಲಕ್ಷಾಂತರ ನಷ್ಟ ಸಂಬವಿಸಿದರೆ ಇನ್ನು ಕೆಲವು ಕಡೆಗಳಲ್ಲಿ ರಸ್ತೆಗಳು ಕೊಚ್ಚಿಹೊಗಿದ್ದು ಶಾಲೆಗಳಿಗೂ ನೀರು ನುಗ್ಗಿದ್ದು ಶಾಲಾ ಕಂಪಾಂಡ್ಗಳು ಧರಾಶಾಯಿ ಆಗಿರುವ ಪ್ರಸಂಗ ಎದುರಾಗಿದೆ ಇಷ್ಟು ಅನಾಹುತಗಳು ಸಂಬವಿಸಿದರು ಕೂಡ ಇನ್ನು ಕೂಡ ಮಳೆ ನಿಲ್ಲುವ ಲಕ್ಷಗಳು ಕಂಡು ಬರುತ್ತಿಲ್ಲಾ ಮುಂಜಾಗ್ರತಾ ಕ್ರಮದ ಹಿನ್ನೆಲೆಯಲ್ಲಿ ಜಿಲ್ಲಾಢಳಿತ ಶಾಲಾ ಕಾಲೆಜುಗಳಿಗೆ ರಜೇಯನ್ನು ಘೋಷಣೆ ಮಾಡಿದೆ

ಮುಖ್ಯವಾಗಿ ಮುಟ್ಟಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಗುಡ್ಡ ಕುಸಿದ ಹಿನ್ನೆಲೆಯಲ್ಲಿ ಮನೆಗಳು ಸಂಪೂರ್ಣ ನೆಲಸಮವಾಗಿ ಮನೆಯಲ್ಲಿದ್ದ ನಾಲ್ವರು ಸಾವನ್ನಪ್ಪಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಭಾರೀ ಮಳೆಯಿಂದ ಭಟ್ಕಳದ ಅನೇಕ ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿದ್ದು. ಎನ್.ಡಿ.ಆರ್.ಎಫ್ ತಂಡ ಆಗಮಿಸಿದೆ.

ನಿನ್ನೆಯಿಂದ ಸುರಿದ ಬಾರಿ ಮಳೆಯ ಕಾರಣ ಉಂಟಾದ ನಷ್ಟಗಳ ಪ್ರಮಾಣ ಇನ್ನಷ್ಟೆ ತಿಳಿದು ಬರಬೇಕಾಗಿದೆ

WhatsApp
Facebook
Telegram
error: Content is protected !!
Scroll to Top