ಖ್ಯಾತ ಪತ್ರಕರ್ತ ದಿನೇಶ ಅಮಿನ್ ಮಟ್ಟು ರವರಿಗೆ ಹರ್ಮನ್ ಮೊಂಗ್ಲಿಂಗ್ ಪ್ರಶಸ್ತಿ.

ಇಂದು ಮಾಧ್ಯಮಗಳು ಉದ್ಯಮವಾಗುವ ಪ್ರಕ್ರಿಯೆಯನ್ನು ನಾವು ಮೂಕರಾಗಿ ನೋಡುತ್ತಿದ್ದೇವೆ:ದಿನೇಶ ಅಮಿನ್ ಮಟ್ಟು

ಸಿದ್ದಾಪುರ:ತಾಲೂಕಿನ ಪಟ್ಟಣದ ಬಾಲಭವನದಲ್ಲಿ  ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ನ ಜಿಲ್ಲಾ ಘಟಕದಿಂದ ಮಾಧ್ಯಮ ದಿನಾಚರಣೆ ಆಚರಿಸಿ ಖ್ಯಾತ ಪತ್ರಕರ್ತ ದಿನೇಶ ಅಮಿನ್ ಮಟ್ಟು ಅವರಿಗೆ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ನ ಜಿಲ್ಲಾ ಘಟಕ ನೀಡುವ ರಾಜ್ಯ ಮಟ್ಟದ ಹರ್ಮನ್ ಮೊಂಗ್ಲಿಂಗ್ ಪ್ರಶಸ್ತಿ ಪ್ರಧಾನ ಮಾಡಲಾಯಿತು

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅಮಿನ್ ಮಟ್ಟು ರವರು
ಪತ್ರಿಕೆಗಳಿಗೆ ಸುದ್ದಿಗಿಂತ ಜಾಹಿರಾತು ಮುಖ್ಯವಾದಾಗ ಪತ್ರಿಕೆಗಳ ಅಂತ್ಯ ಪ್ರಾರಂಭವಾಗುತ್ತದೆ. ಮುಂದೆಯೂ ಸಣ್ಣ ಬಂಡವಾಳದ ಸಣ್ಣ ಪತ್ರಿಕೆಗಳು ಮಾತ್ರ ಜೀವಂತವಾಗಿ ಉಳಿಯುತ್ತವೆ.
ಮಾಧ್ಯಮ ಎಂದರೆ ಸತ್ಯವನ್ನು ಹೇಳುವುದು.
ಪತ್ರಿಕೆಗಳಲ್ಲಿ ದುಡ್ಡದು ಸಣ್ಣದು ಎಂಬುದಿಲ್ಲಾ. ಅವು ಏನನ್ನು ಹೇಳುತ್ತವೆ ಎನ್ನುವುದು ಮಾತ್ರ ಮುಖ್ಯವಾಗಿರುತ್ತದೆ. ಸುದ್ದಿ ಓದಿದಾಗ ಓದುಗರಿಗೆ ಸಂಶಯ ಹುಟ್ಟಿದರೆ ಅದು ಪತ್ರಿಕೆ ಯಾಗಲ್ಲ. ಮಾಧ್ಯಮಕ್ಕೆ ಸಾಮಾಜಿಕ ಕಳಕಳಿ ಇರಬೇಕು ಎಂದರು.
ಇಂದು ಮಾಧ್ಯಮಗಳು ಉದ್ಯಮವಾಗುವ ಪ್ರಕ್ರಿಯೆಯನ್ನು ನಾವು ಮೂಕರಾಗಿ ನೋಡುತ್ತಿದ್ದೇವೆ. ಉತ್ಪಾದನೆ ವೆಚ್ಚಕ್ಕಿಂತ ಕಡಿಮೆ ಮೊತ್ತಕ್ಕೆ ಮಾರಾಟವಾಗುವ ವಸ್ತು ಎಂದರೆ ಅದು ಪ್ರತಿಕೆ ಮಾತ್ರ. ಎರಡು ಸಾವಿರ ವರ್ಷಗಳ ಇತಿಹಾಸ ಇರುವ ಕನ್ನಡದಲ್ಲಿ ಪತ್ರಿಕೆ ಮಾಡಲಾಗಲಿಲ್ಲ. ಜರ್ಮನಿಯಿಂದ ಹರ್ಮಿನ್ ಮೊಗ್ಲಿಂಗ್ ಬರಬೇಕಾಯ್ತ ಎಂದರು.
ಅಂಕಣಕಾರ ಡಿ ರಾಮಪ್ಪ ರವರು ಕಾರ್ಯಕ್ರಮ ಉದ್ಘಾಟಿಸಿದರು.
ಕೆ. ಜೆ. ಯು ರಾಜ್ಯಾಧ್ಯಕ್ಷ ಬಿ.ನಾರಾಯಣ ಅಧ್ಯಕ್ಷತೆ ವಹಿಸಿದ್ದರು.
ಕೆಜೆಯುನ ಜಿಲ್ಲಾಧ್ಯಕ್ಷ ಮನಮೋಹನ ನಾಯ್ಕ,   ಕೆಜೆಯುನ ಗೌರವಾಧ್ಯಕ್ಷ ಕನ್ನೇಶ ಕೋಲಸಿರ್ಸಿ,  ನಾಗರಾಜ ಮದ್ಗುಣಿ, ನಾಗರಾಜ ನಾಯ್ಕ, ಡಾ. ಮಹೇಂದ್ರ ಕುಮಾರ, ಹೇಮಂತ ರಾಮಡಗಿ,  ಶಂಕರ ಸಿ ಎ ಇದ್ದರು.

ವರದಿ ಸುರೇಶ ಕಡ್ಕೇರಿ ಸಿದ್ದಾಪುರ

WhatsApp
Facebook
Telegram
error: Content is protected !!
Scroll to Top