Tuesday, August 9, 2022
Homeಭಟ್ಕಳಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯ ಪಡೆ ಅಧ್ಯಕ್ಷರಾಗಿ ಪ್ರಥಮ ಬಾರಿಗೆ ಭಟ್ಕಳಕ್ಕೆ ಆಗಮಿಸಿದ ಶ್ರೀ ಗೊವಿಂದ...

ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯ ಪಡೆ ಅಧ್ಯಕ್ಷರಾಗಿ ಪ್ರಥಮ ಬಾರಿಗೆ ಭಟ್ಕಳಕ್ಕೆ ಆಗಮಿಸಿದ ಶ್ರೀ ಗೊವಿಂದ ನಾಯ್ಕರಿಗೆ ಭಟ್ಕಳದ ಹಿಂದೂ ಕಾರ್ಯಕರ್ತರಿಂದ ಭವ್ಯ ಸ್ವಾಗತ

ಭಟ್ಕಳ : ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷರಾಗಿ ಆಧಿಕಾರ ಸ್ವೀಕರದ ನಂತರ ಮೊದಲ ಬಾರಿ ಭಟ್ಕಳಕ್ಕೆ ಗೊರಟೆ ಮಾರ್ಗವಾಗಿ ಆಗಮಿಸುವವಾಗ ಗೋವಿಂದ ನಾಯ್ಕ ಅವ್ರಿಗೆ ಭಟ್ಕಳದ ಹಿಂದೂ ಕಾರ್ಯಕರ್ತರು ಬೈಕ್‌ ರ್ಯಾಲಿ ಮೂಲಕ ಅಧ್ದೂರಿ ಸ್ವಾಗತವನ್ನುಕೋರಿದರು. ಸರ್ಪನಕಟ್ಟೆ, ಪುರವರ್ಗ ಮೂಡಭಟ್ಕಳ ಬೈಪಾಸ ನಲ್ಲಿ ಬಿಜೆಪಿ ಸಹಿತ ಹಿಂದೂ ಮುಖಂಡರು ಪುಷ್ಪ ಗುಚ್ಚ ಮತ್ತು ಹೂವಿನ ಹಾರಗಳನ್ನು ಹಾಕಿ ಅಭಿನಂದಿಸಿದರು.

ಮಾರುತಿ ನಗರದಲ್ಲಿರುವ ಭಟ್ಕಳದ ಬಿಜೆಪಿ ಕಾರ್ಯಾಲಯಕ್ಕೆ ತೆರಳಿ ಪುಪ್ಷ ನಮನವನ್ನು ಸಲ್ಲಿಸಿ ಸನ್ಮಾನವನ್ನು ಸ್ವೀಕರಿಸಿ ಭಟ್ಕಳದ ಸರ್ಕಲ್‌ ಗೆ ಆಗಮಿಸಿದಾಗ ಕಾರ್ಯಕರ್ತರು ಫಟಾಕಿ ಸಿಡಿಸಿ, ಹೆಗಲ ಮೇಲೆ ಕೂರಿಸಿಕೊಂಡು ಮೆರವಣಿಗೆ ಮಾಡಿದರು ,ಭಟ್ಕಳ ಸರ್ಕಲ್‌ ನಲ್ಲಿ ಸಾರ್ವಜನಿಕವಾಗಿ ಮೈಸೂರು ಪೇಟ ಶಾಲು ಹೂವಿನ ಹಾರಗಳನ್ನು ಹಾಕಿ ಕಾರ್ಯಕರ್ತರು ಸನ್ಮಾನಿಸಿ ಸಂಭ್ರಮಿಸಿದರು.

ಭಟ್ಕಳದ ಬಿಜೆಪಿ ಕಾರ್ಯಕರ್ತರು ಗೊವಿಂದ ನಾಯ್ಕ ಅವರನ್ನು ಯಾವುದೆ ಶಾಸಕರಿಗೂ ಕಮ್ಮಿ ಇಲ್ಲದಂತೆ ಬರ್ಜರಿಯಾಗಿ ಮೆರವಣಿಗೆಯ ಮೂಲಕ ಸ್ವಾಗತ ಮಾಡಿಕೊಂಡಿರು ಇದು ಉತ್ತರ ಕನ್ನಡದಲ್ಲಿ ಹಿಂದೂ ನಾಯಕ ಗೊವಿಂದ ನಾಯ್ಕ ಅವರ ಜನಪ್ರೀಯತೆಯನ್ನು ಎತ್ತಿ ತೋರಿಸುತ್ತದೆ

ಈ ಸಂಧರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಗೋವಿಂದ ನಾಯ್ಕ ಕಾರ್ಯಕರ್ತ ಹಾಗೂ ಬಿಜೆಪಿಯ ಹಿರಿಯ ನಾಯಕರ ಹಿತಾಷಿರ್ವಾದದಿಂದಾಗಿ ಸ್ಥಾನವನ್ನು ಅಲಂಕರಿಸದ್ದೇನೆ. ಮುಂದಿನ ದಿನಗಳಲ್ಲಿ ಭಟ್ಕಳದಲ್ಲಿ ಬಿಜೆಪಿಯನ್ನು ಇನ್ನಷ್ಟು ಬಲ ಪಡಿಸುವುದರ ಜೊತೆಗೆ ಶಾಶ್ವತವಾಗಿ ಹಿಂದೂತ್ವ ನೆಲೆಗೊಳ್ಳವಂತೆ ಮಾಡುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಶ್ರೀಕಾಂತ್ ನಾಯ್ಕ, ಉದಯ ನಾಯ್ಕ, ಬಿಜೆಪಿ ತಾಲೂಕ ಅಧ್ಯಕ್ಷ ಸುಬ್ರಾಯ ದೇವಡಿಗ, ಹಿಂದೂ ಮುಖಂಡ ರಾಘು ನಾಯ್ಕ ಮುಟ್ಟಳ್ಳಿ, ಪಾಂಡು ನಾಯ್ಕ ಅಸರಕೇರಿ,ಬಿಜೆಪಿ ಮುಖಂಡ ಮುಕುಂದ ನಾಯ್ಕ ಶಾರದಹೊಳೆ, ಮುಂತಾದವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!