ಮಾರಿಕಾಂಬೆಯ ದರ್ಶನ ಪಡೆದ ಮಾಜಿ ಶಾಸಕ ಮಂಕಾಳ ವೈದ್ಯ

ದೇವಿಯ ದರ್ಶನ ಪಡೆದು ಸೇವೆ ಸಲ್ಲಿಸಿದ ಹತ್ತು ಸಾವಿರಕ್ಕಿಂತಲೂ ಹೆಚ್ಚಿನ ಭಕ್ತರು

ಭಟ್ಕಳ :  ಮಾರಿ ಜಾತ್ರೆಯ  ಇಂದು ಬೆಳಿಗ್ಗೆ 6 ಗಂಟೆಯಿಂದಲೇ ಸಾರ್ವಜನಿಕರ ದರ್ಶನ ಮತ್ತು ಸೇವೆಗೆ ಅವಕಾಶವನ್ನು ಆಡಳಿತ ಮಂಡಳಿ  ಕಲ್ಪಿಸಿ ಕೊಟ್ಟಿತ್ತು.  ಶ್ರೀ ದೇವಿಗೆ ಭಕ್ತರು ಉಡಿ ಮತ್ತು  ಆರತಿ ಸೇವೆಗಳನ್ನು ಸಮರ್ಪಿಸಿದರು. ಈ ಸಂದರ್ಬದಲ್ಲಿ ಮಾಜಿ ಶಾಸಕ ಮಂಕಾಳ ವೈದ್ಯರು ಶ್ರೀ ದೇವಿಯ ದರ್ಶನ ಪಡೆದು ಮಾರಿಕಾಂಭೆಯ ಕ್ರಪೇಗೆ ಪಾತ್ರರಾದರು

ಮೊದಲ ದಿನ ಭಟ್ಕಳ ಗ್ರಾಮೀಣ ಪ್ರದೇಶಗಳ ಭಕ್ತರು ಆಗಮಿಸಿ ಸೇವೆ ಸಮರ್ಪಿಸಿ ಕೃತಾರ್ಥರಾರು, ಗ್ರಾಮಿಣ ಪ್ರದೇಶಗಳಾದ ಶಿರಾಲಿ ಮುರುಡೇಶ್ವರ ಸೇರಿದಂತೆ  ಈತರೆ ಭಾಗಗಳಿಂದ ಆಗಮಿಸಿ ಸೇವೆ ಸಲ್ಲಿಸಿ ಹಬ್ಬವನ್ನು ಆಚರಿಸಿದರು

ಎರಡನೆಯ ದಿನವಾದ ಇಂದು   ಹೆಚ್ಚಿನ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು ಹಣ್ಣು  ಕಾಯಿ  ಸಮರ್ಪಣೆ ಸೇರಿದಂತೆ   ಇತರೇ  ಸೇವೆಗಳನ್ನು ಸಲ್ಲಿಸಲು ಯಾವದೇ ರೀತಿ ತೊಂದರೆ ಯಾಗದಂತೆ ಆಡಳಿತ ಮಂಡಳಿ ಶಿಸ್ತು ಬದ್ಧವಾದ ಕ್ರಮ ಕೈಗೊಂಡಿತ್ತು.   . 

ಇಂದು ಮಾಜಿ ಶಾಸಕ ಮಂಕಾಳ ವೈದ್ಯರು ಶ್ರಿದೇವಿಯ ದರ್ಶನವನ್ನು ಪಡೆದು ಶ್ರಿ ದೇವಿಯ ಕ್ರಪೆಗೆ ಪಾತ್ರರಾದರು

ಈ ಸಂದರ್ಬದಲ್ಲಿ ಅವರು ಮಾಧ್ಯಮದೊಂದಿಗೆ ಮಾತನಾಡಿ ಭಟ್ಕಳದಲ್ಲಿ ಶಕ್ತಿ ದೇವತೆ ಮಾರಿಕಾಂಬೇ ಜಾತ್ರೆ ಪ್ರತಿ ವರ್ಷ ನಡೆಯುತ್ತಿದ್ದು ಭಕ್ತ ಜನರಿಗೆ ಆ ಕರುಣಾಮಯು ದೇವಿ ಮಾರಿಕಾಂಬೆ ಯಾವಾಗಲು ಒಳ್ಳೆಯದನ್ನೆ ಮಾಡಲಿ ಎಂದು ಹೇಳಿದರು

ಆಡಳಿತ ಮಂಡಳಿಯ ಅಧ್ಯಕ್ಷರಾಧ  ಪರಮೇಶ್ವರ ನಾಯ್ಕ , ಕಾರ್ಯದರ್ಶಿ ಶ್ರೀಧರ ನಾಯ್ಕ ಸದಸ್ಯರಾದ ಶ್ರೀಪಾದ ಕಂಚುಗಾರ, ಕೃಷ್ಣ  ಆರ್‌ ಮಹಾಲೆ, ವಾಮನ್‌  ಶಿರಸಾಟ, ಸುರೇಶ ಆಚಾರ್ಯ, ಸುರೇಂದ್ರ ಬಟ್ಕಳಕರ ಸೇರಿದಂತೆ   ಹಿಂದೂ ಸಮಾಜದ ನಾಯಕರು ಉಪಸ್ಥಿತರಿದ್ದ್ರರು

WhatsApp
Facebook
Telegram
error: Content is protected !!
Scroll to Top