ಭಟ್ಕಳ ತಾಲೂಕಿನಲ್ಲಿ ಐತಿಹಾಸಿಕ ಮಾರಿಜಾತ್ರೆ ಶುಭಾರಂಭ

ಬೆಳಗಿನ ಜಾವದಲ್ಲಿ ಮಾರಿ ಗದ್ದುಗೆಯ ಮೇಲೆ ವಿರಾಜಮಾನಳಾದ ಮಾರಿಕಾಂಬೆ ದೇವಿ

ಭಟ್ಕಳ : ಆಷಾಢ ಮಾಸದ ಅಮಾವಾಸ್ಯೆಯ ಮೊದಲು ಬರುವ ಬುಧವಾರ ಹಾಗೂ ಗುರುವಾರ ಜರಗುವ ಮಾರಿ ಜಾತ್ರೆ ಇಂದು ಪ್ರಾರಂಭಗೊಂಡಂತಾಗಿದೆ. ಮಾರಿಕಾಂಬಾ ದೇವಿಯ ಜಾತ್ರಾ ಮೂರ್ತಿಯನ್ನು ಮಣ್ಕುಳಿಯಲ್ಲಿರುವ ಆಚಾರ್ಯರ ಮನೆಯ ಗದ್ದಿಗೆಯಿಂದ ಆಡಳಿತ ಮಂಡಳಿ ಒಪ್ಪಿಸಿಕೊಂಡು ವಾದ್ಯ ವೃಂದದೊಂದಿಗೆ ರಘುನಾಥ ರೋಡ್‌ ಬಸ್ತಿ ರೋಡ್ ಮುಖಾಂತರ ರಥಬೀದಿಯಿಂದ ತಲೆಯ ಮೇಲೆ ಹೊತ್ತು ತಂದು ಭಕ್ತರು ದೇವಾಲಯದಲ್ಲಿ ತಂದು ಪ್ರತಿಷ್ಠಾಪಿಸಿದ್ದಾರೆ.

ಈ ಮಾರಿ ಜಾತ್ರೆಯ ವಿಶೇಷವೆನೆಂದರೆ ದೇವಸ್ದಾನದಲ್ಲಿ ಪ್ರತಿಷ್ಠಾಪನೆಯಾದ ನಂತರ ಮೊದಲ ಪೂಜೆ ಜೈನ್‌ ಸಮುದಾಯದ ಬಸ್ತಿ ಶೆಟ್ರ ಮನೆತನದಿಂದ ಪೂಜೆಗೊಂಡ ನಂತರ ಸಾರ್ವಜನಿಕರ ಸೇವೆಗೆ ಮತ್ತು ಪೂಜೆಗೆ ಅವಕಾಶ ಮಾಡಿಕೊಡಲಾಗುತ್ತದೆ ಈ ಸಂಭಂದ ಬಸ್ತಿ ಶೆಟ್ರ ಮನೆಯ ಉದಯ ಜೈನ್‌ ಪೂಜೆಯನ್ನು ಸಮರ್ಪಣೆ ಮಾಡಿದರು ನಂತರ ಬಂದಂತ ಭಕ್ತಾದಿಗಳಿಗೆ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಯಿತು.

ಪ್ರಥಮ ದಿನ ದಿನವಾದ ಬುಧವಾರದಂದು ಗ್ರಾಮಂತರ ಪ್ರದೇಶಗಳ ಜನರು ಹಬ್ಬವನ್ನು ಆಚರಿಸಿದರೆ ಗುರುವಾರ ಉರಿನ ಜನ ಹಬ್ಬವನ್ನು ಆಚರಿಸುವ ಸಂಪ್ರದಾಯ ಮೂದಲಿನಿಂದಲೂ ನಡೆದು ಬಂದಿದೆ.

ಈ ಸಂಧರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾಧ ಪರಮೇಶ್ವರ ನಾಯ್ಕ ,ಕಾರ್ಯದರ್ಶಿ ಶ್ರೀಧರ ನಾಯ್ಕ, ಆಡಳಿತ ಮಂಡಳಿ ಸದಸ್ಯರಾದ ಸುರೇಂದ್ರ ಭಟ್ಕಳಕರ , ವಾಮನ ಶಿರಸಾಟ ಶಂಕರ ಶೆಟ್ಟಿ, ಸುರೇಶ ಆಚಾರ್ಯ ಗೆಳೆಯರ ಬಳಗದ ವಿನಾಯಕ ಬಸ್ರೂರ , ಉದಯ ಬಸ್ರೂರ, ಮನೋಹರ ನಾಯ್ಕ ಪಶ್ಚೀಮ ಘಟ್ಟ ಕಾರ್ಯಪಡೆ ಅಧ್ಯಕ್ಷರಾಗಿ ನಿಯೋಜನೆ ಗೊಂಡ ಗೊವಿಂದ ನಾಯ್ಕ ಹನುಮಾನನಗರ , ಈರಾ ನಾಯ್ಕ ವಿ ಹೆಚ್ ಪಿ ಯ ಮುಖಂಡ ರಾಮಣ್ಣ ಬಳೆಗಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top