ಭಟ್ಕಳದಲ್ಲಿ ಮತ್ತೆ ಅಪರಿಚಿತ ಶವ ಪತ್ತೆ

ಶವದ ಗುರುತು ಪತ್ತೆಗಾಗಿ ಪೊಲಿಸ್ ಇಲಾಖೆಯಿಂದ ತನಿಖೆ

ಭಟ್ಕಳ :ತಾಲೂಕಿನ ಜಾಲಿ ಪಟ್ಟಣ ಪಂಚಾಯತ ವ್ಯಾಪ್ತಿಯ ಕಾರಗದ್ದೆ ಹುರುಳಿ ಸಾಲ್ ಗೊಂಡರ ಕೇರಿಯ ನಿರ್ಜನ ಪ್ರದೇಶದಲ್ಲಿ ಅಪರಿಚಿತ ಶವವೊಂದು ಅಸ್ಥಿ ಪಂಜರದ ರೂಪದಲ್ಲಿ ಪತ್ತೆಯಾಗಿದೆ.

ಮೃತ ವ್ಯಕ್ತಿ ಸುಮಾರು 40 ರಿಂದ 50 ವರ್ಷದ ಆಸುಪಾಸಿನ ವ್ಯಕ್ತಿಯಾಗಿರುವುದಾಗಿ ಅಂದಾಜಿಸಲಾಗಿದೆ. ಕಳೆದ ಒಂದು ತಿಂಗಳ ಹಿಂದೆ ಸಾವನ್ನಪ್ಪಿರ ಬಹುದಾಗಿ ಅಂದಾಜಿಸಲಾಗಿದ್ದು. ವಶ ಕೊಳೆತು ಅಸ್ಥಿ ಪಂಜರ ರೂಪದಲ್ಲಿ ಪತ್ತೆಯಾಗಿದೆ. ಶವ ಪತ್ತೆಯಾದ ಸ್ಥಳ ಸರ್ಕಾರಿ ಹಾಡಿ ಜಾಗವಾಗಿದೆ. ಈ ಶವ ಯಾರದು ಇದು ಸಹಜ ಸಾವೋ ಕೊಲೆಯೋ ಮುಖ್ಯವಾಗಿ ಮೃತ ವ್ಯಕ್ತಿ ಯಾರು ಎಂಬುವು ಇನ್ನಷ್ಟೆ ತಿಳಿದು ಬರಬೇಕಾಗಿದೆ

ಶವ ದೋರೆತ ಸ್ಥಳ ಮೊದಲಿಂದ ಕೆಲವು ಜೂಜುಕೊರರು ಈ ಸ್ಥಳವನ್ನು  ಇಸ್ಪಿಟ್ ಜೂಜು ಅಡ್ಡೆಯನ್ನಾಗಿಸಿದ್ದರು ಎಂಬುದು ತಿಳಿದು ಬಂದಿದೆ ಅಲ್ಲದೆ ಶವದ ಅವಶೇಷ ದೊರತ ಅನತಿ ದೂರದಲ್ಲಿ ಇಸ್ಪೀಟ್ ಎಲೆಗಳು ಬಿಸ್ಲೆರಿ ಬಾಟಲ್ ಕಂಡು ಬಂದಿದೆ ಶವದೊರೆತ ಸ್ಥಿತಿ  ಪ್ರದೇಶ ಇಸ್ಪೀಟ್ ಎಲೆಗಳು ಇದನ್ನೆಲ್ಲಾ ಅವಲೋಕಿಸಿದರೆ  ಇದು ಒಂದು ಕೊಲೆಯಾಗಿರಬಹುದೆ ಕೊಲೆಯಾದರು  ಆ ವ್ಯಕ್ತಿ ಯಾರು  ಅಲ್ಲದೆ ಶವದ ಅವಶೇಷದ ಮೇಲೆ ಟಿ ಶರ್ಟ ಕೇರಳ ಶೈಲಿಯ ಪಂಚೆ ಇರುವುದು ನೊಡಿದರೆ ಇದು ಸ್ಥಳಿಯ ವ್ಯಕ್ತಿಯ ಶವವಲ್ಲ ಎಂಬುವುದು ಮೆಲ್ನೊಟಕ್ಕೆ ಕಂಡು ಬರುತ್ತಿದೆ ಇದು ಒಂದು ಸಾಮಾನ್ಯ ಸಾವೋ ಅಥವಾ ಕೊಲೆಯೋ ಒಂದು ವೇಳೆ ಕೊಲೆಯಾದರು ಯಾಕಾಗಿ ಕೊಲೆಯಾಯಿತು ಎಂಬುವುದು ಪೋಲಿಸ್ ಇಲಾಖೆಯ ತನಿಖೆಯಿಂದಷ್ಟೆ ತಿಳಿದು ಬರಬೇಕಾಗಿದೆ

ಸ್ಥಳಕ್ಕೆ ಗ್ರಾಮೀಣ ಠಾಣೆಯ ಸಿಪಿಐ ಮಹಾಬಲೇಶ್ವರ ನಾಯ್ಕ, ಪಿ.ಎಸ್.ಐ ಭರತ್, ಹಾಗೂ ಸಿಬ್ಬಂದಿಗಳಾದ ದೀಪಕ್,ಚಂದ್ರಕಾಂತ ಕುಂಬಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶವದ ಮಹಜರು ಸಂದರ್ಬದಲ್ಲಿ ಸಮಾಜ ಸೇವಕರಾದ ಮಂಜು ನಾಯ್ಕ ಮುಟ್ಟಳ್ಳಿ ಸ್ಥಳದಲ್ಲಿ ಕೊಳೆತ ಸ್ಥಿತಿಯಲ್ಲಿದ್ದ  ಮೃತ ದೇಹ ಶೇಷವನ್ನು ಒಟ್ಟುಗೂಡಿಸಿ ಅಂತ್ಯಕ್ರಿಯೆ ಮಾಡಲು ಪೊಲೀಸರಿಗೆ ಸಹಕರಿಸಿದ್ದಾರೆ

WhatsApp
Facebook
Telegram
error: Content is protected !!
Scroll to Top