ನೆರೆಪೀಡಿತ ಪ್ರದೇಶದ ಕುಟುಂಬಗಳಿಗೆ ಶಾಶ್ವತ ಪರಿಹಾರ ಒದಗಿಸುವಂತೆ ಗ್ರಾ.ಪಂ. ಸದಸ್ಯ ಎಚ್.ಆರ್ ಗಣೇಶ ನೇತ್ರತ್ವದಲ್ಲಿ ತಹಶೀಲ್ದಾರರಿಗೆ ಮನವಿ

ಹೊನ್ನಾವರ: ತಾಲೂಕಿನ ಹೊಸಾಕುಳಿ ಗ್ರಾ.ಪಂ ವ್ಯಾಪ್ತಿಯ ನೆರೆಪೀಡಿತ ಪ್ರದೇಶದ ಕುಟುಂಬಗಳಿಗೆ ಶಾಶ್ವತ ಪರಿಹಾರ ಒದಗಿಸುವಂತೆ ಗ್ರಾ.ಪಂ. ಸದಸ್ಯ ಎಚ್.ಆರ್ ಗಣೇಶ ನೇತ್ರತ್ವದಲ್ಲಿ ಹೊಸಾಕುಳಿ ಗ್ರಾ.ಪಂ. ಮುಂಭಾಗದಲ್ಲಿ ತಹಶೀಲ್ದಾರರಿಗೆ ಮಂಗಳವಾರ ಮನವಿ ಸಲ್ಲಿಸಿದರು.


ಗ್ರಾ.ಪಂ. ಆಯ್ಕೆಯಾದ ಜನಪ್ರತಿನಿಧಿಗಳ ಮೂಲಕ ಗ್ರಾಮದ ನೆರೆ ಪೀಡಿತ ಪ್ರದೇಶದವರು ಶಾಶ್ವತ ಸ್ಥಳಕ್ಕೆ ಒತ್ತಾಯಿಸಿದರು. ಗ್ರಾಮದ ಶಶಿಹಿತ್ಲ, ದೊಡ್ಡಹಿತ್ಲ, ಗೊಳಿಬೈಲು, ಭಾಸ್ಕೇರಿ. ಗಜನಕೇರಿ, ಮಡಿವಾಳಕೇರಿ, ಹೆಬ್ಬಾರ್ತಕೇರಿಯ ೧೧೪ ಕುಟುಂಬಗಳು ಕಳೆದ ೨೦ ವರ್ಷಗಳಿಂದಲೂ ನಿರಂತರವಾಗಿ ಭಾಸ್ಕೇರಿ ಹೊಳೆಯಿಂದ ನೆರೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಮಳೆಗಾಲದಲ್ಲಿ ಪ್ರವಾಹದಿಂದ ಜನರು ಹಾಗೂ ಜಾನುವಾರು ಸಂಕಷ್ಟ ಅನುಭವಿಸುವ ಜೊತೆ ಬೆಳೆ ಹಾನಿಯು ಸಂಭವಿಸುತ್ತಿದೆ. ಪ್ರತಿ ಬಾರಿಯೂ ಸರ್ಕಾರ ನೆರೆಬಂದಾಗ ಕಾಳಜಿ ಕೇಂದ್ರ ಹಾಗೂ ಒಂದಿಷ್ಟು ಪರಿಹಾರ ನೀಡುವ ಬದಲು ಇದಕ್ಕೆ ಶಾಶ್ವತವಾಗಿ ಗ್ರಾಮದ ೧೬೯ಅ/೧ ಸರ್ಕಾರಿ ಖರಾಬು ೫೪-೦೭ ಜಾಗವಿದ್ದು, ಇದರಲ್ಲಿ ೧೦ ಎಕರೆಯಷ್ಟು ಜಾಗ ಫಾರೆಸ್ಟ ಖಾತೆಯಿಂದ ರೆವಿನ್ಯೂ ಖಾತೆಗೆ ಬಂದಿದೆ. ನೆರೆ ಬಾದಿತ ಪ್ರದೇಶದ ೧೧೪ ಕುಟುಂಬಗಳಿಗೆ ತಲಾ ೨ ಗುಂಟೆಯಂತೆ ಈ ಸ್ಥಳವನ್ನು ಮಂಜೂರು ಮಾಡಿ ಸರ್ಕಾರದ ಮನೆ ನಿರ್ಮಾಣ ಮಾಡಿದಲ್ಲಿ ಈ ಸಮಸ್ಯೆಗೆ ಶಾಸ್ವತ ಪರಿಹಾರ ಸಿಗಲಿದೆ. ೧೧೪ ಕುಟುಂಬದಲ್ಲಿ ೪೬೨ ಜನಸಂಖ್ಯೆ ಇದ್ದು, ಇವರೆಲ್ಲರಿಗೂ ಮಳೆಗಾಲದ ನೆರೆ ಸಮಸ್ಯೆಯಿಂದ ಮುಕ್ತಿ ದೊರೆಯಲಿದೆ ಆ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಶಾಸಕರು, ಸಚೀವರು ಮುಂದಾಗಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು, ಗ್ರಾ.ಪಂ. ಪ್ರತಿನಿಧಿಗಳ ಮೂಲಕ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ತಹಶೀಲ್ದಾರ ಪರವಾಗಿ ಗ್ರಾಮಲೆಕ್ಕಾಧಿಕಾರಿ ವಿನಯ ಪಂಡಿತ್ ಮನವಿ ಸ್ವೀಕರಿಸಿದರು.
ಗ್ರಾಮಸ್ಥ ಚಿದಂಬರ ನಾಯ್ಕ ಇವರು ಮಾತನಾಡಿ ಕಳೆದ ಹಲವು ವರ್ಷದಿಂದ ಈ ಸಮಸ್ಯೆ ಅನುಭವಿಸುತ್ತಿದ್ದೇವೆ. ೧೫ ದಿನದ ಹಿಂದೆ ನಾವೆಲ್ಲರು ಕಾಳಜಿ ಕೇಂದ್ರದಲ್ಲಿ ಇದ್ದಾಗ ಸ್ಥಳಕ್ಕೆ ಆಗಮಿಸಿದ ಶಾಸಕ ದಿನಕರ ಶೆಟ್ಟಿ ಹಾಗೂ ಜಿಲ್ಲಾಧಿಕಾರಿಗಳ ಬಳಿ ವಿಷಯ ತಿಳಿಸಿದಾಗ ಸಕಾರಾತ್ಮಕ ಸ್ಪಂದನೆ ದೊರೆತಿದ್ದು, ಇಂದು ಮನವಿ ನೀಡುವ ಮೂಲಕ ಸ್ಥಳದ ಮಾಹಿತಿ ಹಾಗೂ ಕುಟುಂಬದ ಮಾಹಿತಿ ತಿಳಿಸಲಾಗಿದೆ. ಅಧಿಕಾರಿಗಳು ಜನಪ್ರತಿನಿಧಿಗಳು ನಮ್ಮೂರಿನ ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವಂತೆ ಮನವಿ ಮಾಡಿದರು.
ಗ್ರಾ.ಪಂ. ಸದಸ್ಯ ಎಚ್.ಆರ್.ಗಣೇಶ ಮಾತನಾಡಿ ಗ್ರಾಮಸ್ಥರ ಹಕ್ಕೊತ್ತಾಯದಂತೆ ಪ್ರತಿನಿಧಿಗಳು ಅವರೊಂದಿಗೆ ಧ್ವನಿಯಾಗಿದ್ದು, ೮ ಮಜರೆಯ ೧೧೪ ಕುಟುಂಬಗಳಿಗೆ ನೆರೆ ಸಮಸ್ಯೆ ಇದ್ದು, ಅವರನ್ನು ಗ್ರಾಮದ ರೆವಿನ್ಯೂ ಜಾಗಕ್ಕೆ ಸ್ಥಳಾಂತರ ಮಾಡಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮುಂದಾಗಬೇಕು. ಸ್ಥಳಿಯ ಶಾಸಕರು ಹಾಗೂ ಸಚೀವರು ಮತ್ತು ಅಧಿಕಾರಿಗಳು ನಮ್ಮೂರಿನ ಸಮಸ್ಯೆಯನ್ನು ಖುದ್ದು ಆಲಿಸಿರುದರಿಂದ ಈ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ. ಸಂಭದಿಸಿದ ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಗ್ರಾಮಸ್ಥರ ಪರವಾಗಿ ಮನವಿ ತಲುಪಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಸುರೇಖಾ ನಾಯ್ಕ, ಉಪಾಧ್ಯಕ್ಷ ಕಿರಣ ಹೆಗಡೆ, ಸದಸ್ಯೆ ಮಾದೇವಿ ಮುಕ್ರಿ, ಕಮಲಾ ಮುಕ್ರಿ, ಪಿಡಿಓ ಬಾಲಕೃಷ್ಣ ನಾಯ್ಕ, ನೂರಾರು ಸಂಖ್ಯೆಯ ಸಾರ್ವಜನಿಕರು ಹಾಜರಿದ್ದರು.

WhatsApp
Facebook
Telegram
error: Content is protected !!
Scroll to Top