ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಕಟ್ಟಿಸಿಯೇ ಸಿದ್ದ : ಮಾಜಿ ಶಾಸಕ ಮಂಕಾಳ ವೈದ್ಯ

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿಶ್ಪೆಷಾಲಿಟಿ ಆಸ್ಪತ್ರೆಗಾಗಿ ಹೊನ್ನಾವರ ಆ್ಯಂಬುಲೆನ್ಸ ಅಪಘಾತದಲ್ಲಿ ಮೃತ ವ್ಯಕ್ತಿಗಳ ಕುಟುಂಬಸ್ತರಿಂದ ಮಂಕಾಳ ವೈದ್ಯರಲ್ಲಿ ಮನವಿ

ಹೊನ್ನಾವರ : ತಾಲೂಕಿನ ಶ್ರೀದೇವಿ ಆಸ್ಪತ್ರೆಯ ಆ್ಯಂಬುಲೆನ್ಸ ಅಪಘಾತವಾಗಿ ನಾಲ್ಕು ಅಮಾಯಕ ಜೀವ ಬಲಿಯಾಗಿದ್ದು ಮಾಜಿ ಶಾಸಕ ಮಂಕಾಳ ವೈದ್ಯರು ಮೃತರ ಕುಟುಂಬದ ದುಃಖದಲ್ಲಿ ಬಾಗಿಯಾಗಲು ಹೋದ ಸಂದರ್ಬದಲ್ಲಿ ಮೃತ ಲೊಕೇಶ ನಾಯ್ಕ ಸಹೋದರ ನಾಗೇಶ ನಾಯ್ಕ ಜಿಲ್ಲೆಗೆ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲದೆ ನನ್ನ ಸಹೋದರ ಮೃತ ಪಟ್ಟಿದ್ದಾನೆ ಕಾರಣ ಮುಂದೆ ನನ್ನ ಕುಟುಂಬಕ್ಕೆ ಆದ ಅನ್ಯಾಯ ಜಿಲ್ಲೆಯಲ್ಲಿ ಯಾರ ಕುಟುಂಬಕ್ಕೂ ಆಗಬಾರದು ಕಾರಣ ತಾವು ಮನಸ್ಸು ಮಾಡಿ ನಮ್ಮ ಜಿಲ್ಲೆಯಲ್ಲಿ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ನಿರ್ಮಿಸಿಕೊಡಿ ಎಂದು ಮೊರೆ ಇಟ್ಟರು ಇದಕ್ಕೆ ಸ್ಪಂದಿಸಿದ ಮಂಕಾಳ ವೈದ್ಯ ಸರಕಾರದ ಮೂಲಕ ಪ್ರಯತ್ನ ಮಾಡುತ್ತೆನೆ ಸರಕಾರ ಸ್ಪಂದಿಸದಿದ್ದಲ್ಲಿ ನನ್ನ ಸ್ವಂತ ಪ್ರಯತ್ನದಿಂದ ಜಿಲ್ಲೆಯಲ್ಲಿ ಮಲ್ಟಿ ಸ್ಪೇಷಾಲಿ ಆಸ್ಪತ್ರೆ ನಿರ್ಮಿಸುವ ಪ್ರಯತ್ನ ಮಾಡುತ್ತೆನೆ ಎಂಬ ಬರವಸೆಯನ್ನು ಕೊಟ್ಟು ನೊವುಂಡವರ ಕಣ್ಣೊರೆಸಿದರು.

ಜಿಲ್ಲೆಯಲ್ಲಿ ಮಲ್ಟಿ ಸ್ಪೇಷಾಲೀಟಿ ಆಸ್ಪತ್ರೆ ಇಲ್ಲದೆ ಜಿಲ್ಲೆಯ ಯಾವುದೆ ಮೂಲೆಯಲ್ಲಿ ಅಪಘಾತ ಸಂಬವಿಸಿದರು ಅಪಘಾತಕ್ಕೊಳಗಾದವರನ್ನು ಅಂಕೋಲಾ ಕುಮಟಾ ಹೊನ್ನಾವರ ಭಟ್ಕಳದ ಜನತೆ ದಕ್ಷಿಣ ಕನ್ನಡದಲ್ಲಿರುವ ಆಸ್ಪತ್ರೆಗೆ ಸಾಗಿಸಬೇಕಾಗುತ್ತದೆ ಅದೆ ಘಟ್ಟದ ಮೇಲಿರುವ ಸಿರಸಿ ಸಿದ್ದಾಪುರ ಯಲ್ಲಾಪುರದ ದಾಂಡೆಲಿ ಹಳಿಯಾಳ ಜನತೆ ಹುಬ್ಬಳ್ಳಿ ಧಾರವಾಡದ ಆಸ್ಪತ್ರೆಗೆ ಸಾಗಿಸಬೇಕಾಗುತ್ತದೆ ಹೀಗೆ ರೋಗಿಗಳನ್ನು ಸಾಗಿಸುವ ಸಂದರ್ಬದಲ್ಲಿ ರಕ್ತಸ್ರಾವವೊ ಹೃದಯ ಸ್ಥಂಬನವೊ ಅಥವಾ ದಾರಿಯಲ್ಲಿ ಮತ್ತೋಮ್ಮೆ ಅಪಘಾತ ಸಂಬವಿಸಿಯೋ ರೋಗಿಗಳು ನೂರರಲ್ಲಿ 80℅ ದಷ್ಟು ಸತ್ತೆ ಹೊಗುತ್ತರೆ ಬದುಕುಳಿದರೆ ರೋಗಿಗಳ ಹಾಗು ಅವರ ಮನೆಯವರ ಅದ್ರಷ್ಟ ಎದ್ದರೆ ತಪ್ಪಾಗಲಿಕ್ಕಿ.

ಈ ಬಗ್ಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊದಲಿಂದಲೂ ಅಭಿಯಾನಗಳು ನಡೆದುಕೊಂಡು ಬರುತ್ತಲೆ ಇದೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೂರು ಮೂರು ಮಂತ್ರಿಗಳು ಸಾಲು ಸಾಲು ಬಿಜೆಪಿ ಶಾಸಕರು ಒಬ್ಬರು ವಿಧಾಸಭಾ ಸ್ಪಿಕರ್ ಇದ್ದರು ಜಿಲ್ಲೆಯ ಜನತೆಯ ಅಭಿಯಾನ ಅಭಿಯಾನವಾಗಿ ಉಳಿಯಿತೆ ಹೊರತು ಯಾವುದೆ ಪ್ರಯೋಜನವಾಗಲಿಲ್ಲ ಬದಲಾಗಿ ಕೆಲವು ಜನ ಪ್ರತಿನಿದಿ ಎನ್ನಿಸಿಕೊಂಡವರ ಸಾರ್ವಜನಿಕರ ಆಸ್ಪತ್ರೆಯ ಬೇಡಿಕೆಯ ಅಭಿಯಾನವನ್ನು ನಾಚಿಕೆಯನ್ನು ಬಿಟ್ಟು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳ ಉಪಯೋಗಿಸಿಕೊಳ್ಳಲು ಮುಂದಾಗಿದ್ದು ಸುಳ್ಳಲ್ಲಾ ಪರಿಣಾಮ ಉತ್ತರ ಕನ್ನಡ ಜಿಲ್ಲೆಯ ಜನತೆ ತಮ್ಮ ಅಮೂಲ್ಯ ಜೀವವನ್ನು ಬಲಿಕೊಡುತ್ತಲೆ ಬರುತ್ತಿದ್ದಾರೆ ಉದಾಹರಣೆ ಮೊನ್ನೆ ನಡೆದ ಆ್ಯಂಬುಲೆನ್ಸ ಅಪಘಾತದಿಂದ ಉಂಟಾದ ಮಾರಣಹೊಮ ಈ ಅಪಘಾತ ಇಡಿ ಜಿಲ್ಲೆಯ ಜನತೆಯನ್ನೆ ದುಃಖದ ಮಡಿಲಿ ಹಾಕಿತ್ತು . ಈಗ ಪುನಃ ಜಿಲ್ಲೆಯಲ್ಲಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಗಾಗಿ ಅಭಿಯಾನಗಳು ಪ್ರತಿಭಟನೆಗಳು ಪ್ರಾರಂಬವಾಗಿದೆ

ಹೀಗಿರುವಾಗ ಮೊನ್ನೆ ನಡೆದ ಆ್ಯಂಬುಲೆನ್ಸ ಅಪಘಾತದಲ್ಲಿ ಮೃತಪಟ್ಟ ಕುಟುಂಬಸ್ತರ ದುಃಖ ಶಮನಗೊಳಿಸಲು ಮಾಜಿ ಶಾಸಕ ಮಂಕಾಳ ವೈದ್ಯರು ತೆರಳಿದ್ದರು ಈ ಸಂದರ್ಬದಲ್ಲಿ ಮೃತ ಲೊಕೇಶ ನಾಯ್ಕ ಸಹೋದರ ನಾಗೇಶ ನಾಯ್ಕ ಅವರು ನಮಗೆ ಯಾವುದೇ ಹಣ ಸಹಾಯ ಬೇಡ ನಿಮಗೆ ಮುಂದೆ ಅಧಿಕಾರ ಒಲಿದು ಬಂದಾಗ ನಮ್ಮ ಉತ್ತರ ಕನ್ನಡ ಜಿಲ್ಲೆಗೆ ಒಂದು ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ನಿರ್ಮಿಸಿಕೊಡಿ ಎಂದು ಇಡಿ ಉತ್ತರ ಕನ್ನಡ ಜಿಲ್ಲೆಯ ಜನತೆಯ ಪರವಾಗಿ ಮಂಕಾಳ ವೈದ್ಯರಲ್ಲಿ ಮೊರೆ ಇಟ್ಟರು ಇದು ಪ್ರತಿಯೊಬ್ಬ ಉತ್ತರ ಕನ್ನಡಿಗನ ಬೇಡಿಕೆಯಾಗಿದೆ ನಾಗೇಶ ನಾಯ್ಕ ಅವರ ಬೇಡಿಕೆಗೆ ಮಾಜಿ ಶಾಸಕ ಮಂಕಾಳ ವೈದ್ಯರು ಸ್ಪಂದಿಸಿ ಈ ಬಗ್ಗೆ ಸರಕಾರದ ಗಮನ ಸೆಳೆದು ಆಸ್ಪತ್ರೆ ನಿರ್ಮಾದ ಪ್ರಸ್ತಾವನೆ ಸಲ್ಲಿಸಲಾಗುವುದು ಸರಕಾರ ಸ್ಪಂದಿಸದಿದ್ದಲ್ಲಿ ಸ್ವ ಪ್ರಯತ್ನದಿಂದ ಜಿಲ್ಲೆಯಲ್ಲಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿಯೆ ಶತಸಿದ್ದ ಈ ಆಸ್ಪತ್ರೆ ನಿರ್ಮಾಣ ಸುಲಭದ ಮಾತಲ್ಲ ಆದರೆ ಜಿಲ್ಲೆಯಲ್ಲಿ ನಡೆಯುತ್ತಿರುವ ಸಾವುಗಳಿಗೆ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯೆ ಪರಿಹಾರ ನಾನು ನನ್ನ ಜಿಲ್ಲೆಯಲ್ಲಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಿಯೆ ಶತಸಿದ್ದ ಎಂಬ ಮಾತನ್ನು ಹೇಳಿದ್ದಾರೆ

WhatsApp
Facebook
Telegram
error: Content is protected !!
Scroll to Top