Tuesday, August 9, 2022
Homeಭಟ್ಕಳಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಹಲ್ಲೆ: ಪ್ರಕರಣ ದಾಖಲು

ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಹಲ್ಲೆ: ಪ್ರಕರಣ ದಾಖಲು

ಮುರ್ಡೇಶ್ವರ: ಮುರ್ಡೇಶ್ವರ ನಾಕಾ ಬಳಿ ನಿಂತಿದ್ದ ಯುವಕನ ಮೇಲೆ ಕ್ಷುಲ್ಲಕ ಕಾರಣಕ್ಕೆ ಇಬ್ಬರು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ದರ್ಶನ ಈಶ್ವರ ನಾಯ್ಕ (18) ಹಲ್ಲೆಗೊಳಗಾದ ಯುವಕನಾಗಿದ್ದಾನೆ.

ದರ್ಶನ್ ರಾಷ್ಟ್ರೀಯ ಹೆದ್ದಾರಿ 66 ರ ಮುರ್ಡೇಶ್ವರ ನಾಕಾ ಹತ್ತಿರ ನಿಂತುಕೊಂಡಿದ್ದ. ಆಗ ಹೃತಿಕ ಮಂಜುನಾಥ ನಾಯ್ಕ ಹಾಗೂ ಶಿವು ಮೊಗೇರ ಅಲ್ಲಿಗೆ ಬಂದು ಈ ಹಿಂದೆ ಕೊಟ್ಟಿದ್ದ ನನ್ನ 4 ಸಾವಿರ ರೂಪಾಯಿ ಯಾವಾಗ ಕೊಡುತ್ತಿಯಾ.? ಅಂತ ಕೇಳಿದ್ದಾರೆ. ನಾಳೆ ಹಣ ಕೊಡುತ್ತೇನೆ ಎಂದು ದರ್ಶನ್ ಹೇಳಿದ್ದಾನೆ. ಈ ವೇಳೆ ಅವರ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಆಗ ಆರೋಪಿಗಳು ದರ್ಶನ್ ತಲೆಗೆ ಹೊಡೆದಿದ್ದಾರೆ ಎನ್ನಲಾಗಿದೆ. ಅಲ್ಲದೇ ದರ್ಶನ್ ಅಲ್ಲಿಂದ ತಪ್ಪಿಸಿಕೊಂಡು ಹೋಗುವಾಗ ಅವರಿಬ್ಬರೂ ಹಿಂಬಾಲಿಸಿಕೊಂಡು ಬಂದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.

ಇನ್ನು ಈ ಬಗ್ಗೆ ದರ್ಶನ್ ಮುರ್ಡೇಶ್ವರ ಠಾಣೆಗೆ ತೆರಳಿ ದೂರು ನೀಡಿದ್ದಾನೆ. ಇನ್ನು ಈ ಕುರಿತು ಮುರ್ಡೇಶ್ವರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!