ಮಾರಿ ಜಾತ್ರೆಯ ಪ್ರಯುಕ್ತ ಮಾರಿಕಾಂಬಾ ದೇವಸ್ಥಾನದ ಆಡಳಿತ ಮಂಡಳಿಯಿಂದ ಪತ್ರಿಕಾಗೊಷ್ಠಿ

ಕಾಳಜಿ ವಹಿಸಿಕೊಂಡು ಯಾವುದೇ ಅವಘಡಗಳು ನಡೆಯದ ರೀತಿ ಭಕ್ತಾದಿಗಳು ಜಾಗ್ರತೆ ವಹಿಸ: ಶಂಕರ ಶೆಟ್ಟಿ

ಭಟ್ಕಳ: ದಿನಾಂ 26 -27 ಹಾಗೂ 28 ರ ಜುಲೈ 2022 ರಂದು ಜರುಗಲಿರುವ ಭಟ್ಕಳದ ಪ್ರಸಿದ್ಧ ಮಾರಿ ಜಾತ್ರೆಯ ಹಿನ್ನೆಲೆಯಲ್ಲಿ ಇಂದು ಮಾರಿಕಾಂಬಾ ದೇವಸ್ಥಾನದಲ್ಲಿ ಆಡಳಿತ ಮಂಡಳಿಯು ಪತ್ರಿಕಾಗೊಷ್ಠಿಯನ್ನು ಕರೆಯಲಾಗಿತ್ತು.

ಕಾರ್ಯದರ್ಗಶಿಗಳಾದ ಶ್ರೀಧರ ಬಿ ನಾಯ್ಕ ಮಾತನಾಡಿ ಕೊವಿಡ್- 19ರ ಕಾರಣಗಳಿಂದಾಗಿ ಕಳೆದ 2 ವರ್ಷಗಳಿಂದ ಸರ್ಕಾರದ ಆದೇಶದಂತೆ ಜಾತ್ರೆಯನ್ನು ಸರಳವಾಗಿ ಆಚರಿಸಲಾಗಿದ್ದು ಆಡಳಿತ ಮಂಡಳಿಯ ಸಭೆಯಲ್ಲಿ ವಿಜೃಂಭಣೆಯಿಂದ ಆಚರಿಸುವ ಬಗ್ಗೆ ತೀರ್ಮಾನ ಕೈಗೊಂಡಿದ್ದೇವೆ. ಹಿಂದೂ ಸಮಾಜದ ಸರ್ವರ ಸಹಯೋಗ ಹಾಗೂ ಸಹಕಾರದೊಂದಿಗೆ ವೈಭವದಿಂದ ಆಚರಿಸುವ ಬಗ್ಗೆ ವಿನಂತಿಸಿದರು.

ಅಧ್ಯಕ್ಷರಾದ ಪರಮೇಶ್ವರ ನಾಯ್ಕ ಕೊಣೆಮನೆ ಇವರು ಮಾತನಾಡಿ ಮಾರಿಜಾತ್ರೆ ಯ ಸಂಭಂದ 19 ನೇತಾರಿಖಿನಂದು ಮಾರಿ ಜಾತ್ರೆಗೆ ಬೇಕಾಗುವ ಅಮಟೆ ಮರವನ್ನು ಗುರುತಿಸಿ ಮರದ ಮೂಹೂರ್ತಮಾಡಿ ಮೂರ್ತಿ ಕೆತ್ತನೆ ಕಾರ್ಯಗಳು ನಡೆಯತ್ತಿವೆ ಇದನ್ನು ಇಂದು ಸಂಜೆ ಮಣ್ಕುಳಿ ಆಚಾರ್ಯರ ಮನೆಯ ಗದ್ದಿಗೆಗೆ ಸ್ಥಳಾಂತರಿಸಿ ಉಳಿದ ಕೆತ್ತನೆ ಕಾರ್ಯ ಪೂರ್ಣ ಗೊಳಿಸಿ ದಿನಾಂಕ 26 ರಂದು ರಾತ್ರೆ 8 ರಿಂದ 12 ಗಂಟೆ ನಡುವೆ ಆಚಾರ್ಯರ ಮನೆಯಲ್ಲಿ ವಿಷೇಶ ಪೂಜೆ ನಡೆಯಲಿದೆ ಹಾಗೂ 27 ರಂದು ಬೆಳಗಿನ ನಸುಕಿನ ಜಾವ ಶ್ರೀ ದೇವಿಯನ್ನು ತಲೆಮೇಲೆ ಹೊತ್ತುಕೊಂಡು ಬಂದು ದೇವಸ್ಥಾನದ ಗದ್ದುಗೆಯಲ್ಲಿ ಪ್ರತಿಷ್ಟಾಪನೆ ಮಾಡಿದ ನಂತರ ಪ್ರಥಮವಾಗಿ ಜೈನ ಸಮಾಜದ ಉದಯ ಜೈನ್‌ ರ ಮನೆತನದವರಿಂದ ಪೂಜೆ ಜರುಗಿದ ಬಳಿಕ ಸಾರ್ವಜನಿಕರ ಪೂಜೆಗೆ ಅವಕಾಶ ಮಾಡಿ ಕೋಡಲಾಗುವುದು. ದಿನಾಂಕ 28 ರಂಧು ಸಂಜೆ 4-30 ಕ್ಕೆ ವಿಸರ್ಜನಾ ಪೂಜೆ ಜರುಗಿ ನಂತರ ತಲೆಯಮೇಲೆ ಹೊತ್ತು ಕರಿಕಲ್‌ ಮಾರ್ಗವಾಗಿ ಜಾಲಿಕೋಡಿ ಸಮುದ್ರದಲ್ಲಿ ವಿಸರ್ಜಿಸನಾ ಕಾರ್ಯಕ್ರಮ ನಡೆಯುವುದಾಗಿ ತಿಳಿಸಿದರು. 

ಸದಸ್ಯರಾದ ಶಂಕರ ಶೆಟ್ಟಿ ಮಾತನಾಡಿ ವಿಸರ್ಜನಾ ಕಾರ್ಯಕ್ರಮದ ಸಮಯವು ಮಳೆಗಾಲವಾಗಿರುವದರಿಂದ ನೀರಿನ ತೀವೃತೆ ಅಪಾಯಮಟ್ಟದಲ್ಲಿರುವುದರಿಂದ ಸಮುದ್ರದ ನೀರಿನ ಮಟ್ಟ ಅಧಿಕವಿರುವುದು ಆಕಾರಣ ಸಾರ್ವಜನಿಕರು ತಮ್ಮ ಜೀವದ ಬಗ್ಗೆ ಕಾಳಜಿ ವಹಿಸಿಕೊಂಡು ಯಾವುದೇ ಅವಘಡಗಳು ನಡೆಯದ ರೀತಿ ಭಕ್ತಾದಿಗಳು ಜಾಗ್ರತೆ ವಹಿಸ ಜಾತ್ರೆಯನ್ನು ವೈಭವದಿಂದ ಯಶಸ್ವಿಯಾಗಿ ನಡೆಸುವ ಎಂದು ಹಿಂದೂ ಸಮಾಜ ಭಾಂಧವರಲ್ಲಿ ವಿನಂತಿಸಿದರು.

ಈ ಸಂಧರ್ಭದಲ್ಲಿ ಆಡಳಿತ ಸಮಿತಿಯ ಸದಸ್ಯರಾಧ ನಾರಾಯಣ ಖಾರ್ವಿ , ಮಾಧವ ಮೊಗೇರ ,ಸುರೇಂದ್ರ ಭಟ್ಕಳಕರ, ಶ್ರೀಪಾದ ಕಂಚುಗಾರ, ಕೃಷ್ಣ ಮಹಾಲೆ ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top