ಭಟ್ಕಳದ ಐತಿಹಾಸಿಕ ಪ್ರಸಿದ್ದವಾದ ಮಾರಿ ಜಾತ್ರೆಯ ಪ್ರಯುಕ್ತ ಶಾಂತಿ ಸಭೆ

ಭಟ್ಕಳ : ದಿನಾಂಕ 26 -27- ಮತ್ತು 28 ರಂದು ನಡೆಯುವ ಭಟ್ಕಳದ ಐತಿಹಾಸಿಕ ಪ್ರಸಿದ್ದವಾದ ಮಾರಿ ಜಾತ್ರೆಯ ಪ್ರಯುಕ್ತ ಭಟ್ಕಳದ ಆಡಳಿತ ಸೌಧದಲ್ಲಿ ಸಹಾಯಕ ಆಯುಕ್ತೆ ಮಮತಾ ದೇವಿ ಜಿಎಸ್‌ ಅವರ ಅಧ್ಯಕ್ಷತೆಯಲ್ಲಿ ಶಾಂತಿ ಸಭೆಯನ್ನು ನಡೆಸಲಾಯಿತು . ಸಭೆಯಲ್ಲಿ ಮಾರಿ ಜಾತ್ರೆಯ ಸಂಪೂರ್ಣ ವಿವರಗಳನ್ನು ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷರಾದ ಪರಮೇಶ್ವರ ನಾಯ್ಕ ಕೊಣೆಮನೆ ಸಭೆಯಲ್ಲಿ ತಿಳಿಸಿದರು.

ಈ ಸಂಧರ್ಭದಲ್ಲಿ ಮಾತನಾಡಿದ ಪುರಸಬಾ ಸದಸ್ಯ ಹಾಗೂ ದೇವಸಾಥನದ ಆಡಳಿತ ಮಂಡಳಿ ಸದಸ್ಯ ಶ್ರೀ ಪಾದ ಕಂಚುಗಾರಿ ಮಾತನಾಡಿ 27 ರಂದು ಶ್ರೀ ದೇವಿಯನ್ನು ತಲೆಯ ಮೇಲೆ ಹೊತ್ತು ಮಣಕುಳಿ ಆಚಾರ್ಯರ ಮನೆಯಿಂದ ರಘುನಾಥ ದೇವಸಾಸ್ಥಾನದ ಮಾರ್ಗವಾಗಿ ಬಸ್ತಿ ರಸ್ತೆ ಮುಖಾಂತರ ದೇವಾಲಯಕ್ಕೆ ದೇವರ ಜಾತ್ರಾ ಮೂರ್ತಿ ಬೆಳಗಿನ ಜಾವ ಆಗಮಿಸವುದು ಸಂಪ್ರದಾಯ ಈ ಮಾರ್ಗದಲ್ಲಿ ಆಗಮಿಸುವಾಗ ದಾರಿಯುದ್ದಕ್ಕು ವಿದ್ಯತ್‌ ದೀಪಗಳ ಸಮಸ್ಯೆ ಇದೆ ಇದು ಪ್ರತಿ ವರ್ಷದ ಸಮಸ್ಯೆ ಹಾಗೂ ಈ ರಸ್ತೆಯಲ್ಲ್ದೆ ಮಾರಿ ಮೂರ್ತಿ ನಿರ್ಮಿಸುವ ಗದ್ದುಗೆಯಬಳಿ ಒಂದೇ ಒಂದು ಬೀದಿ ದೇಪವಿಲ್ಲ ಆ ಸಂಧರ್ಭದಲ್ಲಿ ಬೀದಿ ದೇಪದ ಸಮಸ್ಯೆ ಯಾಗದಂತೆ ಹಾಗೂ ಆಚಾರ್ಯರ ಮನೆ ಹತ್ತಿರದ ಶ್ರೀದೇವಿಯ ಗದ್ದುಗೆ ಬಳಿ ಕಸ ಕಡ್ಡಿ ಗಿಡಗಂಟಿ ಬೆಳೆದಿದ್ದು ಅದನ್ನು ಪುರಸಭೆಯವರು ತೆಗೆದು ಸ್ವಚ್ಛಗೋಳಿಸಲು ಪುರಸಭೆಗೆ ಸೂಚಿಸುವಂತೆ ಮಾಹಿತಿ ನೀಡಿದರು.

ವೆಂಕಟೇಶ ನಾಯ್ಕ ಆಸರಕೇರಿ ಮಾತನಾಡಿ ಮಾರಿಜಾತ್ರೆ ಮುನ್ನಾದಿನ ಚರುಬಲಿ ಕಾರ್ಯಕ್ರಮವು ಪದ್ಮಾವತಿ ದೇವಸ್ಥಾನದ ವತಿಯಿಂದ ದೇವಾಯಲದಿಂದ ಆರಂಭಿಸಿ ಬಸ್ತಿ ರಸ್ತೆ ಮುಖಾಂತರ ಜಟ್ಟಪ್ಪನಾಯ್ಕ ಬಸದಿ ಮಾರ್ಗವಾಘಿ ಬಂಡಿ ಬಕ್ಕ ದೇವರ ಕ್ಷೇತ್ರದ ವರೆಗೆ ಸಾಗಿ ಚರು ಬಲಿ ಸಮರ್ಪಿತವಾಗುವ ಬಗ್ಗೆ ತಿಳಿಸಿದರು. ಕೃಷ್ಣಾ ನಾಯ್ಕ ಆಸರಕೇರಿ ಮಾತನಾಡಿ ವಿಸರ್ಜನಾ ಮಾರ್ಗದಲ್ಲಿ ಗಿಡಗಂಟಿಗಳು ರಸ್ತೆಯ ಮೆಲೆ ಜೊತು ಬಿದ್ದಿದ್ದು ಇದನ್ನು ತೆರವುಗೋಳಿಸಿ ಕೊಡುವಂತೆ ಸಲಹೆ ನೀಡಿದರು. ಶ್ರೀಕಾಂತ ನಾಯ್ಕ ಮಾತನಾಡಿ ದೇವರ ವಿಸರ್ಜನಾ ಸಮಯದಲ್ಲಿ ಸಮುದ್ಯಾರ ತೀರದಲ್ಲಿ ಯಾವುದೇ ರೀತಿ ಜೀವಹಾನಿ ಯಾ ಅವಘಡಗಳು ಸಂಭವಿಸದಂತೆ ಸೂಕ್ತ ಕ್ರಮ ಕೈಗೊಳ್ಳುವ ಕುರಿತು ಸಲಹೆ ನೀಡಿದರು.

ಸಹಾಯಕ ಆಯುಕ್ತೆ ಮಮತಾ ದೇವಿ ಜಿ ಎಸ್‌ ಮಾತನಾಡಿ ಕಳೆದ 2 ವರ್ಷಗಳಿಂದ ಕರೋನಾ ಹಿನ್ನೆಲೆಯಲ್ಲಿ ಧಾರ್ಮಿಕ ಆಚರಣೆಗೆ ಮಾತ್ರ ಸೀಮಿತಗೊಳಿಸಿದ್ದ ಮಾರಿ ಜಾತ್ರೆ ಈ ವರ್ಷ ವೈಭವದಿಂದ ಜರುಗಲು ಬೇಕಾದ ಎಲ್ಲ ರೀತಿಯ ಸಹಕಾರ ನೀಡಲು ತಾಲೂಕಾಡಳಿತ ಸಿದ್ಧವಿದೆ ಎಂದರು .ದೇವಸ್ಥಾನ ವತಿಯಂದ ಸ್ವಂಯಂಸೇವಕರನ್ನು ನೇಮಿಸಿ ಅವರಿಗೆ ಗುರುತಿನ ಚೀಟಿ ನೀಡಲು ಸೂಚಿಸಿದರು. ಸಭೆಯಲ್ಲಿ ಚರ್ಚಿಸಿದ ವಿಷಯಗಳ ಬಗ್ಗೆ ಬೇರೆ ಬೇರೆ ಇಲಾಖೆಗಳ ಆಗಬೇಕಾದ ಕೆಲಸಗಳ ಬಗ್ಗೆ ಅಧಿಕಾರಿಗಳಿಗೆ ಆದೇಶ ನೀಡಿ ಕಾರ್ಯಗಳನ್ನು ಮಾಡಿಕೊಡುವುದಾಗಿ ತಿಳಿಸಿದರು.

ಆಡಳಿತ ಮಂಡಳಿ ಸದಸ್ಯರಾದ ಶಂಕರ ಶೆಟ್ಟಿ ಮಾತನಾಡಿ ಅಧಿಕಾರಿ ವರ್ಗದವರು ಜಾತ್ರಾ ಮಹೋತ್ಸವಕ್ಕೆ ಆಗಮಿಸಿ ಜಾತ್ರಾ ಮಹೋತ್ಸವ ವೈಭವದಿಂದ ಜರುಗಲು ಎಲ್ಲರ ಸಹಕಾರವನ್ನು ಕೋರಿದರು ಈ ಸಂಧರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ಶ್ರೀಧರ ನಾಯ್ಕ , ಸದಸ್ಯರಾದ ವಾಮನ ಶಿರಸಾಟ, ಸುರೇಂದ್ರ ಭಟ್ಕಳಕರ , ಸುರೇಶ ಆಚಾರ್ಯ, ನಾರಾಐಣ ಖಾರ್ವಿ ,ಕೃಷ್ಣ ಮಹಾಲೆ, ಬಿಜೆಪಿ ಭಟ್ಕಳ ಮಂಡಲದ ಅಧ್ಯಕ್ಷರಾಧ ಸಬ್ರಾಯ ದೇವಾಡಿಗ, ದಿನೇಶ ನಾಯ್ಕ ಮುಂಡಳ್ಳಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೊವಿಂದ ನಾಯ್ಕ, ಕೃಷ್ಣಾ ನಾಯ್ಕ ಆಸರಕೇರಿ ತಹಶೀಲಲ್ಧಾರ ಸುಮಂತ ಬಿಇ ನಗರ ಠಾಣೆ ಪಿ ಎಸ್‌ ಐ ಸುಮಾ ಬಿ , ಹೆಚ್.ಬಿ ಕುಡುಗಂಟಿ, ಎ ಇಇ ಮಂಜುನಾಥ, ಪುರಸಾಭೆಯ ಮುಖ್ಯಾಧಿಕಾರಿ ಸುರೇಶ ಎಮ್‌ ಕೆ ಸಹಿತ ಹಲವರು ಉಪಸ್ಥಿರಿದ್ದರು.

WhatsApp
Facebook
Telegram
error: Content is protected !!
Scroll to Top