Tuesday, August 9, 2022
Homeಭಟ್ಕಳಸರ್ಕಾರಿ ಶಾಲೆಯ ಬಗ್ಗೆ ಮಲತಾಯಿ ಧೊರಣೆ ಅನುಸರಿಸುತ್ತಿದೆಯೆ ಶಿಕ್ಷಣ ಇಲಾಖೆ ?

ಸರ್ಕಾರಿ ಶಾಲೆಯ ಬಗ್ಗೆ ಮಲತಾಯಿ ಧೊರಣೆ ಅನುಸರಿಸುತ್ತಿದೆಯೆ ಶಿಕ್ಷಣ ಇಲಾಖೆ ?

ಭಟ್ಕಳ: ನಗರ ಮಧ್ಯದಲ್ಲಿರುವ ಚನ್ನಪಟ್ಟಣದ ಹನುಮಂತ ದೇವಸ್ಥಾನದ ಹತ್ತಿರ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆ ಶಿಥಿಲಾವಸ್ಥೆಯಲ್ಲಿದ್ದು ಅನಾಹುತ ಮಳೆಯಿಂದ ಸಂಭವಿಸಿದ್ದಲ್ಲಿ ಅದಕ್ಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೇ ಹೊಣೆಗಾರರು ಎಂದು ಬುಧವಾರ ಶಾಲೆಯ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಸ್‌. ಡಿ.ಎಂ.ಸಿ.ಸದಸ್ಯ ಹರೀಶ ದೇವಾಡಿಗ ಹೇಳಿದರು.

160 ವರ್ಷ ಹಳೆಯದಾದ ಈ ಶಾಲೆಯ ಕಟ್ಟಡದ ಬಹುತೇಕ ಕೊಠಡಿಗಳು ಬಿರುಕು ಬಿಟ್ಟಿದೆ.ಛಾವಣೆ ಸೋರುತ್ತಿದ್ದು, ಪಕಾಸುಗಳು ಹಳೆಯದಾಗಿದ್ದು ಕೆಲವೆಡೆ ತುಂಡಾಗಿದೆ ಶಾಲೆಯನ್ನು ದುರಸ್ತಿ ಮಾಡಲು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಲ ತಾಯಿಯ ಧೊರಣೆ ಅನುಸರಿಸುವುದು ವಿಷಾದನೀಯ.

ಶಾಲೆಯ ಶಿಥಿಲಾವಸ್ಥೆ ಬಗ್ಗೆ ಉಪವಿಭಾಗಾಧಿಕಾರಿಗಳು , ತಹಶೀಲ್ದಾರರು, ಪುರಸಭೆ ಮುಖ್ಯಾಧಿಕಾರಿ ಹಾಗೂ ಶಾಸಕರು ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೂ ಪತ್ರ ಮುಖೇನ ಮನವಿ ಮಾಡಿದ್ದೇವೆ. ಮನವಿ ನೀಡಿದರೂ ಯಾರೂ ಕೂಡ ಶಾಲೆ ನವೀಕರಣದ ಬಗ್ಗೆ ಅಸಕ್ತಿ ಕೂಡ ತೋರುತ್ತಿಲ್ಲ ಎಂದು ಪಾಲಕರೂ ದೂರಿದರು.

ಶಾಲೆಯಲ್ಲಿ 90 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಪ್ರತ್ಯೇಕ ಅಡುಗೆ ಕೋಣೆಯೂ ಇಲ್ಲ. ಶಾಲೆಯ ಅವ್ಯವಸ್ಥೆ ನೋಡಿ ಪಾಲಕರು ಕೂಡ ಕ್ರಮ ಭಯಭೀತರಾಗಿದ್ದು, ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ. ಮುರಿದು ಬಿದ್ದ ಪಕಾಸು, ತುಂಡಾದ ಹೆಂಚುಗಳು ಎಂದು ಮಕ್ಕಳ ಮೈಮೇಲೆ ಇದು ಅನಾಹುತ ಆಗುವುದೋ ಎಂಬ ಸ್ಥಿತಿ ನಿರ್ಮಾಣವಾಗಿದೆ.

.ಶಾಲೆಯ ಕೋಣೆಗಳನ್ನು ದುರಸ್ತಿ ಮಾಡಿಕೊಡುವಂತೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಶಾಸಕರು, ಅಧಿಕಾರಿಗಳು ಆಶ್ವಾಸನೆ ನೀಡಿ ದಿನದೂಡುತ್ತಿದ್ದಾರೆ. ಪಾಲಕರು ಕೂಡ ಈ ವಿಷಯವಾಗಿ ನಮ್ಮನ್ನು ಪ್ರಶ್ನಿಸುತ್ತಿದ್ದು, ಅವರಿಗೆ ಉತ್ತರ ನೀಡದ ಸ್ಥಿತಿಯಲ್ಲಿದ್ದೆವೆ. 10 ದಿನದೊಳಗೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಇದರ ಬಗ್ಗೆ ಸೂಕ್ತವಾದ ಕ್ರಮ ಕೈಗೊಳ್ಳದಿದ್ದಲ್ಲಿ ಶಾಲೆಗೆ ಬೀಗ ಜಡಿದು ಮಕ್ಕಳನ್ನು ಹೊರಗಡೆ ಕೂರಿಸಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ವಿದ್ಯಾರ್ಥಿಗಳ ಪಾಲಕರು ಹಾಗೂ ಎಸ್‌ ಡಿ ಎಮ್‌ ಸಿ ಸದಸ್ಯರ ಸಭೆಯಲ್ಲಿ ತೀರ್ಮಾಣ ಕೈಗೊಂಡಿರುವುದಾಗಿ ತಿಳಿಸಿದರು.

ಈ ಸಂಧರ್ಭದಲ್ಲಿ ಎಸ್..ಡಿ.ಎಂ.ಸಿ. ‌ಯ ಸದಸ್ಯರಾಧ ದಿನೇಶ ನಾಯ್ಕ, ಮಹಾಬಲೇಶ್ವರ ನಾಯ್ಕ, ರಾಘವೇಂದ್ರ ನಾಯ್ಕ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!