ಶಿರೂರು ಟೋಲ್ ಗೇಟ್ ಬಳಿ ಆಂಬುಲೆನ್ಸ್ ಭೀಕರ ಅಪಘಾತ

ಹೊನ್ನಾವರ ಮೂಲದ ನಾಲ್ವರ ಸಾವು

ಭಟ್ಕಳ:ಹೊನ್ನಾವರ ಕಡೆಯಿಂದ ಅಂಬ್ಯುಲೆನ್ಸ್ವೊಂದು ಚಾಲಕನ ನಿಯಂತ್ರಣ ತಪ್ಪಿ ಟೋಲ್ ಸಂಗ್ರಹಣಾ ಕೌಂಟರ್’ಗೆ ಢಿಕ್ಕಿ ಹೊಡೆದು ಭೀಕರ ಅಪಘಾತ ಸಂಬವಿಸಿ ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಶ್ರೀದೇವಿ ಆಸ್ಪತ್ರಯಿಂದ ಕುಂದಾಪುರ‌ ಖಾಸಗಿ ಆಸ್ಪತ್ರೆಗೆ ರೋಗಿಗಳನ್ನು ಸಾಗಾಟ ಮಾಡುತ್ತಿದ್ದ ಅಂಬ್ಯುಲೆನ್ಸ್ ವಾಹನ ಶಿರೂರು ಟೋಲ್ ಪ್ಲಾಝಾ ಬಳಿಗೆ ಬರುತ್ತಿದ್ದಂತೆಯೇ ಟೋಲ್ ಪ್ಲಾಝಾದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಬ್ಯಾರಿಕೇಟ್ ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಮುಂದಾಗಿದ್ದಾರೆ. ಆದರೆ ಈ ಸಂದರ್ಬದಲ್ಲಿ ಚಾಲಕನ ಈ ಸಿಬ್ಬಂದಿಯನ್ನು ನೋಡಿ ಗಲಿಬಿಲಿಯಿಂದ ಬ್ರೇಕ್ ಒತ್ತಿದ್ದಾನೆ ಆ್ಯಂಬುಲೆನ್ಸ ಆ ಕ್ಷಣವೆ ನಿಯಂತ್ರಣ ತಪ್ಪಿದೆ. ಅಂಬ್ಯುಲೆನ್ಸ್ ಟೋಲ್ ಫ್ಲಾಝಾದಲ್ಲಿನ ಟೋಲ್ ಸಂಗ್ರಹಣಾ ಕೌಂಟರ್’ಗೆ ಢಿಕ್ಕಿ ಹೊಡೆದಿದೆ.

ಘಟನೆಯಲ್ಲಿ ಹೊನ್ನಾವರದ ನಿವಾಸಿಗಳಾದ ಲೋಕೇಶ್ ಮಾಧವ ನಾಯ್ಕ್, ಜ್ಯೋತಿ ಲೋಕೇಶ್ ನಾಯ್ಕ್, ಗಜಾನನ ಲಕ್ಷ್ಮಣ ನಾಯ್ಕ್ ಮಂಜುನಾಥ ಮೃತಪಟ್ಟಿದ್ದಾರೆ. ಲೋಕೇಶ್ ಮಾಧವ ನಾಯ್ಕ್ ರೋಗಿಯಾಗಿದ್ದು, ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲು ಕುಟುಂಬಿಕರು ಜೊತೆಗಿದ್ದರು. ಲೋಕೇಶ್ ಮಾಧವ ನಾಯ್ಕ್, ಜ್ಯೋತಿ ಲೋಕೇಶ್ ನಾಯ್ಕ್, ಗಜಾನನ ಲಕ್ಷ್ಮಣ ನಾಯ್ಕ್ ಸ್ಥಳದಲ್ಲೆ ಮೃತಪಟ್ಟರೆ ಮಂಜುನಾಥ ಅವರು ಆಸ್ಪತ್ರೆಯಲ್ಲಿ ಅಸುನಿಗಿದ್ದಾರೆ ಎಂದು ತಿಳಿದು ಬಂದಿದೆ

ಇಲ್ಲಿ ಮುಖ್ಯವಾಗಿ ಆ್ಯಂಬುಲೆನ್ಸನ ಅತಿವೇಗವೆ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ ಆದರೆ ರೋಗಿಯನ್ನು ಸರಿಯಾದ ಸಮಯದಲ್ಲಿ ಆಸ್ಪತ್ರೆಯನ್ನು ತಲುಪಿಸ ಬೇಕಾದ ಜವಾಬ್ದಾರಿ ಚಾಲಕನ ಮೇಲಿರುತ್ತದೆ ಎನ್ನುವುದು ಕೂಡ ಮುಖ್ಯವಾದ ವಿಚಾರವಾಗಿರುತ್ತದೆ ಆ್ಯಂಬುಲೆನ್ಸ ವೇಗವಾಗಿ ಚಾಲನೆ ಮಾಡುವುದು ಸರ್ವೆ ಸಾಮಾನ್ಯ ಟೋಲ್ ಗೇಟ್ ಸಿಬ್ಬಂದಿಗಳು ಜಾಗರೂಕರಾಗಿ ಅಲರ್ಟ ಆಗಿದ್ದು ಬ್ಯಾರಿಕೇಡ್ ಅನ್ನು ಸ್ವಲ್ಪ ಮೊದಲೆ ತೆರವುಗೊಳಿಸಿದ್ದರೆ ಈ ಅಪಘಾತ ಸಂವಿಸುತ್ತಲೆ ಇರಲಿಲ್ಲವಾಗಿತ್ತೆನೋ ಎನ್ನುವುದು ಸ್ಥಳಿಯ ಸಾರ್ವಜನಿಕರ ಆಕ್ರೋಶದ ಮಾತಾಗಿದೆ ಈ ಹಿಂದೆ ಕೂಡ ಈ ಟೋಲ್ ಗೇಟ್ ಅಲ್ಲಿ ಅಪಘಾತ ಸಂಬವಿಸಿ ಒಂದು ಸಾವು ಸಂಬವಿಸಿರುವುದನ್ನು ಕೂಡ ನಾವು ಇಲ್ಲಿ ಸ್ಮರಿಸಿಕೊಳ್ಳ ಬಹುದಾಗಿದೆ

WhatsApp
Facebook
Telegram
error: Content is protected !!
Scroll to Top