ಶಿರಾಲಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಮಳೆ ನೀರು ಸರಾಗವಾಗಿ ಸಾಗುವಂತೆ ಮಾಡಲು ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಭೆ

ಭಟ್ಕಳ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಕಾಮಗಾರಿಯ ಕಾರಣದಿಂದ ಶಿರಾಲಿಯಲ್ಲಿ ಮನೆ ಅಂಗಡಿ ಶಾಲೆಗಳಿಗೆ ಚರಂಡಿ ನೀರು ನುಗ್ಗುತ್ತಿದ್ದು ಈ ಸಮಸ್ಯೆಯನ್ನು ಪರಿಹರಿಸಿ ನಿಂತಿರುವ ನೀರನ್ನುವ್ಯವಸಾಯಯೋಗ್ಯ ಜಮೀನಿನ ಮೂಲಕ ಹರಿದು ಹೋಗುವಂತೆ ಯೋಜನೆ ತಯಾರಿಸುತ್ತಿದ್ದು ಈ ಯೋಜನೆಯನ್ನು ಕೂಡಲೆ ಕೈ ಬಿಡಬೇಕು ಅಲ್ಲದೆ ಈ ಮೊದಲು ಹಳೆ ರಸ್ತೆ ಇದ್ದಾಗ ಚರಂಡಿಯ ಮೂಲಕ ನೀರು ಹಳ್ಳವನ್ನು ಸೇರುತ್ತಿತ್ತು ತಾವು ಸ್ಥಳ ಪರಿಶಿಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯನ್ನುಎಂದು ಭಟ್ಕಳ ತಾಲೂಕಿನ ಶಿರಾಲಿಯ ನಾಗರಿಕರು ಹಾಗು ರೈತರು ಕೆಲದಿನಗಳ ಹಿಂದೆ ತಹಶಿಲ್ದಾರರರಿಗೆ ಮನವಿಯನ್ನುನೀಡಿದ್ದರು. ಈ ಸಂಬಂದವಾಗಿ ಇಂದು ಸಂಜೆ ತಲುಕು ಆಡಳಿತ ಸೌಧದಲ್ಲಿ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು..

ಶಿರಾಲಿಯ ಸಾರ್ವಜನಿಕರು ಮಾತನಾಡಿ ನೂತನ ರಸ್ತೆ ನಿರ್ಮಿಸುವ ಪೂರ್ವದಲ್ಲಿ ನೀರು ಚರಂಡಿ ಸರಾಗವಾಗಿ ಸಾಗುತ್ತಿತ್ತು ಐಆರ್ಬಿಯವರ ನೂತನ ರಸ್ತೆ ನಿರ್ಮಾಣದ ನಂತರ ಜನತಾ ವಿದ್ಯಾಲಯ ಸೇರಿದಂತೆ ಅನೇಕ ಕಡೆ ಮಳೆಯ ನೀರು ನಿಂತು ಸ್ವಿಮ್ಮೀಗ್‌ ಫುಲ್‌ ನಂತಾಗುದಲ್ಲದೇ ಮನೆ ಅಂಗಡಿಗಳಿಗೆ ನುಗ್ಗಿ ಸಮಸ್ಯೆಯಾಗುತ್ತಿದೆ. ಈ ಸಮಸ್ಯೆ ನಿವಾರಿಸಲು ಜನತಾ ವಿದ್ಯಾಲಯದ ಎಡಗಡೆ ಮತ್ತು ಬಲಗಡೆ ಸರಾಗವಾಗಿ ನೀರು ಹರಿದುಹೋಗುವಂತೆ ವೆಂಕಟಾಪುರ ನದಿ ಮತ್ತು ಶಾರದಹೊಳೆ ನದಿಯ ತನಕ ಮಳೆನೀರು ಸರಾಗವಾಗಿ ಹರಿದು ಹೊಗಲು ಅವಶ್ಯವಿರುವಷ್ಟು ಪ್ರಮಾಣ ಆಳದ ಚರಂಡಿಗಳನ್ನು ಪ್ರಯೋಗಿಕವಾಗಿ ನಿರ್ಮಿಸಿದಲ್ಲಿ ಸಮಸ್ಯೆ ನಿವಾರಣೆಯಾಗಬಹುದು ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟರು.

ಈ ಸಂಭಂದ ಶಿರಾಲಿ ಪಂಚಾಯತನ ಪಿಡಿಒ ಮಾತನಾಡಿ ಸದ್ಯ ಇರುವ ಚರಂಡಿಯು 4 ಅಡಿ ಆಳದಷ್ಟಿದೆ, ಪ್ರಸ್ತುತ ಸಾರ್ವಜನಿಕರು ಸೂಚಿಸುವಂತೆ ಶಿರಾಲಿ ಮಧ್ಯಭಾಗದಿಂದ ನದಿಪಾತ್ರದವರೆಗೆ ನೀರು ಸರಾಗವಾಗಿ ಸಾಗುವಂತೆ ಮಾಡಲು ಕೆಲವೆಡೆ ಎತ್ತರ ಪ್ರದೇಶಗಳಿರುವುದರಿಂದ ಕೆಲವು ಕಡೆ ನೆಲಮಟ್ದ ದಿಂದ ಸರಾಸರಿ 12 ಅಡಿ ಆಳದ ಚಂರಂಡಿಯನ್ನು ನಿರ್ಮಾಣ ಮಾಡುಬೇಕಾಗುವುದು ನದಿಯಲ್ಲಿ ನೀರಿನ ಮಟ್ಟ ಹೆಚ್ಚಾದರೆ ಈ ಚರಂಡಿಗಳ ಮೂಲಕ ನೀರು ವಾಪಾಸ್‌ ಬರುವ ಸಾಧ್ಯತೆ ಇರುವುದಾಗಿ ತಿಳಿಸಿದರು.

ಈ ಬಗ್ಗೆ ಸಾರ್ವಜನಿಕರೊಂದಿಗೆ ಕುಲಂಕೂಷವಾಗಿ ಚರ್ಚಿಸಿದ ಸಹಾಯಕ ಆಯುಕ್ತೆ ಮಮತಾ ದೇವಿ ಜಿಎಸ್‌ ಅವರು ನಾಳೆಯ ದಿನ ಸಾರ್ವಜನಿಕರ ಬೇಡಿಕೆಯಂತೆ ಸಂಭಂದ ಪಟ್ಟ ಅಧಿಕಾರಿಗಳು ಆಗಮಿಸಿ ಹೆದ್ದಾರಿಯ ಇಕ್ಕೆಲಗಳಲ್ಲಿ ನೀರು ಸರಾಗವಾಗಿ ಸಾಗಲು ಪ್ರಾಯೋಗಿಕವಾಗಿ ಚರಂಡಿಗಳನ್ನು ನಿರ್ಮಿಸಿಕೊಡುವ ಭರವಸೆ ನೀಡಿದರು. ಕೈಗೊಂಡ ಕ್ರಮದಿಂದ ಸಮಸ್ಯೆಗೆ ಪರಿಹಾರ ದೊರಕಿದರೆ. ಸಾರ್ವಜನಿಕರನ್ನು ಗಣನೆಗೆ ತೆಗೆದು ಕೊಂಡು ಮುಂದಿನ ದಿನಗಳಲ್ಲಿ ಅದೇ ರಿತಿಯಾಗಿ ಕಾಮಗಾರಿ ನಡೆಸಿಕೋಡಲು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂಧರ್ಭದಲ್ಲಿ ತಾಲೂಕ ಪಂಚಾಯತ್‌ ಇಒ ಪ್ರಭಾಕರ ಸಿ , ಪಿಡಬ್ಲೂಡಿ ಇಂಜಿನಿಯರ್‌ ರಾಮು, ಗ್ರಾಮಿಣ ಠಾಣೆ ಪಿಎಸಐ ಭರತ್‌, ಪಿಡಿಒ ಮಹೇಶ ನಾಯ್ಕ, ಆಹಾರ ನಿರಿಕ್ಷಕ ಪಾಂಡು ನಾಯ್ಕ, ಸೇರಿದಂತೆ ಶಿರಾಲಿಯ ಜನರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top