ಭಟ್ಕಳ ಮಾರಿ ಹಬ್ಬಕ್ಕೆ ಮೂಹೂರ್ತ

ಮಾರಿ ಮೂರ್ತಿಗಾಗಿ ಹುಳಿ ಅಮಟೆ ಮರ ಗುರುತಿಸಿ ಪೂಜೆ ಮೂಹೂರ್ತ

ಭಟ್ಕಳ: ಈ ವರ್ಷದ ಭಟ್ಕಳದ ಐತಿಹಾಸಿಕ ಮಾರಿ ಜಾತ್ರೆಯು ಜುಲೈ 27 ಮತ್ತು 28 ರಂದು ನಡೆಯಲಿದ್ದು. ಈ ಹಿನ್ನೆಲೆಯಲ್ಲಿ ಇಂದು ಮಾರಿ ಜಾತ್ರೆ ಗೆ ಅವಶ್ಯಕವಿರುವ ಮಾರಿದೇವಿಯ ಮೂರ್ತಿ ತಯಾರಿಸಲು ಬೇಕಾದ ಹುಳಿ ಅಮಟೆ ಮರವನ್ನು ಗುರುತಿಸಿ ಪೂಜೆ ಮಾಡಿ ಮರದ ಮೂಹೂರ್ತ ಮಾಡುವುದರೊಂದಿಗೆ ಅಧಿಕೃತ ಚಾಲನೆ ನೀಡಲಾಯಿತು.

ಪ್ರತಿ ವರ್ಷ ಆಷಾಢ ಅಮವಾಸ್ಯೆಯ ಮೊದಲ ಬುಧವಾರ ಮತ್ತು ಗುರುವಾರ ಮಾರಿ ಜಾತ್ರೆ ನಡೆಯುವುದು ಮೊದಲಿಂದಲೂ ನಡೆದು ಬಂದ ಪದ್ಧತಿ ಈ ಸಂಭಂದ ರಘುನಾಥ ನಾಯಕ ಸ್ಟ್ರೀಟ್ ನಲ್ಲಿರುವ ಪಡಿಯಾರ ಮನೆಯ ಎದುರು ಭಾಗದ ಒಣಿಯಲ್ಲಿರುವ ಹುಳಿ ಅಮಟೆ ಮರವನ್ನು ಮೂರ್ತಿ ತಯಾರಿಸುವ ಮಣ್ಕುಳಿ ಆಚಾರ್ಯರ ಮನೆಯ ಹಿರಿಯರಾದ ಮಾರುತಿ ಆಚಾರ್ಯರು ಮರ ತುಂಡರಿಸಲು ಬೇಕಾಗುವ ಸಲಕರಣೆಗಳ ಸಹಿತ ಮರವನನ್ನು ಪೂಜಿಸಿ ನಂತರ ಮರದ ಮೂಹೂರ್ತವನ್ನು ನೆರವೇರಿಸಿದರು.

ನಂತರ ಮಾಧ್ಯಮದೊಂದಿಗೆ ಮಾತನಾಡಿದ ಮಾರುತಿ ಆಚಾರ್ಯರು ಆಷಾಢ ಮಾಸದ ಹುಣ್ಣಿಮೆ ನಂತರ ಬರುವ ಮಂಗಳವಾರದಂದು ಮರದ ಮೂಹೂರ್ತ ನೆರವೇರಿಸಿ . ಶ್ರೀ ದೇವಿಯ ಬಿಂಬವು ಮೂಡುವ ರೀತಿಯಲ್ಲಿ ಪ್ರಾಥಮಿಕವಾಗಿ ಒಯ್ಯಲು ಅನೂಕೂಲವಾಗುವ ರೀತಿಯಲ್ಲಿ ನಿರ್ಮಿಸಿ ಪೂರ್ಣ ಪ್ರಮಾಣದ ಮೂರ್ತಿಯಾಗಿ ನಿರ್ಮಿಸಲು ಶುಕ್ರವಾರದಂದು ಮಣ್ಕುಳಿಯ ಆಚಾರ್ಯರ ಮನೆಯ ಗದ್ದುಗೆ ಒಯ್ಯಲಾಗುವುದು ನಂತರದ 4 ದಿನಗಳಲ್ಲಿ ಸಂಪೂರ್ಣವಾದ ಮೂರ್ತಿ ನಿರ್ಮಿಸಿ ಮಂಗಳವಾರದಂದು ರಾತ್ರೆ ದೇವಿಗೆ ವಿಷೇಶವಾಗಿ ಸಿಂಗರಿಸಿ ಸವಾಸಿನಿ ಪೂಜೆಯನ್ನು ಮಾಡುವುದು ಆಚಾರ್ಯ ಮನೆತನದರು ಅನಾದಿಕಾಲದಿಂದ ನಡೆಸಿಕೊಂಡು ಬಂದ ಪದ್ಧತಿಯಾಗಿದೆ. ಮಾರನೇ ದಿನ ಬುಧವಾರ ಬೆಳಗಿನ ಜಾವದ ಪೂಜೆಯನ್ನು ಪೂರೈಸಿ ನಂತರ ಮಾರಿಕಾಂಬಾ ದೇವಸ್ಥಾನದ ಆಡಳಿತ ಮಂಡಳಿಗೆ ದೇವಿಯ ಮೂರ್ತಿಯನ್ನು ಹಸ್ತಾಂತರಿಸುವ ಕಾರ್ಯಕ್ರಮ ನಡೆಯುವುದು ಎಂದರು.

ಈ ಸಂಧರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಪರಮೇಶ್ವರ ನಾಯ್ಕ, ಸುರೇಂದ್ರ ಭಟ್ಕಳಕರ, ಸುರೇಶ ಆಚಾರ್ಯ, ಶಂಕರ ಶೆಟ್ಟಿ ಸೇರಿದಂತೆ ಆಚಾರ್ಯರ ಮನೆ ಸದಸ್ಯರು, ಮರ ತುಂಡರಿಸಿ ಕೊಡುವ ಮುಣ್ಕುಳಿಯ ಮಾರುತಿ ನಾಯ್ಕರ ಕುಟುಂಬದ ಸದಸ್ಯರು, ಸೇರಿದಂತೆ ಸ್ಥಳಿಯರು ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top