ಭಟ್ಕಳದಲ್ಲಿ ಸಡಗರ ಸಂಭ್ರಮದ ಬಕ್ರೀದ್ ಆಚರಣೆ

ದೇವನ ಮೇಲಿನ  ಪ್ರೀತಿಯ ಬೇಡಿಕೆ ಎಂದು ಸಮಸ್ತ ಮಾನವ ಕುಲವನ್ನು ಪ್ರೀತಿಸುವುದಾಗಿದೆ-ಮೌಲಾನ ಜಾಫರ್ ನದ್ವಿ

ಭಟ್ಕಳ: ಪ್ರವಾದಿ ಇಬ್ರಾಹೀಮ್ ಮತ್ತು ಪ್ರವಾದಿ ಇಸ್ಮಾಯಿಲ್ ರ ಸ್ಮರಣಾರ್ಥ ಜಗತ್ತಿನಾದ್ಯಂತ ಆಚರಿಸಲ್ಪಡುವ ತ್ಯಾಗಬಲಿದಾನಗಳ ಪ್ರತೀಕವಾದ ಈದುಲ್ ಆದ್ಹಾ (ಬಕ್ರೀದ್ ಹಬ್ಬ) ಭಾನುವಾರ ಮಳೆಯ ಕಾರಣ ಇಲ್ಲಿವ ವಿವಿಧ ಜಾಮಿಯಾ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸುವುದರ ಮೂಲಕ ಅತ್ಯಂತ ಸಡಗರ ಸಂಭ್ರದಿAದ ಆಚರಿಸಲಾಯಿತು. 

ಕಾರಗದ್ದೆಯ ಹುರುಳಿಸಾಲ್ ನಲ್ಲಿರುವ ಆಹ್ಮದ್ ಸಯೀದ್ ಜಾಮಿಯಾ ಮಸೀದಿಯಲ್ಲಿ ಈದುಲ್ ಅದ್ಹಾ(ಬಕ್ರೀದ್ ಹಬ್ಬ) ವಿಶೇಷ ಪ್ರಾರ್ಥನೆ ಸಲ್ಲಿಸಿ ಈದ್ ಸಂದೇಶ  ನೀಡಿದ ಆಹ್ಮದ್ ಸಯೀದ್ ಜಾಮಿಯಾ ಮಸೀದಿಯ ಇಮಾಮ್ ಮತ್ತು ಖತೀಬ್ ಮೌಲಾನ ಮುಹಮ್ಮದ್ ಜಾಫರ್ ಫಖ್ಖಿಭಾವ್ ನದ್ವಿ, ಅಲ್ಲಾಹನನ್ನು ಪ್ರೀತಿಸುವ ಬೇಡಿಕೆಯಂದರೆ ಮನುಷ್ಯಮನುಷ್ಯರನ್ನು ಪ್ರೀತಿಸುವುದಾಗಿದೆ. ಮನುಷ್ಯರ ಸೇವೆಯಿಂದ ದೇವನು ಸಂತುಷ್ಟನಾಗುತ್ತಾನೆ ಎಂದು ಹೇಳಿದರು. ಪತ್ನಿಯೊರೊಂದಿಗೆ, ಪುತ್ರರೊಂದಿಗೆ ತನ್ನ ಆಧೀನ ಇರುವ ಎಲ್ಲರೊಂದಿಗೆ ಸದ್ವರ್ತನೆ ತೋರುವುದು ಕೂಡ ದೇವನ ಮೇಲಿನ ಪ್ರೀತಿಯ ದ್ಯೋತಕವಾಗಿದೆ. ತನ್ನ ಸಹೋದರನಿಗೆ ನಷ್ಟ ಮತ್ತು ಹಾನಿಯುಂಟು ಮಾಡಿ ತಾವು ಸುಖದಿಂದ ಇರುತ್ತೇನೆ ಎಂದು ಭಾವಿಸುವವರು ದೇವನ ಕ್ರೋಧಕ್ಕೆ ಪಾತ್ರರಾಗುತ್ತಾರೆ. ಹಸಿದವನಿಗೆ ಉಣಿಸುವುದು, ಉಡುಪು ಇಲ್ಲದವರಿಗೆ ಉಡುಪನ್ನು ಕೊಡುವುದು, ರೋಗಿಯನ್ನು ಸಂದರ್ಶಿಸುವುದು, ಸಮಾಜದಲ್ಲಿ ಶಾಂತಿಯಟು ಮಾಡುವಲ್ಲಿ ಪ್ರಯತ್ನಿಸುವುದು ಇವೆಲ್ಲವೂ ಕೂಡ ದೇವನ ಪ್ರೀತಿಯೆ ಆಗಿದೆ. ಏಕೆಂದರೆ ದೇವನುÀ ಶಾಂತಿಯನ್ನು ಬಯಸುತ್ತಾನೆ. ದೇಶದ ಕಾನೂನು ಪಾಲಿಸುವುದು ಕೂಡ ದೇವನ ಮೇಲಿನ ಪ್ರೀತಿಯೆ ಆಗಿದೆ. ನೆರೆಹೊರೆಯವರನ್ನು ಪ್ರೀತಿಸುವುದು, ಅವರಿಗೆ ಯಾವುದೇ ತೊಂದರೆಯನ್ನು ನೀಡದೆ ಇರುವುದು, ಸಮಾಜದಲ್ಲಿ ಎಲ್ಲರೊಂದಿಗೆ ಉತ್ತಮವಾಗಿ ವರ್ತಿಸುವುದು ಇವೆಲ್ಲವೂ ಕೂಡ ಇಸ್ಲಾಮ್ ಧರ್ಮದ ಆಚರಣೆಯ ಒಂದು ಭಾಗವಾಗಿದೆ. ಅಲ್ಲಾಹನ ಮತ್ತು ಅಲ್ಲಾಹನ ದಾಸರ ಹಕ್ಕುಗಳನ್ನು ಪಾಲಿಸುವುದು ನಮ್ಮೆಲ್ಲ ಕರ್ತವ್ಯವಾಗಿದೆ ಎಂದರು. ಜಾಮಿಯಾ ಮಸೀದಿಯಲ್ಲಿ(ಚಿನ್ನದಪಳ್ಳಿ) ಮೌಲಾನ ಅಬ್ದುಲ್ ಅಲೀಮ್ ಖತೀಬಿ ನದ್ವಿ, ಖಲಿಫಾ ಜಾಮಿಯಾ ಮಸೀದಿಯಲ್ಲಿ (ಗುರುಗಳ ಪಳ್ಳಿ) ಮೌಲಾನ ಕ್ವಾಜಾಮೊಹಿದ್ದೀನ್ ಅಕ್ರಮಿ ಮದನಿ ನದ್ವಿ ಈದ್ ಪ್ರಾರ್ಥನೆ ನೆರವೇರಿಸಿ ಸಂದೇಶ ನೀಡಿದರು. ವಿವಿಧ ಗಣ್ಯರಿಂದ ಈದ್ ಶುಭಾಶಯ: ತಂಝೀಮ್ ಸಂಸ್ಥೆಯ ಅಧ್ಯಕ್ಷ ಪರ್ವೇಝ್ ಎಸ್.ಎಂ., ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ., ಭಟ್ಕಳ ಮುಸ್ಲಿಮ್ ಯುತ್ ಫೆಡರೇಶನ್ ಅಧ್ಯಕ್ಷ ಮೌಲಾನ ಅಝೀಝರ‍್ರಹ್ಮಾನ್ ರುಕ್ನುದ್ದೀನ್ ನದ್ವಿ, ಜೆ.ಡಿ.ಎಸ್. ಮುಖಂಡ ಇನಾಯತುಲ್ಲಾ ಶಾಬಂದ್ರಿ, ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಇಂಜಿನೀಯರ್ ನಝೀರ್ ಆಹ್ಮದ್ ಖಾಝಿ, ಜಮಿಯಾ ಇಸ್ಲಾಮಿಯಾ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಮೌಲಾನ ಮಖ್ಬೂಲ್ ಆಹ್ಮದ್ ಕೋಬಟ್ಟೆ ನದ್ವಿ, ಅಂಜುಮನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕಾಝೀಯಾ ಮುಹಮ್ಮದ್ ಮುಝಮ್ಮಿಲ್, ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಇಸ್ಮಾಯಿಲ್, ಇಸ್ಲಾಮಿಕ್ ವೆಲ್ಫೇ ಸೂಸೈಟಿಯ ಕಾದಿರ್ ಮೀರಾ ಪಟೇಲ್, ಆಲ್ ಇಂಡಿಯಾ ಐಡಿಯಲ್ ಟೀರ‍್ಸ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಮುಹಮ್ಮದ್ ರಝಾ ಮಾನ್ವಿ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉತ್ತರಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಸೀಫ್ ಶೇಖ್, ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ತೌಸೀಫ್ ಬ್ಯಾರಿ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳ, ಸಂಘಸ0ಸ್ಥೆಗಳ ಮುಖಂಡರು ನಾಡಿನ ಸಮಸ್ತ ಜನತೆಗೆ ಈದ್ ಶುಭಾಶಯ ಕೋರಿದ್ದಾರೆ.

WhatsApp
Facebook
Telegram
error: Content is protected !!
Scroll to Top