ಭಟ್ಕಳ ಮುಂಡಳ್ಳಿಯಲ್ಲಿ ಅಕ್ರಮ ಗೋ ಸಾಗಾಟ : ಪ್ರಕರಣ ದಾಖಲಿಸಿದ ಗ್ರಾಮಿಣ ಪೊಲಿಸ್ ಠಾಣೆ

ಭಟ್ಕಳ ತಾಲೂಕಿನ ಮುಂಡಳ್ಳಿಯಲ್ಲಿ ಅಕ್ರಮವಾಗಿ ಗೊ ಸಾಗಟ ಮಾಡುವ ಸಂದರ್ಬದಲ್ಲಿ ನಿಕರ ಮಾಹಿತಿ ಮೆರೆಗೆ ಗ್ರಾಮಿಣ ಪೋಲಿಸ್ ಠಾಣಾ ಅಧಿಕಾರಿಗಳು ದಾಳಿ ನಡೆಸಿ ಒರ್ವ ಆರೋಪಿಯನ್ನು ಬಂದಿಸಿದ್ದು ಇನ್ನೊರ್ವ ಆರೋಪಿ ಪರಾರಿಯಾಗಿರುವುದು ವರದಿಯಾಗಿದೆ

ರಾಜ್ಯದಲ್ಲಿ ಗೊ ಹತ್ಯಾ ಕಾನೂನು ಜಾರಿಯಲ್ಲಿದ್ದು ಈ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದರು ಈ ಗೊ ಕಳ್ಳರು ಮಾತ್ರ ತಮಗೂ ಈ ಕಾನೂನಿಗೂ ಸಂಬಂದವೆ ಇಲ್ಲವೆನೊ ಎಂಬಂತೆ ಅವ್ಯಾಹತವಾಗಿ ಹತ್ಯ ಮಾಡುವ ಉದ್ದೇಶದಿಂದ ಗೊ ಕಳ್ಳತನ ಮಾಡಿ ಕಸಾಯಿ ಖಾನೆಗಳಿಗೆ ಸಾಗಾಟ ಮಾಡುತ್ತಲೆ ಇದ್ದಾರೆ ಇದಕ್ಕೆ ಒಂದು ಉತ್ತಮ ಉದಾಹರಣೆ ಎಂದರೆ ತಾಲೂಕಿನ ಮುಂಡಳ್ಳಿಯಲ್ಲಿ ಹಿಂದೂ ಧರ್ಮಕ್ಕೆ ಸೇರಿದ ಇಬ್ಬರು ವ್ಯಕ್ತಿಗಳು ಹತ್ಯೆ ಮಾಡುವ ಉದ್ದೇಶದಿಂದ ಅಕ್ರಮ ಕಾನೂನಿ ಭಾಹಿರವಾಗಿ ಗೊ ಸಾಗಾಟ ನಡೆಸಿರುವುದು .

ಮುಂಡಳ್ಳಿಯಲ್ಲಿ ನಾಗಪ್ಪ ಬೆರ್ಮ ನಾಯ್ಕ ಮತ್ತು ಗೋವಿಂದ ಲಚ್ಚಯ್ಯ ನಾಯ್ಕ ಎಂಬ ವ್ಯಕ್ತಿಗಳಿಬ್ಬರು ಕಪ್ಪು ಬಣ್ಣದ ಎರಡು ಕೊಣಗಳನ್ನು ಹತ್ಯೆಯ ಉದ್ದೇಶದಿಂದ ಸಾಗಿಸುತ್ತಿರುವ ಖಚಿತ ಮಾಹಿತಿಯ ಮೇರೆಗೆ ಏಕಾಏಕಿ ದಾಳಿ ನಡೆಸಿ ಎರಡು ಕೋಣಗಳನ್ನು ವಶಕ್ಕೆ ಪಡೆದಿದ್ದು ನಾಗಪ್ಪ ಬೆರ್ಮು ನಾಯ್ಕ ಎಂಬಾತನನ್ನು ಬಂದಿಸಿದ್ದರೆ ಗೋವಿಂದ ಲಚ್ಚಯ್ಯ ನಾಯ್ಕ ಎಂಬಾತ ಪರಾರಿಯಾಗಿದ್ದಾನೆ ಇಲ್ಲಿ ಮುಖ್ಯವಾಗಿ ಗೊ ಸಾಗಾಟ ಮಾಡುತ್ತಿರುವ ವ್ಯಕ್ತಿಗಳು ಹಿಂದೂ ಧರ್ಮಿಯರು ಎಂಬುವುದು ಗಮನಾರ್ಹ ಸಂಗತಿಯಾಗಿದೆ ಮುಸ್ಲೀಂ ಧರ್ಮಿಯರಾದರೆ ತಿನ್ನುವ ಉದ್ದೇಶದಿಂದ ಗೊ ಕಳ್ಳತನ ಮಾಡಿ ಸಾಗಾಟ ಮಾಡುತ್ತಾರೆ ಅದರೆ ಈ ಹಿಂದೂಧರ್ಮಿಯ ವ್ಯಕ್ತಿಗಳು ಗೊ ಸಾಗಾಟ ಮಾಡುವ ಉದ್ದೇಶವೇನು ಕೆವಲ ಹಣದಾಸೆಗೆ ಹಿಂದೂ ಧರ್ಮದ ಪೂಜನಿಯ ಗೋ ಮಾತೆಯನ್ನು ಹತ್ಯೆ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಾರೆ ಎಂದರೆ ಇವರಿ ಗೊ ಮಾತೆಯ ಮೇಲಿರುವ ಭಕ್ತಿ ಭಾವ ಆಗ ಎಲ್ಲಿ ಹೋಯಿತು

ಒಂದು ಮಾಹಿತಿಯ ಪ್ರಕಾರ ಇಲ್ಲಿ ವಶ ಪಡಿಸಿಕೊಂಡಿರುವ ಗೊವುಗಳು ತಾಲೂಕಿನ ಮುಟ್ಟಳ್ಳಿಯಿಂದ ಹಿಂದೂ ಯುವಕರಿಬ್ಬರು ಮುಂಡಳ್ಳಿಗೆ ಸಾಗಾಟ ನಡೆಸಿದ್ದರು ಎಂದು ತಿಳಿದು ಬಂದಿದೆ ಈ ಯುವಕರು ವೃತ್ತಿಯಲ್ಲಿ ರಿಕ್ಷಾ ಚಾಲಕರು ಎಂಬ ಮಾಹಿತಿಯು ಕೂಡಾ ತಿಳಿದು ಬಂದಿದೆ ಈ ಬಗ್ಗೆ ಪೊಲಿಸ್ ಇಲಾಖೆ ಮಾಹಿತಿ ಕಲೆಹಾಕುತ್ತಿದೆ ಎಂಬ ಮಾತುಗಳು ತಾಲೂಕಿನಲ್ಲಿ ಕೇಳಿಬರುತ್ತಿದೆ ಒಟ್ಟಾರೆ ತಾಲೂಕಿನಲ್ಲಿ ಅಕ್ರಮ ಗೋ ಸಾಗಾಟ ಮಾಡುವವರು ಕೇವಲ ಮುಸ್ಲಿಂ ಧರ್ಮಕ್ಕೆ ಸೇರಿದವರಷ್ಟೇ ಅಲ್ಲ ಗೊ ಕಳ್ಳರಲ್ಲಿ ಹಿಂದೂ ಧರ್ಮದ ಕೆಲವು ಧರ್ಮ ದ್ರೋಹಿಗಳು ಕೂಡ ಸೇರಿಕೊಂಡಿದ್ದಾರೆ ಎಂಬುವುದನ್ನು ನಮ್ಮ ಹಿಂದೂ ಧರ್ಮದ ಸಂಘಟನೆ ಹಾಗು ಧರ್ಮದ ಮುಖಂಡರು ಅರಿತುಕೊಂಡು ಕ್ರಮಕ್ಕೆ ಮುಂದಾಗ ಬೇಕು ಎನ್ನುವುದು ಸಾರ್ವಜನಿಕರ ಕಳಕಳಿಯಾಗಿದೆ

ಅಕ್ರಮ ಗೋ ಸಾಗಾಟದ ಪ್ರಕರಣ ಭಟ್ಕಳ ಗ್ರಾಮಿಣ ಪೋಲಿಸ್ ಠಾಣೆಯಲ್ಲಿ ದಾಖಲಾಗಿದ್ದು ತನಿಖೆ ಮುಂದುವರಿದಿದೆ

WhatsApp
Facebook
Telegram
error: Content is protected !!
Scroll to Top