ಭಟ್ಕಳದ ಪುರಸಭೆಯ  ಉರ್ದು ಬೋರ್ಡ  ವಿವಾದವನ್ನು ರಾಜಕಿಯ ದಾಳವನ್ನಾಗಿಸುವ  ಷಡ್ಯಂತ್ರ

ಎರಡು ಕೋಮುಗಳ ಮದ್ಯ ಬೆಂಕಿ ಹತ್ತಿಸುವ ಪ್ರಯತ್ನ ನಡೆಸಲಾಗುತ್ತಿದೆಯೆ?

ಭಟ್ಕಳ ಪುರಸಭಾ ಉರ್ದು ಬೊರ್ಡ ವಿವಾದಕ್ಕೆ ಪುರಸಭಾ ಅಧ್ಯಕ್ಷ ಪರ್ವೆಜ್ ಕಾಶಿಮ್ ಹಿಟ್ಲರ್ ಮಾದರಿ ಆಡಳಿತ ವ್ಯವಸ್ಥೆಯೆ ಕಾರಣವಾಯಿತೆ?

ಭಟ್ಕಳ : ತಾಲೂಕ  ಪುರಸಭೆಗೆ ಉರ್ದು ಬೊರ್ಡ ಅಳವಡಿಸಲಾಗಿದ್ದು ಇದನ್ನು ವಿರೋದಿಸಿ ಕನ್ನಡ ಪರ ಹಾಗು ಹಿಂದೂ ಪರ ಸಂಘಟನೆಗಳು ತಿವ್ರವಾಗಿ  ವಿರೋದಿಸುತ್ತಿದ್ದು  ಭಟ್ಕಳ ಬೂದಿ ಮುಚ್ಚಿದ ಕೆಂಡದಂತೆ ಪರಿವರ್ತನೆಯಾಗಿದ್ದು ಉರ್ದು ಬೊರ್ಡವಿವಾದ ಭಟ್ಕಳದಲ್ಲಿ ರಾಜಕಿಯ ದಾಳವಾಗಿ ಪರಿವರ್ತನೆಯಾಗಿದೆ ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ

ಭಟ್ಕಳ ತಾಲೂಕು ಸೂಕ್ಷ್ಮ ಪ್ರದೇಶವಾಗಿರುವುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ ಇಲ್ಲಿ ಯಾವಾಗಲು  ಒಂದಿಲ್ಲೊಂದು ವಿವಾದಗಳು ಹುಟ್ಟಿಕೊಳ್ಳುತ್ತಲೆ ಇರುತ್ತದೆ.  ನಾಗಭನ ವಿವಾದ , ಮಾಸ್ತಿ ಕಟ್ಟೆ   ,  ಗೊ ಸಾಗಣೆ ಒಂದೆ ಎರಡೆ   ಭಟ್ಕಳದ ಸುತ್ತ ವಿವಾದಗಳು ಸುತ್ತುತ್ತಲೆ ಇರುತ್ತದೆ ಇವುಗಳ ಮಧ್ಯ ಕೆಲವು ರಾಜಕಾರಣಿಗಳು ಜನ ಪ್ರತಿನಿದಿಗಳು ಎನಿಸಿಕೊಂಡಿರುವವರು ವಿವಾದ ಬಗೆ ಹರಿಸುವ ಬದಲು  ಈ ವಿವಾದಕ್ಕೆ ತುಪ್ಪ ಸುರಿಯುವ ಕೆಲಸ ಯಾವಾಗಲು ಮಾಡುತ್ತಲೆ ಬರುತ್ತಾರೆ

ಈ ನೊಡಿದರೆ ಭಟ್ಕಳ ಪುರಸಭಾ ಅಧ್ಯಕ್ಷ ಪರ್ವೆಜ್ ಕಾಶಿಮ್ ಭಟ್ಕಳ ಪುರಸಭೆಗೆ ಉರ್ದು ಬೋರ್ಡ ಅಳವಡಿಸಿ ಮತ್ತೊಂದು ವಿವಾದವನ್ನು ಹುಟ್ಟುಹಾಕಿದ್ದಾರೆ ಕಾರಣ ಭಟ್ಕಳ ಮತ್ತೊಂದು ಕೊಮುದಳ್ಳುರಿಯಲ್ಲಿ ಹೊತ್ತಿಉರಿಯುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ.  ಈ ಬಗ್ಗೆ ಕಂದಾಯ ಇಲಾಖೆ ಪ್ರಶ್ನೆ ಮಾಡಿದರೆ ಪುರಸಭೆ ವಿಷಯದ ಬಗ್ಗೆ ಕಂದಾಯ ಇಲಾಖೆ ಪ್ರಶ್ನೇ ಮಾಡುವಂತಿಲ್ಲಾ ಪುರಸಭೆ ನಮಗೆ ಸೇರಿದ್ದು ಎಂಬ ಉಡಾಪೆಯ ಮಾತನ್ನಾಡುತ್ತಾರೆ  ಹಾಗಾದರೆ  ಪುರಸಭೆ ಪರ್ವೇಜ್ ಕಾಶಿಮ್ ಅವರ ಪಿತ್ರಾರ್ಜಿತ ಆಸ್ತಿಯ ಇವರು ತೆಗೆದುಕೊಳ್ಳುವ ನಿರ್ದಾರದಿಂದ ಭಟ್ಕಳದಲ್ಲಿ ಕೊಮು ಗಲಭೆಗಳು ಪ್ರಾರಂಬವಾದರೆ ಅದಕ್ಕೆ ಕಾರಣ ಯಾರು ಕೊಮುಗಲಬೆಯನ್ನು ನಿಲ್ಲಿಸಲು ಪುರಸಭಾ ಅಧ್ಯಕ್ಷ ಪರ್ವೇಜ್ ಕಾಶಿಮ್ ಬಂದು ನಿಲ್ಲುತ್ತಾರಾ ಅಥವಾ ಪರ್ವೇಜ್ ಕಾಶಿಮ್ ಅವರ ಖಾಸಗಿ ಪೊಲಿಸ್ ಪಡೆಗಳ ಮೂಲಕ  ಕೊಮುಗಲಭೆ  ನಿಲ್ಲಿಸುತ್ತಾರಾ ಮಾತೆತ್ತಿದರೆ ಎಲ್ಲಾ ನನಗೆ ಗೊತ್ತು ಪುರಸಭೆ ಅಧ್ಯಕ್ಷ ನಾನು ನನಗೆ ಏನು ನಿರ್ದಾರ ಮಾಡಬೇಕು ಎಂಬ ಉಡಾಪೆಯ ಮಾತನ್ನು ಹೇಳುತ್ತಾರೆ  ಯಾಕೆ ಪುರಸಭಾ ಅಧ್ಯಕ್ಷರು ಪ್ರಶ್ನಾತೀತರ ಪುರಸಭೆ ಕರ್ನಾಟಕ ಸರಕಾರದ ಒಂದು  ಬಾಗವಲ್ಲವಾ ಪುರಸಭೆ ಪರ್ವೇಜ್ ಕಾಶಿಮ್  ಅವರ ಪಿತ್ರಾರ್ಜಿತ ಆಸ್ತಿಯಾ ಎಂದು ಕನ್ನಡ ಪರ ಸಂಘಟನೆ ಹಾಗು‌ ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತ ಪಡಿಸುತ್ತಿದೆ.

ಇನ್ನೊಂದು ಕಡೆ ನಮ್ಮ  ಶಾಸಕರೆನ್ನಿಸಿಕೊಂಡ ಸುನಿಲ್ ನಾಯ್ಕ ಇವರ ವರೆಸೆಯೆ ಬೇರೆ ಎರಡು ದಿನಗಳ ಒಳಗೆ ಉರ್ದು ಬೊರ್ಡ ತೆರವುಗೊಳಿಸದಿದ್ದಲ್ಲಿ ತಾನು ಕಾರ್ಯಕರ್ತರೊಂದಿಗೆ ಹೊರಾಟಕ್ಕೆ ಇಳಿಯುತ್ತೆನೆ ಎಂಬ ಹೇಳಿಕೆಯನ್ನು ನೀಡುತ್ತಾರೆ ಇದೆಂತಾ ಹಾಸ್ಯಾಸ್ಪದ ಸ್ವಾಮಿ ಕೆಂದ್ರದಲ್ಲಿ ಸರಕಾರ ನಿಮ್ಮದೆ ರಾಜ್ಯದಲ್ಲಿ ಸರಕಾರ ಕೂಡಾ ನಿಮ್ಮದೆ  ಯಕಶ್ಚಿತ್ ಒಂದು ಉರ್ದು ಬೊರ್ಡ ತೆರವುಗೊಳಿಸಲು ನೀವು ಹೊರಾಟಕ್ಕೆ ಇಳಿಯಬೇಕಾ ನೀವು ಈಗ ಬೆಂಗಳೂರಿನಲ್ಲಿದ್ದಿರಾ ಎಂದು ನಮಗೆ ಗೊತ್ತು ಆದರೆ  ನಿಮ್ಮಲ್ಲಿ ಜಿಲ್ಲಾಧಿಕಾರಿಗಳದ್ದಾಗಲಿ ತಾಲೂಕ ಸಹಾಯಕ ಆಯುಕ್ತರದ್ದಾಗಲಿ ದೂರವಾಣಿ ಸಂಖ್ಯೆಗಳಿಲ್ಲವಾ ತಾವು ಅವರಿಗೆ ಕರೆ ಮಾಡಿ  ಕನ್ನಡ ಬೊರ್ಡ ಹೊರತು ಪಡಿಸಿ ಬೇರೆ ಬೊರ್ಡಗಳನ್ನು ಹಾಕುವಂತಿಲ್ಲಾ ಇದು ಕನ್ನಡಮ್ಮನಿಗೆ ಬಗೆಯುವ ದ್ರೋಹವಾಗಿದೆ ಕೂಡಲೆ ಉರ್ದು ಬೊರ್ಡ ತೆರವುಗೊಳಿಸಿ ಇಲ್ಲವಾದಲ್ಲಿ ನಿಮ್ಮ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುದು  ಎಂದು  ಖಡಕ್ ಆಗಿ ಹೇಳಿದರೆ ಅಧಿಕಾರಿಗಳು ಉರ್ದು ಬೊರ್ಡ ತೆರವುಗೊಳಿಸುವುದಿಲ್ಲವೆ ನಿಮಗೆ ನಿಜವಾಗಿ ಈ ವಿವಾದ ಬೇಗ ಬಗೆಹರಿಯಬೇಕು ಎಂಬ ಮನಸ್ಸಿದೆಯೆ ಮತದಾರರು ನಿಮ್ಮನ್ನು ಕ್ರೇತ್ರದಲ್ಲಿ ಅಭಿವೃದ್ದಿ ಕೆಲಸ ಮಾಡಲಿ ಎಂದು ಆರಿಸಿ ಕಳಿಸಿದ್ದಾರೋ ಅಥವಾ ತಾವು ಕೇವಲ ಒಂದು ಉರ್ದು ಬೊರ್ಡಿಗಾಗಿ ಪ್ರತಿಭಟನೆ ಮಾಡಲಿ ಎಂದು ಆರಸಿಕಳಿಸಿದ್ದಾರೋ ಎಂದು ಸಾರ್ವಜನಿಕರು ಆಕ್ರೊಶದಿಂದ ಪ್ರಶ್ನೇಯನ್ನು ಮಾಡುತ್ತಿದ್ದಾರೆ

ಒಟ್ಟಾರೆ ಭಟ್ಕಳದಲ್ಲಿ ಈ ರಾಜಕಿಯ ದೋಂಬರಾಟದ ಕಾರಣ ಭಟ್ಕಳಿಗರಿಗೆ ನೆಮ್ಮದಿಯೆ ಇಲ್ಲದಂತಾಗಿದೆ ಈ ರಾಜಕಾರಣಿಗಳು ಜನ ಪ್ರತಿನಿಗಳೆನ್ನಿಸಿ ಕೊಂಡವರಿಗೆ ಯಾವುದಾದದರು ವಿವಾದಗಳು ಭಟ್ಕಳದಲ್ಲಿ ಜೀವಂತವಾಗಿರಲೆಬೇಕು ಇಲ್ಲವಾದರೆ ಅವರಿಗೆ ರಾಜಕಾರಣ ಮಾಡಲು ಸಾಧ್ಯವಿಲ್ಲಾ ಯಾಕೆಂದರೆ ಕ್ಷೇತ್ರದಲ್ಲಿ ಇವರು ಮಾಡಿರುವ ಅಭಿವೃದ್ದಿ ಶೂನ್ಯ ಇಂಥಹ ವಿವಾದಗಳನ್ನು ಮುಂದಿಟ್ಟುಕೊಂಡು ಅದಕ್ಕಿಷ್ಟು ತುಪ್ಪ ಸುರಿದು ತಮ್ಮ ಬೆಳೆಯನ್ನು ಬೇಯಿಸಿಕೊಳ್ಳುತ್ತಾರೆ

ಮುಖ್ಯವಾಗಿ ಭಟ್ಕಳದಲ್ಲಿ ಈಗ ಉರ್ದು ಬೊರ್ಡ ವಿವಾದದಲ್ಲಿ ಒಂದು ಕಡೆ ಮುಸ್ಲಿಮರಿಗೆ ಬೊರ್ಡ ತೆಗೆಯಲೆ ಬೇಡಿ ಎಂದು ಇನ್ನೊಂದು ಕಡೆ ಹಿಂದೂಗಳಿಗೆ ಹಾಗು ಹಿಂದೂ ಪರ ಸಂಘಟನೆಗಳಿಗೆ ಬೋರ್ಡ ತೆರವುಗೊಳಿಸದೆ ಮಿಶ್ರಮಿಸಬೇಡಿ ಎಂಬ ಮಾತನ್ನು ಹೇಳಿ ಭಟ್ಕಳ ಹೊತ್ತಿ ಉರಿಯುವಂತೆ ಮಾಡಿ ತಮ್ಮ ರಾಜಕಿಯ ದಾಳಗಳನ್ನು ಉರುಳಿಸುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ ಆದರೆ ನಮ್ಮ ಸಾರ್ವಜನಿಕರು ಮುಟ್ಟಾಳರಲ್ಲಾ ಮುಂದಿನ ದಿನಗಳಲ್ಲಿ ನಿಮ್ಮಂತವರಿಗೆ ಸರಿಯಾದ ಪಾಠವನ್ನೆ ಕಲಿಸುತ್ತಾರೆ ನಿಮ್ಮ ಎಲ್ಲಾ ನವರಂಗಿ ಆಟಗಳನ್ನು ಸಾರ್ವಜನಿಕರು ನೊಡುತ್ತಲೆ ಬರುತ್ತಿದ್ದಾರೆ ನಿಮ್ಮ ಈ ಸ್ವಾರ್ಥ ರಾಜಕಾರಣ ಹೆಚ್ಚು ದಿನ ನಡೆಯಲಾರದು ಎಂಬುವುದು ಪ್ರಜ್ಞಾವಂತ ನಾಗರಿಕರ ಮಾತಾಗಿದೆ

WhatsApp
Facebook
Telegram
error: Content is protected !!
Scroll to Top